'ತಿರುಗೇಟು ನೀಡದೇ ಬಿಡಲ್ಲ' ಇರಾನ್‌ ಕ್ಷಿಪಣಿ ದಾಳಿಗೆ ಇಸ್ರೇಲ್‌ ಶಪಥ, 'ಧ್ವಂಸ ಮಾಡಲಿದ್ದೇವೆ' ಇರಾನ್‌ ಎಚ್ಚರಿಕೆ!

By Santosh NaikFirst Published Oct 2, 2024, 11:03 AM IST
Highlights

ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಇರಾನ್ ತನ್ನ ಕ್ಷಿಪಣಿ ದಾಳಿಗೆ ತಿರುಗೇಟು ನೀಡೋದಾಗಿ ಪ್ರತಿಜ್ಞೆ ಮಾಡಿದ್ದಾರೆ. ಇಸ್ರೇಲ್ ಅಥವಾ ಅದರ ಮಿತ್ರರಾಷ್ಟ್ರಗಳಿಂದ ಯಾವುದೇ ಪ್ರತೀಕಾರ ಬಂದಲ್ಲಿ ಸಂಪೂರ್ಣ ಧ್ವಂಸ ಮಾಡಲಿದ್ದೇವೆ ಎಂದು ಟೆಹ್ರಾನ್‌ ಎಚ್ಚರಿಸಿದೆ.
 

ನವದೆಹಲಿ (ಅ.2): ಇರಾನ್‌ನ ರೆವಲ್ಯೂಷನರಿ ಗಾರ್ಡ್‌ಗಳು ಬುಧವಾರ ಇಸ್ರೇಲ್‌ಗೆ ಕಟ್ಟುನಿಟ್ಟಾದ ಎಚ್ಚರಿಕೆಯನ್ನು ನೀಡಿದೆ. ಇರಾನ್‌ ಮಾಡಿದ ಕ್ಷಿಪಣಿ ದಾಳಿಗೆ ಏನಾದರೂ ಪ್ರತಿಕ್ರಿಯೆ ನೀಡಿದಲ್ಲಿ ಇಡೀ ಪ್ರದೇಶವನ್ನೇ ಸಂಪೂರ್ಣ ಧ್ವಂಸ ಮಾಡುವುದಾಗಿ ಎಚ್ಚರಿಸಿದೆ. ಲೆಬನಾನ್‌ ಮೇಲೆ ದಾಳಿ ಮಾಡಿ ಹಿಜ್ಬೊಲ್ಲಾ ಮುಖ್ಯಸ್ಥನನ್ನು ಕೊಂದ ಕಾರಣಕ್ಕೆ ಇರಾನ್‌ ಪ್ರತಿಕ್ರಿಯೆ ಎನ್ನುವ ರೂಪದಲ್ಲಿ 200ಕ್ಕೂ ಅಧಿಕ ಕ್ಷಿಪಣಿಗಳನ್ನು ಇಸ್ರೇಲ್‌ನತ್ತ ಉಡಾಯಿಸಿತ್ತು. ಇಸ್ರೇಲ್‌ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡ ಕ್ಷಿಪಣಿ ದಾಳಿಯ ಬೆನ್ನಲ್ಲಿಯೇ ಇಸ್ರೇಲ್‌ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ತಕ್ಷಣವೇ ಹೇಳಿಕೆ ನೀಡಿದ್ದು, ಶೀಘ್ರದಲ್ಲೇ ಇದಕ್ಕೆ ತಿರುಗೇಟು ನೀಡುತ್ತೇವೆ ಎಂದು ಹೇಳಿದರು. ಇನ್ನೊಂದೆಡೆ, ನನ್ನ ಕ್ಷಿಪಣಿ ದಾಳಿ ಮುಕ್ತಾಯ ಕಂಡಿದೆ. ಇಸ್ರೇಲ್‌ ಇನ್ನಷ್ಟು ಪ್ರಚೋದನೆ ನೀಡದ ಹೊರತು ತನ್ನ ದಾಳಿ ಮುಕ್ತಾಯ ಕಂಡಿದ್ದಾಗಿ ತಿಳಿಸಿದೆ. ಈ ನಡುವೆ, ಇಸ್ರೇಲ್ ಡಿಫೆನ್ಸ್ ಫೋರ್ಸಸ್ (IDF) ಬುಧವಾರದಂದು ರಾಜಧಾನಿ ಬೈರುತ್ ಸೇರಿದಂತೆ ಲೆಬನಾನ್‌ನ ಕೆಲವು ಭಾಗಗಳಲ್ಲಿ ಹೆಚ್ಚಿನ ಸ್ಥಳಾಂತರಕ್ಕೆ ಆದೇಶಿಸಿದೆ, ಏಕೆಂದರೆ ಅದು ಶಂಕಿತ ಹಿಜ್ಬುಲ್ಲಾ ಗುರಿಗಳ ಮೇಲೆ ದಾಳಿ ಮಾಡೋದನ್ನು ಮುಂದುವರೆಸಿದ್ದಲ್ಲದೆ, ಲೆಬಾನನ್‌ ಮೇಲೆ ಆಕ್ರಮಣವನ್ನು ಇನ್ನಷ್ಟು ತೀವ್ರ ಮಾಡಿದೆ.

