ಎಚ್‌ಡಿಕೆಗೆ ಬಿಗ್ ಶಾಕ್: ತೆನೆ ಇಳಿಸಲು ರೆಡಿಯಾದ್ರಾ ಮತ್ತೊಬ್ಬ ಜೆಡಿಎಸ್ ಶಾಸಕ..?

Dec 20, 2020, 2:30 PM IST

ಬೆಂಗಳೂರು(ಡಿ.20): ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಮಿಂಚಿನ ಸಂಚಲನ ಶುರುವಾಗಿದ್ದು, ದಳಪತಿ ಎಚ್. ಡಿ. ಕುಮಾರಸ್ವಾಮಿಗೆ ಮತ್ತೊಂದು ಬಿಗ್ ಶಾಕ್ ಎದುರಾಗುವ ಸಾಧ್ಯತೆಯಿದೆ.

ಹೌದು, ತುಮಕೂರು ರಾಜಕೀಯದಲ್ಲಿ ಮತ್ತೆ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆದಿದ್ದು, ಗುಬ್ಬಿ ಶಾಸಕ ಎಸ್‌.ಆರ್. ಶ್ರೀನಿವಾಸ್ ಜೆಡಿಎಸ್‌ ಪಕ್ಷಕ್ಕೆ ಗುಡ್‌ ಬೈ ಹೇಳ್ತಾರಾ ಎನ್ನುವ ಶಂಕೆ ದಟ್ಟವಾಗಲಾರಂಭಿಸಿದೆ. 

ದಳಪತಿ ವಿರುದ್ಧ ಸಿದ್ದರಾಮಯ್ಯ 'ಆಪರೇಶನ್' ಅಸ್ತ್ರ; ಅಚ್ಚರಿ ಮೂಡಿಸಿದೆ ರಾಜಕೀಯ ಬೆಳವಣಿಗೆ

ಶನಿವಾರ(ಡಿ.20)ವಷ್ಟೇ ಜೆಡಿಎಸ್‌ ಶಾಸಕ ಶ್ರೀನಿವಾಸ್ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಬೀಸಿದ್ದರು. ಇದೀಗ ಜೆಡಿಎಸ್‌ ತೊರೆದು ಶ್ರೀನಿವಾಸ್ ಕಾಂಗ್ರೆಸ್ ಸೇರ್ತಾರ ಎನ್ನುವ ಚರ್ಚೆ ರಾಜಕೀಯವಲಯದಲ್ಲಿ ಜೋರಾಗಿ ಕೇಳಿ ಬರಲಾರಂಭಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ.