ಎಸ್‌ಬಿಐನ ಸ್ಕೀಮ್‌ನಲ್ಲಿ ಒಮ್ಮೆ ಹಣ ಹೂಡಿದರೆ, ಪ್ರತಿ ತಿಂಗಳು ನಿಗದಿತ ಮೊತ್ತ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಹಿರಿಯ ನಾಗರಿಕರಿಗೆ ಇದು ಪಿಂಚಣಿಯಂತೆ ಅನುಕೂಲಕಾರಿ.
ಬೆಂಗಳೂರು: ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ತನ್ನ ಗ್ರಾಹಕರಿಗೆ ಹಲವು ಹಣಕಾಸಿನ ಉತ್ತಮ ಸೇವೆಗಳನ್ನು ನೀಡುತ್ತದೆ. ಎಸ್‌ಬಿಐ ಟರ್ಮ್ ಡೆಪಾಸಿಟ್ ಹೊರತಾಗಿಯೂ ಕೆಲವು ಸ್ಪೆಷಲ್ ಡೆಪಾಸಿಟ್ ಸ್ಕೀಂಗಳನ್ನು ಪರಿಚಯಿಸಿದೆ. ಈ ಸ್ಪೆಷಲ್ ಸ್ಕೀಂಗಳಲ್ಲಿ ಹಣ ಡೆಪಾಸಿಟ್ ಮಾಡೋದರಿಂದ ಉತ್ತಮ ಬಡ್ಡಿ ಗ್ರಾಹಕರಿಗೆ ಸಿಗುತ್ತದೆ. ಇಂದು ನಾವು ಹೇಳುತ್ತಿರುವ ಸ್ಕೀಂನಲ್ಲಿ ಒಮ್ಮೆ ಹಣ ಡೆಪಾಸಿಟ್ ಮಾಡಿದರೆ ಪ್ರತಿ ತಿಂಗಳು ಕೈ ತುಂಬಾ ಹಣ ನಿಮ್ಮ ಖಾತೆಗೆ ಜಮೆ ಆಗುತ್ತಿರುತ್ತದೆ.
ಇಂದು ನಾವು ನಿಮಗೆ ಎಸ್‌ಬಿಐ ಆನ್ಯುಟಿ ಡೆಪಾಸಿಟ್ ಸ್ಕೀಂ (SBI annuity deposit scheme) ಬಗ್ಗೆ ಹೇಳುತ್ತಿದ್ದೇವೆ. ಆನ್ಯುಟಿ ಡೆಪಾಸಿಟ್ ಸ್ಕೀಂನಲ್ಲಿ ಒಮ್ಮೆ ಹಣ ಹೂಡಿಕೆ ಅಥವಾ ಡೆಪಾಸಿಟ್ ಮಾಡಿದ್ರೆ ಪ್ರತಿ ತಿಂಗಳು ನಿಗಧಿತ ಮೊತ್ತವೊಂದು ನಿಮ್ಮ ಖಾತೆಗೆ ಕ್ರೆಡಿಟ್ ಆಗುತ್ತದೆ. ಹಿರಿಯ ನಾಗರೀಕರು ತಮ್ಮ ನಿವೃತ್ತಿ ಹಣವನ್ನು ಇಲ್ಲಿ ಹೂಡಿಕೆ ಮಾಡಿ ಮಾಸಿಕವಾಗಿ ಬಡ್ಡಿಯನ್ನು ಪಿಂಚಣಿ ಪಡೆಯುತ್ತಾರೆ. ಒಂದು ವೇಳೆ ಬಡ್ಡಿ ಮೊತ್ತ ಖಾತೆಯಲ್ಲಿಯೇ ಉಳಿದರೆ ಕಾಂಪೌಂಡಿಂಗ್ ಲೆಕ್ಕ ಹಾಕಲಾಗುತ್ತದೆ. ಎಸ್‌ಬಿಐ ವೆಬ್‌ಸೈಟ್ ಪ್ರಕಾರ, ಠೇವಣಿಗಳ ಮೇಲೆ ಅದೇ ಬಡ್ಡಿ ಲಭ್ಯವಿದೆ. ಇದು ಬ್ಯಾಂಕಿನ ಅವಧಿಯ ಠೇವಣಿಗಳಲ್ಲಿ ಅಂದರೆ ಎಫ್‌ಡಿಯಲ್ಲಿ ಲಭ್ಯವಿದೆ.
