ಮಾಸ್ಕ್ ಇಲ್ಲದೇ ತರಕಾರಿ ಕೊಳ್ಳಲು ಮುಗಿಬಿದ್ದ ಮೈಸೂರು ಮಂದಿ..!

Apr 27, 2020, 3:48 PM IST

ಮೈಸೂರು(ಏ.27): ಕೊರೋನಾ ವೈರಸ್ ಹರಡದಂತೆ ಬಚಾವಾಗಲು ಒಂದು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಇನ್ನು ಎರಡನೆಯದಾಗಿ ಮಾಸ್ಕ್ ಧರಿಸಬೇಕು. ಆದರೆ ರೆಡ್‌ ಝೋನ್‌ನಲ್ಲಿರುವ ಮೈಸೂರಿನ ಮಂದಿ ಇವ್ಯಾವುದನ್ನು ಲೆಕ್ಕಿಸದೇ ತರಕಾರಿ ಕೊಳ್ಳಲು ಮುಗಿಬಿದ್ದ ಘಟನೆ ಸೋಮವಾರವಾದ ಇಂದು ನಡೆದಿದೆ.

ಸುವರ್ಣ ನ್ಯೂಸ್ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಪೊಲೀಸರು ಸಾಕಷ್ಟು ಎಚ್ಚರಿಕೆಯ ಮಾತುಗಳನ್ನು ಹೇಳಿದರೂ ಇದರ ಪರಿವೇ ಇಲ್ಲವೇನೋ ಎಂಬಂತೆ ತರಕಾರಿಗಳನ್ನು ಕೊಳ್ಳಲು ಜನರು ಮುಂದಾಗಿದ್ದಾರೆ. 

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈಗಾಗಲೇ ಸಾಕಷ್ಟು ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಹೀಗಾಗಿ ಇಲ್ಲಿನ ಜನ ಮೈ ಎಲ್ಲಾ ಕಣ್ಣಾಗಿರುವಂತೆ ಇರಬೇಕಿತ್ತು. ಆದರೆ ಮೈಸೂರಿನಲ್ಲಿ ಈಗ ನಡೆಯುತ್ತಿರುವುದೇ ಬೇರೆ ಎನ್ನುವಂತಾಗಿದೆ. 

ಜಮೀರ್ ಅಹಮದ್‌ಗೆ ಕೊರೋನಾ ನೆಗೆಟಿವ್, ಟೀಕಾಕಾರರಿಗೆ ಠಕ್ಕರ್ ಕೊಟ್ಟ ಶಾಸಕ

ಸಾಮಾಜಿಕ ಅಂತರವನ್ನು ಮರೆತು ಜನ ಗುಂಪು-ಗುಂಪಾಗಿ ಬಂದು ತರಕಾರಿಗಳನ್ನು ಖರೀದಿಸಲು ಮುಗಿಬೀಳುತ್ತಿದ್ದಾರೆ. ಪೊಲೀಸರು ಧ್ವನಿವರ್ಧಕಗಳನ್ನು ಬಳಸಿ ಜನರಿಗೆ ಎಚ್ಚರಿಕೆ ನೀಡುತ್ತಿದ್ದರೂ ಅದು ಅರಣ್ಯರೋಧನೆಯ ರೀತಿಯಂತೆ ಕಂಡು ಬರುತ್ತಿದೆ. ಈ ಕುರಿತಾಗಿ ನಮ್ಮ ಪ್ರತಿನಿಧಿ ಮಧುಸೂದನ್ ವಿವರಿಸಿದ್ದು ಹೀಗೆ.