ಬೆಂಗಳೂರು : ಮತ್ತೊಂದು ಮೂರಂತಸ್ತಿನ ಕಟ್ಟಡ ಕುಸಿಯುವ ಭೀತಿ

Oct 13, 2021, 9:54 AM IST

ಬೆಂಗಳೂರು (ಅ.13):  ಬೆಂಗಳೂರಿನಲ್ಲಿ ಕಟ್ಟಡ ಕುಸಿತ ಪ್ರಕರಣಗಳು ಸಾಲು ಸಾಲಾಗಿ ಕಂಡು ಬರುತ್ತಿದೆ. ಹಳೆಯ ಕಟ್ಟಡಗಳು ಉರುಳಿ  ಬೀಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. 

ನೀರುಗಾಲುವೆ ಕಾಂಪೌಂಡ್ ಕುಸಿತ, ಎರಡಂತಸ್ತಿನ ಕಟ್ಟಡ ಕುಸಿಯುವ ಆತಂಕ

ಕಮಲಾನಗರದ ಶಂಕರ್‌ನಾಗ್ ಬಸ್ ನಿಲ್ದಾಣ ಬಳಿ ಮೂರು ಅಂತಸ್ತಿನ ಕಟ್ಟಡ ಕುಸಿಯುವ ಸ್ಥಿತಿಯಲ್ಲಿದೆ. ಗ್ರೌಂಡ್‌ ಫ್ಲೋರ್‌ನಲ್ಲಿ ಗೋಡೆ ಕುಸಿತವಾಗಿದ್ದು ನಿವಾಸಿಗಳಲ್ಲಿ ಆತಂಕ ಎದುರಾಗಿದೆ. ಈಗಾಗಲೇ ಬೆಂಗಳೂರಿನ ಹಲವೆಡೆ ಅನೇಕ ಕಟ್ಟಡಗಳು ಕುಸಿದು ಬಿದ್ದಿವೆ. ನೋಡನೊಡುತ್ತಿದ್ದಂತೆ ದುರಂತಗಳಾಗಿವೆ. ಈಗಾಗಲೇ ಬಿಬಿಎಂಪಿ 200 ಕಟ್ಟಡಗಳ ಮಾಲಿಕರಿಗೆ ನೋಟಿಸ್ ನೀಡಿದೆ.