ಸವದಿ ಕಾಂಗ್ರೆಸ್ ಸೇರ್ಪಡೆ ಉತ್ತರ ಕರ್ನಾಟಕದಲ್ಲಿ ಕಮಲಕ್ಕೆ ಕೊಡಲಿದೆಯೇ ಭಾರಿ ಹೊಡೆತ?

Apr 16, 2023, 4:24 PM IST

ಸವದಿ  ಆಗಮನ ಕಾಂಗ್ರೆಸ್‌ಗೆ ಅದೆಷ್ಟು ಲಾಭವಾಗುತ್ತೆ ಅಂತ ಹೇಳೋದು ಕಷ್ಟ.. ಆದ್ರೆ, ನಿರ್ಗಮನ ಬಿಜೆಪಿಗೆ ಬೃಹತ್ ಲಾಸ್‌ಗೆ ಕಾರಣವಾಗೋದಂತೂ ಸತ್ಯ ಅಂತಿದ್ದಾರೆ ಜನ. ಯಾಕಂದ್ರೆ, ಸವದಿ ಅವರ ಪ್ರಭಾವ ಉತ್ತರ ಕರ್ನಾಟಕದ ಹಲವಾರು ವಿಧಾನಸಭಾ ಕ್ಷೇತ್ರಗಳಲ್ಲಿ ಖಂಡಿತಾ ಇದೆ. ಬರೀ ಅಷ್ಟೇ ಅಲ್ಲ ಮಹಾರಾಷ್ಟ್ರದ ಗಡಿಯಲ್ಲಿರುವ ವಿಧಾನಸಭಾ ಕ್ಷೇತ್ರಗಳಲ್ಲೂ ಕೂಡ, ಸವದಿ ಅವರ ಪ್ರಭಾವವನ್ನ ಬಿಜೆಪಿ ನಿರ್ಲಕ್ಷಿಸೋ ಹಾಗಿಲ್ಲ. ಬಿಜೆಪಿಯ ಹವಾ ಎಲ್ಲೆಲ್ಲಿತ್ತೋ, ಆ ಕ್ಷೇತ್ರಗಳಲ್ಲೂ ಸಹ ಸವದಿ ಅವರು ರಾಜಕೀಯ ಪರಿಣಾಮ ಬೀರಬಹುದು ಅನ್ನೋ ನಿರೀಕ್ಷೆ ಯಾರಲ್ಲಿ ಇರದೇ ಇದ್ರೂ,  ಕಾಂಗ್ರೆಸ್‌ ನಾಯಕರಲ್ಲಂತೂ ಇದ್ದೇ ಇದೆ.. ಅದರಲ್ಲೂ ಮುಖ್ಯವಾಗಿ, ಲಿಂಗಾಯತ ಮತಗಳ ಪ್ರಾಬಲ್ಯವಿರೋ ಕ್ಷೇತ್ರಗಳಲ್ಲಿ ಸವದಿ ಅವರಿಗೆ ಒಳ್ಳೆ ಹೆಸರಿದೆ.. ಅವರ ಮಾತಿಗೆ ಜನ ಬೆಂಬಲವೂ ಇದೆ.. ಹೀಗಿರುವಾಗ, ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಮತಗಳಿಕೆ ಕಷ್ಟವಾಗ್ಬೋದು ಅನ್ನೋ ಲೆಕ್ಕಾಚಾರವಿದೆ.. ಇಲ್ಲಿ ವಿಚಿತ್ರ ಅಂತ ಅನಿಸಿದ್ದು ಮಾತ್ರ, ಅವತ್ತು ಸವದಿ ಅವರನ್ನ ಪಕ್ಷದಲ್ಲಿಟ್ಕೊಂಡಿರೋ ಕಾರಣಕ್ಕೆ, ಬಿಜೆಪಿಗೆ ಹೀನಾಮಾನವಾಗಿ ಬೈದವರು, ಇವತ್ತು ಅದೇ ಸವದಿ ಅವರಿಗೆ ಬಿಜೆಪಿ ಗೌರವ ಕೊಟ್ಟಿಲ್ಲ ಅಂತ ಹೇಳೋ ಮೂಲಕ, ಅವರನ್ನೂ ಕಾಂಗ್ರೆಸ್‌ಗೆ ಎಳೆದುಕೊಂಡರಲ್ಲಾ, ಅದನ್ನ ನೋಡಿದ್ರೆನೇ, ಈ ಪಾಲಿಟಿಕ್ಸ್ ಅದೆಷ್ಟು ಉಲ್ಟಾಪಲ್ಟಾ ಅನ್ಸುತ್ತೆ ಆ ಬಗ್ಗೆ ಒಂದು ರಿಪೋರ್ಟ್ ಇಲ್ಲಿದೆ.