ಜಗತ್ತಿನ ಅರ್ಧದಷ್ಟು ಭಾಗವನ್ನು ಮುನ್ನಡೆಸುತ್ತಿರುವುದು ಈ 8 ಶ್ರೀಮಂತ ಯಹೂದಿಗಳು!

Latest Videos

ಹಮಾಸ್‌ ರೀತಿ ದಾಳಿಗೆ ಸಜ್ಜಾಗಿದ್ದ ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ

ಇಸ್ರೇಲ್‌-ಇರಾನ್‌ ಉದ್ವಿಗ್ನತೆ: ಇಲ್ಲಿಯವರೆಗಿನ ಬೆಳವಣಿಗೆ

  • ಇರಾನ್ ಮಂಗಳವಾರ ಇಸ್ರೇಲ್‌ ಮೇಲೆ ಕ್ಷಿಪಣಿಗಳ ಸುರಿಮಳೆಗೆರೆದಿದೆ.  ಟೆಲ್ ಅವೀವ್ ಬಳಿಯ ಮೂರು ಸೇನಾ ನೆಲೆಗಳು ಮತ್ತು ಪ್ರಮುಖ ವಾಯು ಮತ್ತು ರಾಡಾರ್ ಸ್ಥಾಪನೆಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿಕೊಂಡಿದೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಪ್ರಕಾರ, "90 ಪ್ರತಿಶತ" ಕ್ಷಿಪಣಿಗಳು "ತಮ್ಮ ಟಾರ್ಗೆಟ್‌ ಮುಟ್ಟಿವೆ". ಆದರೆ, ಇಸ್ರೇಲ್‌ ಅಧಿಕಾರಿಗಳು ಈವರೆಗೂ ಯಾವುದೇ ಗಾಯದ ಬಗ್ಗೆ ವರದಿ ಮಾಡಿಲ್ಲ.
  • ಟೆಹ್ರಾನ್ ಕ್ಷಿಪಣಿ ದಾಳಿಯನ್ನು ಇರಾನ್‌ನ "ಸಾರ್ವಭೌಮತ್ವದ ಮೇಲಿನ ದಾಳಿ"ಗೆ ಸಂಬಂಧಿಸಿದ್ದು ಎಂದು ಹೇಳಿದೆ. ಜುಲೈನಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಹತ್ಯೆಯನ್ನು ಉಲ್ಲೇಖಿಸುತ್ತದೆ. ಇರಾನ್ ಸರ್ಕಾರವು ತನ್ನ ಮಿಲಿಟರಿ ಕ್ರಮಗಳನ್ನು ರಕ್ಷಣಾತ್ಮಕ ಎಂದು ವಿವರಿಸಿದೆ, ಇದನ್ನು "ಸಂಯಮದ ಅವಧಿಯ ನಂತರ" ಕೈಗೊಳ್ಳಲಾಯಿತು ಎಂದಿದೆ.
  • ಇಸ್ರೇಲ್ ಪ್ರತೀಕಾರ ತೀರಿಸಿಕೊಂಡರೆ "ಅಗಾಧ ವಿನಾಶ" ಎದುರಾಗಲಿದೆ ಇರಾನ್ ಎಚ್ಚರಿಸಿದೆ. ಇರಾನ್ ಸಶಸ್ತ್ರ ಪಡೆಗಳು ಸಂಘರ್ಷದಲ್ಲಿ ಮಧ್ಯಪ್ರವೇಶಿಸದಂತೆ ಇತರ ರಾಷ್ಟ್ರಗಳಿಗೂ ಎಚ್ಚರಿಕ ನೀಡಿದೆ. "ಪ್ರದೇಶದಲ್ಲಿನ ಅವರ ಹಿತಾಸಕ್ತಿಗಳು ಸಹ ಪ್ರಬಲ ದಾಳಿಯನ್ನು ಎದುರಿಸಬೇಕಾಗುತ್ತದೆ" ಎಂದು ಹೇಳಿದರು.
  • ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಇಸ್ರೇಲ್‌ನ ಆಕ್ರಮಣಶೀಲತೆಗೆ ನಿರ್ಣಾಯಕ ಪ್ರತಿಕ್ರಿಯೆ ನೀಡಲಾಗಿದೆ ಎಂದು ಹೇಳಿದ್ದಾರೆ. ನೆತನ್ಯಾಹು ಅವರಿಗೆ ನೇರವಾಗಿ ಎಚ್ಚರಿಸಿದ ಪೆಜೆಶ್ಕಿಯಾನ್‌,  "ಇರಾನ್ ಯುದ್ಧಕೋರನಲ್ಲ, ಆದರೆ ಅದು ಯಾವುದೇ ಬೆದರಿಕೆಗಳನ್ನು ದೃಢವಾಗಿ ವಿರೋಧಿಸುತ್ತದೆ. ಇದು ಕೇವಲ ನಮ್ಮ ಶಕ್ತಿಯ ಒಂದು ನೋಟ ಮಾತ್ರ, ಇರಾನ್‌ಅನ್ನು ಕೆಣಕುವ, ಪ್ರಚೋದಿಸುವ ಪ್ರಯತ್ನ ಮಾಡಬೇಡಿ' ಎಂದಿದ್ದಾರೆ.
  • ಇರಾನ್‌ನ ಕ್ಷಿಪಣಿ ದಾಳಿಯ ನಂತರ, ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. "ಇರಾನ್ ಇಂದು ರಾತ್ರಿ ದೊಡ್ಡ ತಪ್ಪು ಮಾಡಿದೆ ಮತ್ತು ಅದಕ್ಕೆ ಪ್ರತಿಕ್ರಿಯೆಯನ್ನೂ ಪಡೆಯುತ್ತದೆ. ನಮ್ಮ ಮೇಲೆ ಯಾರೇ ದಾಳಿ ಮಾಡಿದರೂ ಅವರ ಮೇಲೆ ನಾವು ದಾಳಿ ಮಾಡ್ತೇವೆ' ಎಂದಿದ್ದಾರೆ.
  • ಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯ ಬಗ್ಗೆ ಮೊದಲೇ ಎಚ್ಚರಿಕೆ ನೀಡಿದ್ದ ಯುನೈಟೆಡ್ ಸ್ಟೇಟ್ಸ್, ದಾಳಿಯನ್ನು "ಸೋಲು ಮತ್ತು ನಿಷ್ಪರಿಣಾಮಕಾರಿ" ಎಂದು ವಿವರಿಸಿದೆ. ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಟೆಹ್ರಾನ್‌ಗೆ ಗಂಭೀರ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದರು.
  • ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಯನ್ನು ಚರ್ಚಿಸಲು ಇಸ್ರೇಲ್‌ನ ಭದ್ರತಾ ಕ್ಯಾಬಿನೆಟ್ ಮಂಗಳವಾರ ತಡರಾತ್ರಿ ಸಭೆ ನಡೆಸಿತು. IDF ವಕ್ತಾರ ಡೇನಿಯಲ್ ಹಗರಿ, "ಈ ದಾಳಿಗೆ ಪರಿಣಾಮಗಳು ಇದ್ದೇ ಇರುತ್ತದೆ. ನಾವು ಕೆಲ ಯೋಜನೆಗಳನ್ನು ಹೊಂದಿದ್ದೇವೆ ಮತ್ತು ನಾವು ನಿರ್ಧರಿಸುವ ಸ್ಥಳ ಮತ್ತು ಸಮಯದಲ್ಲಿ ನಾವು ಕಾರ್ಯನಿರ್ವಹಿಸುತ್ತೇವೆ' ಎಂದಿದ್ದಾರೆ.
