ಬಿಗ್ ಬಾಸ್‌ಗೆ ಕಾಲಿಡುವ ಮುನ್ನ ಕೂದಲು ಕತ್ತರಿಸಿದ ಭವ್ಯಾ ಗೌಡ; ನೆಗೆಟಿವ್ ಆಗ್ತಿರೋದು ಜಾಸ್ತಿ ಎಂದ ನೆಟ್ಟಿಗರು!

First Published | Nov 27, 2024, 10:56 AM IST

ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳಬೇಕು ಎಂದು ಬಿಗ್ ಬಾಸ್‌ ಮನೆಗೆ ಕಾಲಿಡುವ ಮುನ್ನ ಕೂದಲು ಕತ್ತರಿಸಿದ ಭವ್ಯಾ ಗೌಡ......

ಗೀತಾ ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೆ ಪರಿಚಯವಾದ ಭವ್ಯಾ ಗೌಡ ಇದೀಗ ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಸುತ್ತಿದ್ದಾರೆ. ಬಿಬಿ ಮನೆಗೆ ಕಾಲಿಟ್ಟಿರುವ ಮೊದಲ ಸ್ಪರ್ಧಿನೇ ಭವ್ಯಾ. 

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಅಕ್ಟಿವ್ ಆಗಿರುವ ಭವ್ಯಾ ಗೌಡ ಬಿಗ್ ಬಾಸ್ ಆಫರ್‌ ಸಿಗುತ್ತಿದ್ದಂತೆ ಲುಕ್ ಬದಲಾಯಿಸಿಕೊಂಡಿದ್ದಾರೆ. ಹೇರ್ ಕಟ್ ಮಾಡಿಸಿಕೊಂಡು ಹೇರ್ ಸೆಟ್‌ ಮಾಡಿಸಿಕೊಂಡಿರುವ ಫೋಟೋ ಮತ್ತು ವಿಡಿಯೋ ಸಖತ್ ವೈರಲ್ ಆಗುತ್ತಿದೆ.

Tap to resize

ಭವ್ಯಾ ಕೂದಲು ಸಖತ್ ಆಗಿದೆ. ನ್ಯಾಚುರಲ್ ಬ್ಲಾಕ್ ಇರುವ ಕೂದಲಿಗೆ ಆಗಾಗ ಬಣ್ಣ ಹಾಕಿಸುತ್ತಾರೆ. ತಮ್ಮ ಉದ್ದವಾದ ಕೂದಲಿಗೆ ಸ್ವಲ್ಪ ಶೇಪ್ ಮತ್ತು ವಾಲ್ಯೂಮ್ ನೀಡಬೇಕು ಎಂದು ಭವ್ಯಾ ಗೌಡ ಹೇರ್‌ ಕಟ್ ಮಾಡಿಸಿದ್ದಾರೆ.

ಹೊಸ ಹೇರ್‌ ಕಟ್‌ನಲ್ಲಿ ಭವ್ಯಾ ಸೂಪರ್ ಆಗಿ ಕಾಣಿಸುತ್ತಿದ್ದರೂ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದರೂ ಕೂಡ ಕೊಂಚ ಅಸಮಾಧಾನ ಹೊರ ಹಾಕುತ್ತಿದ್ದಾರೆ. ನೆಟ್ಟಿಗರ ಲೆಕ್ಕಾಚಾರಕ್ಕೆ ಬಹುಷ ಭವ್ಯಾನೇ ಶಾಕ್ ಆಗಬಹುದು.

ಆರಂಭದಲ್ಲಿ ಅದ್ಭುತವಾಗಿ ಆಟವಾಡುತ್ತಿದ್ದ ಭವ್ಯಾ ಗೌಡ ಇದ್ದಕ್ಕಿದ್ದಂತೆ ಸ್ಲೋ ಆಗುತ್ತಾರೆ. ಗುಂಪು ಸೇರಿಕೊಂಡರು, ಗಾಸಿಪ್ ಮಾಡುತ್ತಾರೆ ಅಥವಾ ಯಾವ ರೀತಿಯಲ್ಲೂ ಮನೋರಂಜನೆ ನೀಡುತ್ತಿಲ್ಲ ಅನ್ನೋ ಮಾತುಗಳು ಕೇಳಿ ಬರುತ್ತಿದೆ. 

ಇದೇ ಸಮಯದಲ್ಲಿ ಹೇರ್‌ಕಟ್ ಮಾಡಿಸಿಕೊಂಡಿರುವ ವಿಡಿಯೋ ಕೂಡ ವೈರಲ್ ಆಗುತ್ತಿತ್ತು. ಶುಭ ಕಾರ್ಯ ಮಾಡುವ ಸಮಯದಲ್ಲಿ ಕೂದಲಿಗೆ ಕತ್ತರಿ ಹಾಕಬಾರದು ಎಂದು ಹೇಳುವುದು ಇದಕ್ಕೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

ಪ್ರಮೋಷನ್ ಅಥವಾ ಬ್ರಾಂಡ್ ಕೋಲಾಬೋರೇಷನ್‌ ಎಂದು ಹಲವರು ಕರೆಯುತ್ತಾರೆ ಆದರೆ ನಿಮ್ಮ ಜೀವನದಲ್ಲಿ ಒಳ್ಳೆ ಗಳಿಗೆ ನಡೆಯುತ್ತಿರುವಾಗ ಕೂದ ಕಟ್ ಮಾಡುವುದು, ಉಗುರು ಕಟ್ ಮಾಡುವುದು ಮಾಡಬಾರದು ಎಂದು ನೆಟ್ಟಿಗರು ಸಲಹೆ ಕೊಟ್ಟಿದ್ದಾರೆ.

ಇನ್ನು ಭವ್ಯಾ ಒಂದು ವಾರ ಕ್ಯಾಪ್ಟನ್ ಆಗಿದ್ದಾಗಲೂ ನೆಗೆಟಿವ್ ಟ್ರೋಲ್ ಆದರು. ಕ್ಯಾಪ್ಟನ್ ಪಟ್ಟ ಎಂಜಾಯ್ ಮಾಡಲು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಡಲಿಲ್ಲ ಅನ್ನೋ ಮಾತು ಭವ್ಯಾ ಹಂಚಿಕೊಂಡಿದ್ದರು. 

Latest Videos

click me!