Karnataka Budget 2023: ಸರ್ಕಾರ 85 ಸಾವಿರ ಕೋಟಿ ಸಾಲ ಎತ್ತೋಕೆ ರೆಡಿಯಾಗಿದೆ: ಎಚ್‌ಡಿಕೆ

Jul 7, 2023, 8:45 PM IST

ಬೆಂಗಳೂರು (ಜು.7): ಬಜೆಟ್‌ನಲ್ಲಿ ಹಿಂದಿನ ಸರ್ಕಾರದ ಬಗ್ಗೆ ಟೀಕೆ ಮಾಡುವ ಸಿದ್ಧರಾಮಯ್ಯ ಅವರಿಗೆ ಒಂದು ನೆನಪಿಡಬೇಕು, ನಮ್ಮ ಜನ ರಾಜ್ಯದ ಖಜಾನೆಯನ್ನ ಈಗಾಗಲೇ ಯಾವುದೇ ಶ್ರಮವಿಲ್ಲದೆ ತುಂಬಿಸಿ ಇಟ್ಟಿದ್ದಾರೆ. ಕೋವಿಡ್‌ ಸಮಯದಲ್ಲೂ ವಾಣಿಜ್ಯ ತೆರಿಗೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹಾಘೂ ಅಬಕಾರಿ ತೆರಿಗೆಯಲ್ಲಿ ದಾಖಲೆ ಮಟ್ಟದ ಸಂಗ್ರಹವಾಗಿದೆ.

ಈ ಎಲ್ಲದರ ನಡುವೆ ಸರ್ಕಾರ ಈಗಾಗಲೇ 85 ಸಾವಿರ ಕೋಟಿ ಸಾಲವನ್ನು ಎತ್ತೋದಾಗಿ ಘೋಷಣೆ ಮಾಡಿದೆ. ಸರ್ಕಾರದ ಯಾವುದೇ ಪ್ರಯತ್ನವಿಲ್ಲದೆ, ರಾಜ್ಯದ ಜನತೆ ಇಲ್ಲಿನ ಖಜಾನೆ ತುಂಬಿಸಿದ್ದಾರೆ. ಎಲ್ಲೂ ಕೂಡ ತೆರಿಗೆಯನ್ನು ಏರಿಕೆ ಮಾಡಿರಲಿಲ್ಲ ಎಂದು ಹೇಳಿದ್ದಾರೆ.

ಷರತ್ತುಗಳ ಹೆಸರಲ್ಲಿ ಒಂದು ವರ್ಗಕ್ಕೆ ಕೊಟ್ಟು ಇನ್ನೊಂದು ವರ್ಗಕ್ಕೆ ಟೋಪಿ ಹಾಕಿದ ಸರ್ಕಾರವಿದು: ಎಚ್‌ಡಿಕೆ ಕಿಡಿ

ಈ ವರ್ಷ ರಾಜ್ಯ ಸರ್ಕಾರ ವಾಣಿಜ್ಯ ತೆರಿಗೆಯಲ್ಲಿ 70 ಸಾವಿರ ಆದಾಯದ ನಿರೀಕ್ಷೆಯಲ್ಲಿತ್ತು. ಆದರೆ, ಜನ 1.2 ಸಾವಿರ ಕೋಟಿ ಹಣ ತುಂಬಿಸಿಕೊಟ್ಟಿದ್ದಾರೆ. ಅಬಕಾರಿ ಇಲಾಖೆಯಲ್ಲಿ 22 ಸಾವಿರ ಕೋಟಿ ನಿರೀಕ್ಷೆ ಇತ್ತು 32 ಸಾವಿರ ಕೋಟಿಗೆ ಏರಿಕೆಯಾಗಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲೂ 2-3 ಸಾವಿರ ಕೋಟಿ ತೆರಿಗೆ ಹೆಚ್ಚು ಬಂದಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.