Mar 9, 2023, 11:01 AM IST
ಎಲೆಕ್ಷನ್ ಹೊತ್ತಲ್ಲೇ ಸರ್ಕಾರಕ್ಕೆ ಮತ್ತೊಂದು ಟೆನ್ಷನ್ ಆರಂಭವಾಗಿದ್ದು, ಸರ್ಕಾರಿ ನೌಕರರ ಬಳಿಕ ಈಗ ಸಾರಿಗೆ ನೌಕರರ ತಲೆನೋವಾಗಿದೆ. ಸರ್ಕಾರದ ವಿರುದ್ದ ರಾಜ್ಯ ಸಾರಿಗೆ ನೌಕರರ ಸಮರ ಸಾರಿದ್ದು, ಮಾರ್ಚ್ 24 ರಂದು ಮುಷ್ಕರಕ್ಕೆ ಸಜ್ಜಾಗಿದೆ. ನೌಕರರು ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸಾರಿಗೆ ಸಿಬ್ಬಂದಿ ಬಂದ್‌ಗೆ ಕರೆ ನೀಡಿದ್ದಾರೆ. ಮಾರ್ಚ್ 24 ರಂದು KSRTC,BMTC ಬಸ್‌ಗಳು ರಸ್ತೆಗಿಳಿಯೋದು ಡೌಟ್ ಆಗಿದ್ದು,KSRTCಯ ನಾಲ್ಕೂ ವಿಭಾಗದ ಸಿಬ್ಬಂದಿಯಿಂದ ಮುಷ್ಕರಕ್ಕೆ ಸಿದ್ಧತೆ ಜತೆ ಕುಟುಂಬ ಸಮೇತವಾಗಿ ಮುಷ್ಕರದಲ್ಲಿ ಭಾಗಿಯಾಗಲು ಪ್ಲಾನ್ ಮಾಡಿದ್ದಾರೆ. ಶೇ.25 ರಷ್ಟು ವೇತನ ಹೆಚ್ಚಳಕ್ಕೆ ಸಾರಿಗೆ ನೌಕರರ ಬಿಗಿ ಪಟ್ಟು ಹಿಡಿದಿದ್ದು, 6 ವರ್ಷದಿಂದ ವೇತನ ಹೆಚ್ಚಿಸಿಲ್ಲದ್ದಕ್ಕೆ ಸಿಟ್ಟಾಗಿದ್ದಾರೆ.