Jun 10, 2023, 4:24 PM IST
ಒಂದು ಕಡೆ ಮಹಾಕಾಳೇಶ್ವರ ಜ್ಯೋತರ್ಲಿಂಗ.. ಮತ್ತೊಂದ್ಕಡೆ ಶತ್ರುಸ್ತಂಭಿನಿ ಬಗಳಾಮುಖಿ.. ಇನ್ನೊಂದ್ಕಡೆ ಪೀತಾಂಬರ ಪೀಠ.. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರೋ ಈ ಮೂರು ಶಕ್ತಿ ಸನ್ನಿಧಾನಕ್ಕೆ ಹೋಗ್ತಿದ್ದಾರೆ ಕನಕಪುರ ಬಂಡೆ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್.ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಡಿಕೆ ಶಿವಕುಮಾರ್, ಕೆಲಸ ಶುರು ಮಾಡಿದ್ದಾರೆ. ಗುರುವಾರವಷ್ಟೇ ಬೆಂಗಳೂರು ಸಿಟಿ ರೌಂಡ್ಸ್ ಹಾಕಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಬ್ರ್ಯಾಂಡ್ ಬೆಂಗಳೂರು ಕಟ್ಟುವ ಶಪಥ ಮಾಡಿದ್ದಾರೆ. ಇದ್ರ ಮಧ್ಯೆ ಶನಿವಾರ ಮತ್ತು ಭಾನುವಾರ ಬಂಡೆ ತೀರ್ಥಕ್ಷೇತ್ರ ದರ್ಶನಕ್ಕೆ ಮುಂದಾಗಿದ್ದಾರೆ. ಡಿಕೆ ಸಾಹೇಬ ಹೋಗ್ತಿರೋದು ಅಂತಿಂಥಾ ಕ್ಷೇತ್ರಕ್ಕಲ್ಲ... ಅದು ಪವರ್'ಫುಲ್ ಕ್ಷೇತ್ರ... ಜ್ಯೋತಿರ್ಲಿಂಗದ ಶಕ್ತಿಕೇಂದ್ರ... ಜೊತೆಗೆ ಶತ್ರುಸ್ತಂಭಿನಿಯ ಸಾನಿಧ್ಯ.. ಮಹಾಕಾಳ ಬಗಳಾಮುಖಿ ರಹಸ್ಯ. ಆ ರಹಸ್ಯದೊಳಗೆ ಅಡಗಿದ್ಯಾ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ರಾಜಯೋಗದ ಕನಸು..?