  • ಇರಾನ್‌ ಅಂದಾಜು 180ಕ್ಕೂ ಅಧಿಕ ಖಂಡಾಂತರ ಕ್ಷಿಪಣಿಗಳನ್ನು ಇಸ್ರೇಲ್‌ನತ್ತ ಎಸೆದಿದೆ. ಟೆಲ್‌ ಅವೀವ್‌, ಜೆರುಸಲೇಮ್‌ ಹಾಗೂ ಜೋರ್ಡನ್‌ನ ರಿವರ್‌ ವ್ಯಾಲಿಯಲ್ಲಿ ಸ್ಫೋಟದ ಸದ್ದು ಕೇಳಿದೆ. ಗಡೆರಾದ ಸೆಂಟ್ರಲ್‌ ಸಿಟಿಯಲ್ಲಿ ಶಾಲೆಯ ವಿಡಿಯೋವನ್ನು ಇಸ್ರೇಲ್‌ ಸೇನೆ ಬಿಡುಗಡೆ ಮಾಡಿದ್ದು, ಶಾಲೆ ಸಂಪೂರ್ಣವಾಗಿ ಇರಾನ್‌ನ ಮಿಸೈಲ್‌ನಿಂದ ಧ್ವಂಸವಾಗಿದೆ.
  • ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳು ದೊಡ್ಡ ಪ್ರಮಾಣದಲ್ಲಿ ಆಗಬಹುದಾಗಿದ್ದ ಅನಾಹುತಗಳನ್ನು ತಡೆದಿದೆ ಎಂದು ಇಸ್ರೇಲ್‌ ಸೇನೆ ಹೇಳಿದೆ. ಅಮೆರಿಕ ಕೂಡ ಇಸ್ರೇಲ್‌ಅನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಹಲವು ಮಿಸೈಲ್‌ಗಳನ್ನು ತಡೆದಿದೆ ಎಂದು ತಿಳಿಸಿದೆ. ಇಸ್ರೇಲ್‌ನಲ್ಲಿ ಈವರೆಗೂ ಆಗಿರುವ ಗಾಯಗಳ ಬಗ್ಗೆ ವರದಿಯಾಗಿಲ್ಲ. ಆದರೆ, ವೆಸ್ಟ್‌ ಬ್ಯಾಂಕ್‌ನಲ್ಲಿ ಪಾಲಿಸ್ತೇನ್‌ ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದಾನೆ ಎಂದು ತಿಳಿಸಿದೆ.
  • ಹಿಜ್ಬೊಲ್ಲಾ ನಾಯಕ ಹಸನ್ ನಸ್ರಲ್ಲಾ ಸೇರಿದಂತೆ ಲೆಬನಾನ್‌ನಲ್ಲಿ ತನ್ನ ಮಿತ್ರ ಹಿಜ್ಬುಲ್ಲಾದ ಉನ್ನತ ನಾಯಕತ್ವವನ್ನು ಕೊಂದ ಇಸ್ರೇಲಿ ದಾಳಿಯ ನಂತರ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಪ್ರತಿಜ್ಞೆ ಮಾಡಿದ ನಂತರ ಮಂಗಳವಾರದ ದಾಳಿ ನಡೆದಿದೆ.
     
click me!