ಬೆಂಗಳೂರು ಪೊಲೀಸ್ ಅಧಿಕಾರಿಯ ‘ಥರ್ಡ್ ಡಿಗ್ರಿ ಟ್ರೀಟ್ಮೆಂಟ್’ ವಿಡಿಯೋ ವೈರಲ್!

Sep 12, 2019, 12:49 PM IST

ಬೆಂಗಳೂರು (ಸೆ.12): ಈ ಸ್ಟೋರಿಯನ್ನ ಬೆಂಗಳೂರು ಪೊಲೀಸ್ ಕಮಿಷನರ್, ಗೃಹ ಮಂತ್ರಿ ನೋಡಲೇಬೇಕು. ಪೊಲೀಸರು ಕೊಡೋ ಟಾರ್ಚರ್ ನೋಡಿದರೆ ನಿಮ್ಮ ಎದೆ ಝಲ್ ಅನ್ನೋದು ಗ್ಯಾರಂಟಿ. ಕಳ್ಳತನ ಆರೋಪಿಗೆ ಠಾಣೆಯಲ್ಲೇ ಕಟ್ ಹಾಕಿ ಪೊಲೀಸ್ ಅಧಿಕಾರಿ ‘ಬಾಂಬೇ’ ತೋರಿಸಿದ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸ್ ಸ್ಟೇಷನ್ ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ಹೇಗಿರುತ್ತೆ?  ಈ ದೃಶ್ಯ ನೋಡಿ...

ಇದು ಬೆಂಗಳೂರು ನಗರದ ಪೊಲೀಸ್ ಠಾಣೆಯೊಂದರಲ್ಲಿನ ದೃಶ್ಯ. ಕಳ್ಳತನದ ಆರೋಪಿಯೊಬ್ಬ ಠಾಣೆಗೆ ಬರದೆ ತಲೆ ತಪ್ಪಿಸಿ ತಿರುಗುತ್ತಿದ್ದ. ಇದಕ್ಕಿದ್ದಂತೆ ಸಿಕ್ಕಿ ಬಿದ್ದವನ ಕರೆತಂದು ಪೊಲೀಸರು ರುಬ್ಬಿದ ಪರಿ ಹೀಗಿದೆ ನೋಡಿ...

ಬೆಂಗಳೂರು ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯ ಟಾರ್ಚರ್ ಸೀನ್ ಇದು. ಮನೆಗಳ್ಳತನದ ಆರೋಪಿ ಕಾಲ ಕಾಲಕ್ಕೆ ಪೊಲೀಸ್ ಠಾಣೆಗೆ ಬರಬೇಕಿತ್ತು.ಆತ ಠಾಣೆಗೆ ಬಾರದೇ ತಲೆ ತಪ್ಪಿಸಿ ತಿರುಗುತ್ತಾ ಸಿಕ್ಕಿ ಬಿದ್ದು ‘ಬಾಂಬೆ’ ನೋಡಿದ ಪರಿ. 

ಹೀಗೆ ಕಟ್ ಹಾಕಿ ಬಾಂಬೆ ತೋರಿಸಿದ್ದು ಸಬ್ ಇನ್ಸ್ಪೆಕ್ಟರ್ ಶ್ರೀಕಂಠೇಗೌಡ. ಸುಬ್ರಹ್ಮಣ್ಯ ನಗರದ ಸಬ್ ಇನ್ಸ್ಪೆಕ್ಟರ್ ಶ್ರೀಕಂಠೇಗೌಡ ‘ಪರಾಕ್ರಮ’ದ ದೃಶ್ಯ ಈಗ ವೈರಲ್ ಆಗಿದೆ.