Mangaluru : ಸಂಜೆ ಬಾಲಕಿ ನಾಪತ್ತೆ, ರಾತ್ರಿ ಚರಂಡಿಯಲ್ಲಿ ಶವವಾಗಿ ಪತ್ತೆ, ಕೊಲೆ ಶಂಕೆ

Nov 22, 2021, 10:57 AM IST

ಮಂಗಳೂರು (ನ. 22):  ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಪರಾರಿ ಎಂಬಲ್ಲಿ  ಚರಂಡಿಯಲ್ಲಿ (Drainage) ಎಂಟು ವರ್ಷದ ಬಾಲಕಿಯ ಶವ ಪತ್ತೆಯಾಗಿದೆ. ಬಾಲಕಿ ಕೊಲೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. 

Suvarna FIR : ದಾವಣಗೆರೆಯಲ್ಲೊಬ್ಬಳು, ಬಳ್ಳಾರಿಯಲ್ಲೊಬ್ಬಳು..ಕೈಗೆ ಮಗು ಕೊಟ್ಟ ಉಮೇಶ!

ಪರಾರಿಯಲ್ಲಿರುವ ಟೈಲ್ಸ್‌ ಫ್ಯಾಕ್ಟರಿಯೊಂದರಲ್ಲಿ 30ಕ್ಕೂ ಅಧಿಕ ಮಂದಿ ಕೆಲಸ ಮಾಡಿಕೊಂಡಿದ್ದಾರೆ. ಈ ಪೈಕಿ 20 ಮಂದಿ ಉತ್ತರ ಪ್ರದೇಶದವರು ಮತ್ತು 10 ಮಂದಿ ಕರ್ನಾಟಕದವರಾಗಿದ್ದಾರೆ. ಇಲ್ಲಿಯೇ ಕೆಲಸ ಮಾಡಿಕೊಂಡಿದ್ದ ಕಾರ್ಮಿಕ ದಂಪತಿಯ ಎಂಟು ವರ್ಷದ ಬಾಲಕಿ ಅಲ್ಲಿಯೇ ಆಟವಾಡಿಕೊಂಡಿದ್ದಳು. ಭಾನುವಾರ ಸಂಜೆ 4 ಗಂಟೆಯ ಬಳಿಕ ಕಣ್ಮರೆಯಾಗಿದ್ದಳು. ಬಳಿಕ ಹುಡುಕಾಡಿದಾಗ ಟೈಲ್ಸ್‌ ಫ್ಯಾಕ್ಟರಿಯ ಬಳಿಯ ಡ್ರೈನೇಜ್‌ನಲ್ಲಿ ಬಾಲಕಿ ಶವ ಪತ್ತೆಯಾಗಿದೆ. ಬಾಲಕಿಯ ಕುಟುಂಬಸ್ಥರು ಇದು ಕೊಲೆ ಇರಬಹುದು ಎಂಬ ಶಂಕೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಟೈಲ್ಸ್‌ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದ 19 ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.