ಡೆಪಾಸಿಟ್ ಮಾಡಿದ ಮೊತ್ತದ ಮೇಲೆ ಬಡ್ಡಿಯನ್ನು ನೀಡಲಾಗುತ್ತದೆ. ಈ ಎಸ್‌ಬಿಐ ಆನ್ಯುಟಿ ಡೆಪಾಸಿಟ್ ಸ್ಕೀಂ 36, 60, 84 ಮತ್ತು 120 ತಿಂಗಳ ಆಯ್ಕೆಯನ್ನು ಗ್ರಾಹಕರಿಗೆ ನೀಡಲಾಗುತ್ತದೆ. ಗ್ರಾಹಕರು ತಮಗೆ ಬೇಕಾದ ಅವಧಿಯವರೆಗೆ ಹಣ ಡೆಪಾಸಿಟ್ ಮಾಡಬಹುದಾಗಿದೆ. ಈ ಯೋಜನೆಯಲ್ಲಿ ಕನಿಷ್ಠ 1,000 ರೂ. ಡೆಪಾಸಿಟ್ ಮಾಡಬೇಕಾಗುತ್ತದೆ. ಹಣ ಡೆಪಾಸಿಟ್‌ಗೆ ಯಾವುದೇ ಗರಿಷ್ಠ ಮಿತಿ ಇಲ್ಲ. ಎಸ್‌ಬಿಐನ ಎಲ್ಲಾ ಶಾಖೆಗಳಲ್ಲಿ ಈ ಸ್ಕೀಂ ಲಭ್ಯವಿದೆ.
ಭಾರತದಲ್ಲಿ 5000 ರೂ, 10000 ರೂ ನೋಟುಗಳು ನಿಷೇಧವಾಗಿದ್ದು ಯಾಕೆ?
ಹಣ ಡೆಪಾಸಿಟ್ ಮಾಡಿದ ಮುಂದಿನ ತಿಂಗಳಿನಿಂದಲೇ ಗ್ರಾಹಕರಿಗೆ ಬಡ್ಡಿ ಸಿಗುತ್ತದೆ. ತಿಂಗಳ 1ನೇ ತಾರೀಖಿನಂದು ಯಾವುದೇ ಅಡೆತಡೆಯಿಲ್ಲದೇ ಪ್ರತಿ ತಿಂಗಳು ಟಿಡಿಎಸ್ ಕಡಿತಗೊಳಿಸಿ ಸೇವಿಂಗ್ ಅಥವಾ ಕರೆಂಟ್ ಅಕೌಂಟ್‌ಗೆ ಬಡ್ಡಿಯ ಮೊತ್ತವನ್ನು ಜಮೆ ಮಾಡಲಾಗುತ್ತದೆ. ಸಾಮಾನ್ಯ ಗ್ರಾಹಕರು ಮತ್ತು ಹಿರಿಯ ನಾಗರೀಕರಿಗೆ ಪ್ರತ್ಯೇಕ ಬಡ್ಡಿದರಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡುತ್ತದೆ. ಆನ್ಯುಟಿ ಡೆಪಾಸಿಟ್ ಸ್ಕೀಂ ಅಡಿಯಲ್ಲಿ ಗ್ರಾಹಕರಿಗೆ ಯೂನಿವರ್ಸಲ್ ಪಾಸ್‌ಬುಕ್ ನೀಡಲಾಗುತ್ತದೆ. ಈ ಪಾಸ್‌ಬುಕ್ ಸಹಾಯದಿಂದ ಗ್ರಾಹಕರು ಬೇರೆ ಶಾಖೆಗಳಲ್ಲಿಯೂ ಸೇವೆಯನ್ನು ಪಡೆದುಕೊಳ್ಳಬಹುದು.
ಆನ್ಯುಟಿ ಡೆಪಾಸಿಟ್ ಸ್ಕೀಂ ಗ್ರಾಹಕರಿಗೆ ಅವಶ್ಯಕೆ ಇದ್ರೆ ನಿಮ್ಮ ಮೊತ್ತದ ಶೇ.75ರಷ್ಟು ಹಣವನ್ನು ಓವರ್ ಡ್ರಾಫ್ಟ್ ಅಥವಾ ಲೋನ್ ನೀಡುತ್ತದೆ. ಠೇವಣಿದಾರರು ಬಯಸಿದ್ರೆ ಅವಧಿಗೂ ಮುನ್ನವೇ ಸ್ಕೀಂನಿಂದ ಹೊರಬರಬಹುದು. 15 ಲಕ್ಷ ರೂ.ವರೆಗಿನ ಠೇವಣಿಗಳಿಗೂ ಪೂರ್ವ ಪಾವತಿ ಮಾಡಬಹುದು. ಎಫ್‌ಡಿಯಲ್ಲಿ ವಿಧಿಸಲಾಗುವ ಅದೇ ದರದಲ್ಲಿ ಪ್ರೀ-ಮೆಚ್ಯೂರ್ ಪೆನಾಲ್ಟಿಯನ್ನು ಸಹ ಪಾವತಿಸಬೇಕಾಗುತ್ತದೆ. ಬಡ್ಡಿದರಗಳು ನೀವು ಆಯ್ಕೆ ಮಾಡಿಕೊಳ್ಳುವ ಅವಧಿ ಮೇಲೆ ನಿರ್ಧರಿತವಾಗುತ್ತದೆ.
ಉಳಿತಾಯ ಖಾತೆಯಲ್ಲಿ ಕನಿಷ್ಠ ಎಷ್ಟು ಹಣ ಇರಬೇಕು? ಅಕ್ಟೋಬರ್ 15ರಿಂದಲೇ ಹೊಸ ನಿಯಮ