Apr 30, 2022, 5:37 PM IST
ಚಿತ್ರದುರ್ಗ (ಏ. 30): ಅಂದಾಕ್ಷಣ ಎಲ್ಲರಿಗೂ ನೆನಪಾಗೋದು ಏಳುಸುತ್ತಿನ ಕಲ್ಲಿನ ಕೋಟೆ. ಆ ಕೋಟೆಯ ಹೆಬ್ಬಂಡೆಗಳು ಬೇಸಿಗೆಯ ಬಿಸಿಲಿಗೆ (Summer) ಹೇಗಿರಬಹುದು ಅಂತಾ ಸಣ್ಣ ಊಹೆ ಮಾಡಿಕೊಂಡ್ರೂ ಮೈ ಬೆಚ್ಚಗಾಗುತ್ತೆ. ಹೀಗಿರುವಾಗ ಇಂಥ ಜಾಗದಲ್ಲಿ ವಾಸ ಮಾಡುವ ಪ್ರಾಣಿ ಪಕ್ಷಿಗಳು ಹೇಗಿರುತ್ತವೆ. ವಿಶೇಷವಾಗಿ ಕೋತಿಗಳು ಏನು ಮಾಡುತ್ತವೆ ಅನ್ನೋದೇ ಇಂಟರೆಸ್ಟಿಂಗ್.!
ಐತಿಹಾಸಿಕ ನಗರಿ ಚಿತ್ರದುರ್ಗಕ್ಕೆ (Chitradurga) ಹೊಂದಿಕೊಂಡಿರುವ ಚಂದ್ರವಳ್ಳಿ ಕೆರೆಯಲ್ಲಿ. ಚಂದ್ರವಳ್ಳಿ ತೋಟ ಎಂದೇ ಹೆಸರಾಗಿರುವ ಈ ರಮಣೀಯ ಪ್ರವಾಸಿ ತಾಣದಲ್ಲಿ ಈಗ ಕೋತಿಗಳ ಕಲರವ ಶುರುವಾಗಿದೆ. ಬಿಸಿಲಿನ ಬೇಗೆ ತಾಳಲಾರದೇ ಹಿಂಡು ಹಿಂಡು ಕೋತಿಗಳು ಚಂದ್ರವಳ್ಳಿ ಕೆರೆಯಲ್ಲಿ, ಈಜುತ್ತಾ, ನೀರಾಟ ಆಡುತ್ತಾ ಬಿಸಿಲಿನ ಧಗೆ ಕಡಿಮೆ ಮಾಡಿಕೊಳ್ಳುತ್ತಿವೆ. ಕೋತಿಗಳ ಈ ನೀರಾಟದ ದೃಶ್ಯ ಪ್ರವಾಸಿಗರಿಗೆ ಹೊಸ ಮನರಂಜನೆಯಾಗಿದೆ. ಥೇಟ್ ಮನುಷ್ಯರಂತೆಯೇ ನೀರಲ್ಲಿ ಆಟವಾಡುವ ಕೋತಿಗಳ ಈ ದೃಶ್ಯವನ್ನು ಇಲ್ಲಿಗೆ ಬರುವ ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ. ಅವುಗಳ ಕುಚೇಷ್ಟೇ ಹಾಗು ಥೇಟ್ ಮನುಷ್ಯರಂತೆ ನೀರಿಗೆ ಹಾರುವ ಸಾಹಸ ಅಚ್ಚರಿ ಮೂಡಿಸ್ತಿದೆ.
ಸೀರೆಯುಟ್ಟು ಕುದುರೆ ಸವಾರಿ ಮಾಡೋ ಮೋನಾಲಿಸಾ: ಬುಲೆಟ್ ಲರಿಯನ್ನೂ ಓಡಿಸುವ ಗಟ್ಟಿಗಿತ್ತಿ
ಇನ್ನು ಚಿತ್ರದುರ್ಗದಿಂದ ಕೂಗಳತೆ ದೂರದಲ್ಲಿರುವ ಚಂದ್ರವಳ್ಳಿಗೆ ನಿತ್ಯವೂ ಬೆಳಗ್ಗೆ ಹಾಗೂ ಸಂಜೆ ನೂರಾರು ಜನ ವಾಕ್ ಬರ್ತಾರೆ. ವೀಕೆಂಡ್ ನಲ್ಲಿ ಸಾವಿರಾರುಜನ ಪ್ರವಾಸಿಗರು ಕೂಡಬರ್ತಾರೆ.ಆದರೆ ಕಳೆದ ಒಂದು ವಾರದಿಂದ ಬಿಸಿಲ ಝಳ ಹೆಚ್ಚಾಗಿದ್ದೂ,ಪ್ರವಾಸಿಗರ ಸಂಖ್ಯೆ ಸಹ ವಿರಳವಾಗಿದೆ. ಹೀಗಾಗಿ ಈ ಮೂಕ ಜೀವಿಗಳು ಆಹಾರವಿಲ್ಲದೇ ಪರದಾಡ್ತಿದ್ದೂ, ನೀರಾಟದಲ್ಲೇ ಕಾಲ ಕಳೆಯಿತ್ತಿವೆ. ಆದ್ದರಿಂದ ಸಂಬಂಧಪಟ್ಟ ಅರಣ್ಯ ಇಲಾಖೆ ಹಾಗು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಈ ಕೋತಿಗಳಿಗೆ ಆಹಾರ ವ್ಯವಸ್ಥೆ ಕಲ್ಪಿಸಬೇಕೆಂದು ಪ್ರಾಣಿಪ್ರಿಯ ಒತ್ತಾಯಿಸಿದ್ದಾರೆ.
ಒಟ್ಟಾರೆ ನೋಡುವವರ ಕಣ್ಣಿಗೆ ಕೋತಿಗಳ ನೀರಾಟ ಮನರಂಜನೆಯಾಗಿದೆ. ನೀರಿನಿಂದ ಸಾಮಾನ್ಯವಾಗಿ ದೂರವಿರುವ ಕೋತಿಗಳು ಕೆರೆ ನೀರಲ್ಲಿ ಕಾಲ ಕಳೆಯುತ್ತಿವೆ ಅಂದ್ರೆ ಬಿಸಿಲಿನ ತಾಪ ಎಷ್ಟರ ಮಟ್ಟಿಗೆ ಜೋರಾಗಿದೆ ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮರ, ಗಿಡಗಳನ್ನು ಬೆಳೆಸಿ, ನೀರನ್ನು ಮಿತವಾಗಿ ಬಳಸೋದನ್ನು ರೂಢಿಸಿಕೊಳ್ಳಬೇಕು.