BJP VS Congress: ಇಟ್ಟ ಟಾರ್ಗೆಟ್ ಮುಟ್ಟೋದು ಪದ್ಮಪಾಳಯವೋ..? ಹಸ್ತಪಡೆಯೋ..?

Mar 10, 2024, 5:22 PM IST

ಇಡೀ ದೇಶ ಈಗ ರಣಾಂಗಣವಾಗಿದೆ. ಈ ರಣಭೂಮಿಯಲ್ಲಿ ನಡೀತಿರೋದು ರಾಜಕೀಯ ಸಂಗ್ರಾಮ. ಒಂದೆಡೆ ಮೋದಿ ಪಡೆ, 400 ಕ್ಷೇತ್ರಗಳನ್ನ ಗೆದ್ದು, ಮೂರನೇ ಬಾರಿಗೆ ಗದ್ದುಗೆ ಹಿಡಿಯೋ ಶಪಥ ಮಾಡಿದೆ. ಪ್ರಧಾನಿ ಮೋದಿ(Narendra Modi) ಅವರು, ತಮ್ಮ ಮೈತ್ರಿ ಕೂಟ, ಎನ್‌ಡಿಎ ಈ ಬಾರಿ, 400ರ ಗಡಿ ದಾಟಲಿದೆ ಅನ್ನೋ ಮಾತು ಹೇಳ್ತಿದ್ದಾರೆ. ಹೋದ ಕಡೆಯಲ್ಲೆಲ್ಲಾ ಇದೇ ವಿಶ್ವಾಸವನ್ನೇ ಜನರಲ್ಲಿ ತುಂಬ್ತಾ ಇದಾರೆ. ಮೋದಿ ಅವರ ಈ ಮಾತು ನಿಜವಾಗೋ ಸಾಧ್ಯತೆಗಳು ದಟ್ಟವಾಗಿದ್ದಾವೆ ಅಂತ ಸಮೀಕ್ಷೆಗಳು ಹೇಳ್ತಾ ಇವೆ. ಕಳೆದ ಐದಾರು ತಿಂಗಳುಳಿಂದ ಬಂದಿರೋ ಸಮೀಕ್ಷೆಗಳು, ಮೋದಿ ಪಾಳಯ 350ರಿಂದ 370ರ ತನಕ ಸೀಟ್ ಗೆಲ್ಲೋ ಸಾಧ್ಯತೆ ಇದೆ ಅಂತ ಹೇಳ್ತಾ ಇದಾವೆ. ನಾವೀಗ ಆ ರಾಷ್ಟ್ರ ರಾಜಕಾರಣದಲ್ಲಾಗ್ತಾ ಇರೋ ಅಲ್ಲೋಲಕಲ್ಲೋಲದ ಬಗ್ಗೆ ಈಗ ಮಾತಾಡೋದು ಬೇಡ. ರಾಜ್ಯದಲ್ಲೀಗ ಕಾಂಗ್ರೆಸ್(Congress) ಅಧಿಕಾರವಿದೆ. ಅಷ್ಟೇ ಅಲ್ಲ, ದೇಶದಲ್ಲಿ ಕಾಂಗ್ರೆಸ್ ಪರಿಸ್ಥಿತಿ ನೋಡ್ಕೊಂಡ್ರೆ, ಕೈಗೆ ದೊಡ್ಡ ಬಲ ಅಂತ ಇರೋದು ಕರ್ನಾಟಕದಲ್ಲಿ(Karnataka) ಮಾತ್ರ. ಅದಕ್ಕೆ ಮುಖ್ಯ ಕಾರಣ, ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಮತ್ತು ಡಿಸಿಎಂ ಡಿಕೆ ಶಿವಕುಮಾರ್(DK shivakumar) ಅನ್ನೋದ್ರಲ್ಲಿ ಎರಡು ಮಾತಿಲ್ಲ.

ಇದನ್ನೂ ವೀಕ್ಷಿಸಿ:  Mysore Murder News: ಫ್ಲೆಕ್ಸ್ ವಿಚಾರವೊಂದೇ ಕೊಲೆಗೆ ಕಾರಣವಾಗಿಬಿಡ್ತಾ? ಇದನ್ನ ತೆಗೆಸಿದ್ದಕ್ಕೆ ಅಕ್ಮಲ್‌ ಟಾರ್ಗೆಟ್ ಮಾಡಿದ್ರಾ?