Aug 5, 2023, 5:03 PM IST
ಬೆಂಗಳೂರು (ಆ.05): ಬಿಬಿಎಂಪಿಯಲ್ಲಿ ಕಾಮಗಾರಿ ಮಾಡಿದ ಗುತ್ತಿಗೆದಾರರಿಗೆ ಹಣವನ್ನು ಬಿಡುಗಡೆ ಮಾಡದಂತೆ ಕಾಂಗ್ರೆಸ್ ಸಂಸದರೊಬ್ಬರು ತಡೆಯೊಡ್ಡಿದ್ದರು. ಈಗ ಕಮೀಷನ್ ದರವನ್ನು ನಿಗದಿ ಮಾಡಿ 710 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ಕಾರ್ಪೋರೇಷನ್ (ಬಿಬಿಎಂಪಿ) ಕಚೇರಿಯಲ್ಲಿ ಏನು ನಡೀತು? 710 ಕೋಟಿ ರೂ. ಬಿಡುಗಡೆ ಆಗಿರಬೇಕಲ್ಲ. ಅದಕ್ಕೆ 26 ಅಂಶಗಳ ಮೇಲೆ ತನಿಖೆ ಮಾಡ್ತಾರಂತೆ. ಅಣ್ಣ ಹೇಳ್ತಾರೆ, ತಮ್ಮ ಕೇಳ್ಬೇಕು ಅಂತಾ ಅದೇನೋ ಡಿ.ಕೆ.ಶಿವಕುಮಾರ್ ಹೇಳಿದ್ದಾರಲ್ಲ. ಈ ಜನ್ಮದಲ್ಲೂ ಅಂತೂ, ಅಂತಹ ತಮ್ಮ ನನಗೆ ಬೇಡ. ಮುಂದಿನ ಜನ್ಮದಲ್ಲೂ ಅವರು ನನಗೂ ತಮ್ಮ ಆಗೋದೂ ಬೇಡ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತಿರುಗೇಟು ನೀಡಿದ್ದಾರೆ.