Apr 26, 2020, 12:56 PM IST
ಬೆಂಗಳೂರು(ಏ.26): ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕಿಳಿದ ಪೊಲೀಸ್, ವೈದ್ಯರು, ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಸಿಬ್ಬಂದಿ ವಾಹನಗಳಿಗೆ ಉಚಿತ ಬ್ರೇಕ್ಡೌನ್ ಸರ್ವಿಸ್ ನೀಡಲು ಮೆಕ್ಯಾನಿಕ್ಸ್ ಲೈಫ್ ಅಸೋಸಿಯೇಷನ್ ನಿರ್ಧರಿಸಿದೆ. ಈ ಮೂಲಕ ಕೊರೋನಾ ವಾರಿಯರ್ಸ್ ಬೆಂಬಲಕ್ಕೆ ಮೆಕ್ಯಾನಿಕ್ಸ್ ನಿಂತಿದೆ.
ಒಬ್ಬ ಬಿಹಾರಿಯಿಂದ 29 ಜನಕ್ಕೆ ಅಂಟಿದ ಮಹಾಮಾರಿ: ಸೋಂಕಿತರ ಸಂಖ್ಯೆಯಲ್ಲಿ ಬೆಂಗಳೂರು ನಂ.1..!
ವಾಹನಗಳು ರಸ್ತೆಯಲ್ಲಿ ಕೆಟ್ಟು ನಿಂತರೆ ಒಂದು ಕರೆ ಮಾಡಿದರೆ ಸಾಕು ಮೆಕ್ಯಾನಿಕ್ಸ್ ಲೈಫ್ ಅಸೋಸಿಯೇಷನ್ ತಂಡ ಬಮದು ವಾಹನವನ್ನ ಉಚಿತವಾಗಿ ರಿಪೇರಿ ಮಾಡಿಕೊಡಲಾಗುತ್ತದೆ. ಸುಮಾರು 40 ಮೆಕ್ಯಾನಿಕ್ಗಳ ತಂಡ ಈ ಸೇವೆಯನ್ನ ನೀಡಲಿದೆ.