ಮಗಳ ಜೊತೆ ದೀಪಾವಳಿ ಫೋಟೋಶೂಟ್ ಮಾಡಿದ ಅದಿತಿ ಪ್ರಭುದೇವ; ಮತ್ತೊಂದು ಗುಡ್ ನ್ಯೂಸ್ ಯಾವಾಗ ಎಂದ ನೆಟ್ಟಿಗರು!

First Published | Nov 1, 2024, 1:53 PM IST

ಪುಟ್ಟ ಕಂದಮ್ಮನ ಜೊತೆ ದೀಪಾವಳಿಯನ್ನು ಅದ್ಧೂರಿಯಾಗಿ ಆಚರಿಸುತ್ತಿರುವ ಅದಿತಿ ಪ್ರಭುದೇವ. ಮತ್ತೊಂದು ಗುಡ್‌ ನ್ಯೂಸ್ ಕೇಳ್ತಿದ್ದಾರೆ ನೆಟ್ಟಿಗರು.... 

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಅದಿತಿ ಪ್ರಭುದೇವ ಈ ವರ್ಷ ದೀಪಾವಳಿ ಹಬ್ಬವನ್ನು ಇಡೀ ಫ್ಯಾಮಿಲಿ ಜೊತೆ ಆಚರಿಸುತ್ತಿದ್ದಾರೆ. ಹೀಗಾಗಿ ಫೋಟೋಶೂಟ್ ಮಾಡಿಸಿದ್ದಾರೆ. 
 

ಇಷ್ಟು ವರ್ಷ ತಾಯಿ ಮನೆಯಲ್ಲಿ, ಮದುವೆ ನಂತರ ಗಂಡನ ಮನೆಯಲ್ಲಿ ದೀಪಾವಳಿ ಆಚರಿಸುತ್ತಿದ್ದ ಅದಿತಿ ಪ್ರಭುದೇವ ಸಂಭ್ರಮವನ್ನು ಡಬಲ್ ಮಾಡಲು ಪುತ್ರಿ ನೇಸರ ಕೂಡ ಸೇರಿಕೊಂಡಿದ್ದಾರೆ.

Tap to resize

ಏಪ್ರಿಲ್ 4, 2024ರಂದು ಅದಿತಿ ಪ್ರಭುದೇವ ಮತ್ತು ಯಶಸ್ ಮನೆಗೆ ಮಹಾಲಕ್ಷ್ಮಿಯನ್ನು ಬರ ಮಾಡಿಕೊಂಡರು. ಅಕ್ಟೋಬರ್ 4ರಂದು ಮಗಳ ಮುಖ ಮತ್ತು ಹೆಸರು ರಿವೀಲ್ ಮಾಡಿದ್ದರು.

ಈ ವರ್ಷ ದೀಪಾವಳಿಯಂದು ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.ಹಾಗೂ ನಿಮ್ಮ ಮನೆ ,ಮನಗಳಲ್ಲಿ ಸದಾ ಪ್ರೀತಿಯ ಜ್ಯೋತಿ ಬೆಳಗುತ್ತಿರಲಿ ಎಂದು ಆಶಿಸುತ್ತಾ ಈ ದೀಪಾವಳಿ ನಿಮಗೆ ಸಾಕಷ್ಟು ಖುಷಿ , ಆರೋಗ್ಯ, ನೆಮ್ಮದಿಯನ್ನು ತರಲಿ ಎಂದು ಹಾರೈಸುತ್ತೇವೆ ಎಂದು ಅದಿತಿ ಬರೆದುಕೊಂಡಿದ್ದಾರೆ. 

ಇದುವರೆಗೂ ಮಗಳ ಜೊತೆ ಮೂರ್ನಾಲ್ಕು ಫೋಟೋಗಳನ್ನು ಅದಿತಿ ಹಂಚಿಕೊಂಡಿದ್ದಾರೆ. ಆಗಲೇ ನೇಸರ ಹೆಸರಿನಲ್ಲಿ ಫ್ಯಾನ್ಸ್ ಪೇಜ್‌ಗಳು ಕ್ರಿಯೇಟ್ ಆಗಿದ್ದು, ಸ್ಟಾರ್ ಕಿಡ್‌ ಪಟ್ಟಿ ಸೇರುತ್ತಿದ್ದಾಳೆ ಮುದ್ದು ಕಂದಮ್ಮ. 

ಪಿಂಕ್ ಬಣ್ಣದ ಫ್ರಾಕ್‌ನಲ್ಲಿ ನೇಸರ ಮಿಂಚುತ್ತಿದ್ದರು, ಪಿಂಕ್ ಆಂಡ್ ಬ್ಲೂ ಬಣ್ಣದ ಸೀರೆಯಲ್ಲಿ ಅದಿತಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರಿಗೂ ಮ್ಯಾಚ್ ಆಗುವಂತೆ ಪತಿ ಯಶಸ್ ಫ್ಲೋರಲ್‌ ಔಟ್‌ಫಿಟ್‌ ಧರಿಸಿದ್ದಾರೆ. 

Latest Videos

click me!