Panchanga: ಇಂದು ವಿಷ್ಣುಸಹಸ್ರನಾಮ ಪಠಣ, ಲಲಿತಾ ಸಹಸ್ರನಾಮ ಪಠಣದಿಂದ ಶುಭವಾಗುವುದು!

Nov 24, 2021, 8:27 AM IST

ಶುಭೋದಯ ಓದುಗರೇ, ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಪುನರ್ವಸು ನಕ್ಷತ್ರ, ಇಂದು ಬುಧವಾರ. ಪಂಚಮಿ ಬಂದಿದ್ದರಿಂದ ಶುಭ ಕಾರ್ಯಗಳಿಗೆ ಪ್ರಶಸ್ತವಾದ ಕಾಲ. ಇನ್ನು ವಾರದ ಮಟ್ಟಿಗೆ ಬುಧವಾರವಾಗಿರುವುದರಿಂದ ವಿಷ್ಣು ಸಂಬಂಧಿ ಶ್ಲೋಕ, ಮಂತ್ರಗಳನ್ನು ಪಠಿಸಿಕೊಳ್ಳಬಹುದು. ಇನ್ನು ಪಂಚಮಿ ಇರುವುದರಿಂದ ಲಲಿತಾ ಸಹಸ್ರನಾಮವನ್ನೂ ಪಠಿಸಬಹುದು.