ಪಂಚಾಂಗ| ಮನೋಭಿಲಾಷೆ ಈಡೇರಿಸಿಕೊಳ್ಳಲು ಹೀಗೆ ಮಾಡಿ!

Oct 4, 2020, 9:29 AM IST

04 ಅಕ್ಟೋಬರ್ 2020, ಭಾನುವಾರದ ಪಂಚಾಂಗ| ಇದು ಸೂರ್ಯನ ದಿನ. ಸೂರ್ಯನ ಆರಾಧನೆಯಿಂದ ಒಳಿತಾಗಲಿದೆ. ಆತನ ಅನುಗ್ರಹ ಸಿಗಲಿದೆ. ಯಾವುದಾದರೂ ದಿವ್ಯ ಅಪೇಕ್ಷೆ ನಿಮ್ಮಲ್ಲಿದ್ದು, ಅದನ್ನು ಸಾಧಿಸಲೇಬೇಕೆಂಬ ನಿಮ್ಮಲ್ಲಿದ್ದರೆ ಓಂ ರಂ ರವಯೇ ನಮಃ ಎಂಬ ಮಂತ್ರವನ್ನು ಏಳು ಸಾವಿರ ಬಾರಿ ಪಠಿಸಿ. ನಿಮ್ಮ ಅಭಿಲಾಷೆ ಈಡೇರುತ್ತೆ. ತಂಬಿಗೆಯಲ್ಲಿ ನೀರನ್ನು ತುಂಬಿ ಅದಕ್ಕೆ ಕೆಂಪು ಚಂದನ ಹಾಗೂ ಕೆಂಪು ಪುಷ್ಪ ಮಿಶ್ರ ಮಾಡಿ ಸೂರ್ಯದೇವನಿಗೆ ಅರ್ಪಿಸಿ ಒಳ್ಳೆಯದಾಗುತ್ತದೆ.