ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿರುವ ಗೊರವನಹಳ್ಳಿ ಮಹಾಲಕ್ಷ್ಮೀ ಕ್ಷೇತ್ರ. ಇಂದು ಬೆಳ್ಳಂಬೆಳಗ್ಗೆಯೇ ಸಂಬಂಧಿಕರೊಡನೆ ದೇಗುಲಕ್ಕೆ ಭೇಟಿ ನೀಡಿದರು.ವಿಶೇಷ ಪೂಜೆ ಸಲ್ಲಿಸಿದರು.
ಮಹಾಲಕ್ಷ್ಮಿ ತಾಯಿಯ ದರ್ಶನ ಮಾಡಿ, ಪೂಜೆ ಸಲ್ಲಿಸಿದ ಸುಧಮ್ಮ ಬಳಿಕ ದೇವಸ್ಥಾನದ ಆಡಳಿತ ಮಂಡಳಿ ಜೊತೆ ಕೆಲಕಾಲ ಚರ್ಚೆ ನಡೆಸಿದರು. ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಸುಧಾಮೂರ್ತಿಯವರಿಗೆ ಸನ್ಮಾನಿಸಿ ಗೌರವಿಸಿದರು.
ಸಾವಿರಾರು ಕೋಟಿ ಒಡತಿಯಾದರೂ ಯಾವುದೇ ದೊಡ್ಡಸ್ತಿಕೆ ಹಮ್ಮುಬಿಮ್ಮು ಇಲ್ಲದೆ ಸಾಮಾನ್ಯರಂತೆ ಬದುಕುವ ಅವರ ಜೀವನ ಶೈಲಿಗೆ ಜನರು ಮೆಚ್ಚದವರೇ ಇಲ್ಲ ಎನ್ನಬಹುದು. ಯಾವುದೇ ಗೌಜುಗದ್ದಲವಿಲ್ಲದೆ ದೇವಸ್ಥಾನಕ್ಕೆ ಸಾಮಾನ್ಯರಂತೆ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಅಗಮಿಸಿದರು.
ಸುಧಾಮೂರ್ತಿ ದೇವಸ್ಥಾನ ಬರುತ್ತಿದ್ದಂತೆ ದೇವಾಲಯದ ಆಡಳಿತ ಮಂಡಳಿ ಹಾರ ಹಾಕಿ ಸ್ವಾಗತಿಸಿದರು. ಬಳಿಕ ದೇವಸ್ಥಾನದೊಳಗೆ ತೆರಳಿ ತಾಯಿ ಮಹಾಲಕ್ಷ್ಮೀ ದೇವಿರಗೆ ಆರತಿ ಬೆಳಗಿಸಿ ವಿಶೇಷವಾಗಿ ಪ್ರಾರ್ಥಿಸಿದರು.
ಜೀವನದಲ್ಲಿ ಕಷ್ಟ ಸುಖಗಳು ಪ್ರತಿಯೊಬ್ಬ ಮನುಷ್ಯನಿಗೂ ನಿರಂತರ. ಅವು ಶ್ರೀಮಂತರಿಗೂ ಬರುತ್ತವೆ, ಬಡವರಿಗೂ ಬರುತ್ತವೆ ಎನ್ನುವ ಸುಧಾಮೂರ್ತಿಯವರು ಹೇಳುವ ಮಾತು, ಮಾತಿನಂತೆ ಸರಳವಾಗಿ ಬದುಕು ಅವರ ವ್ಯಕ್ತಿತ್ವ ಬಲು ಆಕರ್ಷಣೀಯವಾದುದು