ಪಂಚಾಂಗ: ಉಚ್ಛ ಸ್ಥಾನದಲ್ಲಿದ್ದ ಶುಕ್ರ ಗ್ರಹ, ಮೇಷ ರಾಶಿಗೆ ಪ್ರವೇಶ!

Apr 10, 2021, 9:08 AM IST

10 ಏಪ್ರಿಲ್ 2021, ಶನಿವಾರದ ಪಂಚಾಂಗ| ಇಂದು ಚತುರ್ದಶಿ. ಈ ತಿಥಿ ಅಷ್ಟೊಂದು ಶುಭವಲ್ಲ. ಇಡೀ ಚತುರ್ದಶಿಯನ್ನು ಆರು ಭಾಗ ಮಾಡಿಕೊಂಡು ಅದರ ಮೊದಲನೇ ಭಾಗದಲ್ಲಿ ಯಾರಾದರೂ ಹುಟ್ಟಿದರೆ ಅಷ್ಟೊಂದು ತೊಂದರೆ ಇಲ್ಲ. ಉಳಿದ ಐದು ಭಾಗಗಳಲ್ಲಿ ಜನನವಾಗಿದ್ದರೆ ಅದು ತೊಂದರೆ ಎಂದು ಶಾಸ್ತ್ರ ವಿವರಿಸಿದೆ. ಆದದರೆ ಈ ಬಗ್ಗೆ ಭಯ ಪಡಬೇಕಿಲ್ಲ. ಚತುರ್ಧಶಿ ಶಾಂತಿ ಮಾಡಿಸಿಕೊಂಡರೆ ಎಲ್ಲವೂ ಸರಿಯಾಗುತ್ತದೆ. ಇಂದು ಉಚ್ಛ ಸ್ಥಾನದಲ್ಲಿದ್ದ ಶುಕ್ರ ಗ್ರಹ, ಇಂದು ಮೇಷ ರಾಶಿ ಪ್ರವೇಶಿಸುತ್ತಾನೆ. ಇಂತಹ ಸಂದರ್ಭದಲ್ಲಿ ಶುಕ್ರನ ಆರಾಧನೆ ಮಾಡಿ. ಇಂದು ವಿಷ್ಣುವನ್ನು ಆರಾಧಿಸಿ, ಶನೇಶ್ಚರನ ಆರಾಧನೆಯನ್ನೂ ಮಾಡಿ.