ಹಿರಿಯರ ಆಶೀರ್ವಾದ.. ಮೈತ್ರಿ ನಾಯಕರ ಜತೆ ಚರ್ಚೆ..! ಹೇಗಿರಲಿದೆ ಕಮಲ-ದಳ ಮೈತ್ರಿ..?

Nov 14, 2023, 3:36 PM IST

ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಬಿ ವೈ ವಿಜಯೇಂದ್ರ(BY Vijayendra) ಅವರು ಆಯ್ಕೆ ಆಗಿ ಮೂರು ದಿನಗಳಾಗಿದೆ. ಈ ಬೆನ್ನಲ್ಲೇ ಮಾಜಿ ಪ್ರಧಾನಿ ದೇವೇಗೌಡರನ್(Devegowda)ನ ಭೇಟಿಯಾಗಿರೋ ವಿಜಯೇಂದ್ರ ಆಶೀರ್ವಾದ ಪಡೆದಿದ್ದಾರೆ. ಲೋಕಸಭೆಯಲ್ಲಿ(Loksabha) ಮೈತ್ರಿ ಮಾಡಿಕೊಂಡಿರೋ ಬಿಜೆಪಿ ಹಾಗೂ ಜೆಡಿಎಸ್ ಗೆಲುವಿನ ವಿಶ್ವಾಸದಲ್ಲಿದೆ, ಈ ಸಮಯದಲ್ಲಿ ವಿಜಯೇಂದ್ರ ಭೇಟಿ ಅನೇಕ ಚರ್ಚೆಗಳನ್ನ ಹುಟ್ಟು ಹಾಕಿದೆ. ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಬಿಜೆಪಿ ದಿಕ್ಕೆಟ್ಟು ಕೂತ ಸ್ಥಿತಿಯಲ್ಲಿತ್ತು. ಹೊಸ ರಾಜ್ಯಾಧ್ಯಕ್ಷರಾಗಿ ಯಾರು ಆಯ್ಕೆ ಆಗ್ತಾರೆ ಅನ್ನೋ ಚರ್ಚೆ ಪಕ್ಷದಲ್ಲಿಮಾತ್ರವಲ್ಲದೇ ಎಲ್ಲಾ ಕಡೆಗಳಲ್ಲು ಶುರುವಾಗಿತ್ತು. ಬಿಜೆಪಿ ಹೈಕಮಾಂಡ್ ಅಳೆದು ತೂಗಿ ರಾಜಕೀಯ ಲೆಕ್ಕಾಚಾರವನ್ನ ಮಾಡಿ ಕೊನೆಗೂ ಬಿ ವೈ ವಿಜಯೇಂದ್ರ ಅವರಿಗೆ ಪಟ್ಟ ಕಟ್ಟಿದೆ. ನೂತನ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆಯಾದ ಬೆನ್ನಲ್ಲೇ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಇದೊಂದು ಭೇಟಿ ಭಾರಿ ಸಂಚಲನ ಸೃಷ್ಟಿ ಮಾಡಿದೆ. ಎಚ್ಡಿಡಿ ಪದ್ಮನಾಭನಗರ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ಮಾಡಿದ್ದಾರೆ. B.Y ವಿಜಯೇಂದ್ರ ಸ್ವಾಗತಿಸಿದ ಸಂಸದ ಪ್ರಜ್ವಲ್ ರೇವಣ್ಣ ಕೂಡ ತುಂಬಾ ಹುರುಪಿನಲ್ಲಿದ್ದರು. ಇನ್ನು ವಿಜಯೇಂದ್ರ ಆಯ್ಕೆಗೆ ಎಚ್ ಡಿ ದೇವೇಗೌಡರ ಸಂತಸ! ವ್ಯಕ್ತಪಡಿಸಿದ್ದಾರೆ. ಸರಿಯಾದ ಸಮಯದಲ್ಲಿ ಸರಿಯಾಗಿ ಆಯ್ಕೆ ಮಾಡಿದ್ರು.

ಇದನ್ನೂ ವೀಕ್ಷಿಸಿ:  ರಾಮ ಮರಳಿ ಅಯೋಧ್ಯೆಗೆ ಬಂದ ದಿನವೇ ದೀಪಾವಳಿ! ರಾಜಕಾರಣದ ಮೇಲೂ ಪ್ರಭಾವ ಬೀರಲಿದೆ ರಾಮಮಂದಿರ!