Jun 9, 2021, 8:52 AM IST
ಉತ್ತರ ಕನ್ನಡ (ಜೂ.09) : ಆಹಾರ, ಬಟ್ಟೆ, ಔಷಧ, ಶೌಚ ಸೇರಿದಂತೆ ಹಲವು ವಿಚಾರಕ್ಕೆ ಇನ್ನೊಬ್ಬರನ್ನು ಅವಲಂಬಿಸಬೇಕಾಗಿರುವ ಎಂಡೋ ಪೀಡಿತರ ಬಗ್ಗೆ ಸರಕಾರ ನಿರ್ಲಕ್ಣ್ಯ ವಹಿಸಿದೆ.
ಲಾಕ್‌ಡೌನ್ ತಂದ ಸಂಕಷ್ಟ: ಒಪ್ಪತ್ತಿನ ಊಟಕ್ಕೂ ಪರದಾಡುತ್ತಿರುವ ಕುಟುಂಬ..!
ಎಂಡೋಸಲ್ಫಾನ್ ಭಾದಿತ ಜಿಲ್ಲೆಗಳಲ್ಲಿ ಉತ್ತರಕನ್ನಡ ಕೂಡಾ ಒಂದಾಗಿದ್ದು, ಜಿಲ್ಲೆಯಾದ್ಯಂತ ಸುಮಾರು ಎರಡು ಸಾವಿರ ಪೀಡಿತರು ಇದ್ದಾರೆ. ಆದರೆ, ಕಳೆದ ಎರಡು ತಿಂಗಳಿನಿಂದ ಈ ಪೀಡಿತರಿಗೆ ಚಿಕಿತ್ಸೆಯೂ ಇಲ್ಲ, ಔಷಧವೂ ಇಲ್ಲದಂತಾಗಿದೆ. ಕೊರೊನಾ, ಲಾಕ್ ಡೌನ್ ಜಾರಿಯಾಗಿರುವ ಈ ಸಂದರ್ಭದಲ್ಲಿ ಪೀಡಿತರ ಕುಟುಂಬಸ್ಥರು ಚಿಕಿತ್ಸೆಗಾಗಿ ಪರದಾಡುವಂತಾಗಿದೆ.