Omicron Variant : ಗಡಿಯಲ್ಲಿ ಹೈ ಅಲರ್ಟ್ : ನೆಗೆಟಿವ್ ರಿಪೋರ್ಟ್ ಇದ್ರಷ್ಟೇ ಪ್ರವೇಶ

Nov 30, 2021, 1:38 PM IST

ಮಂಗಳೂರು(ನ.30): ಒಮಿಕ್ರಾನ್ (Omicron) ಆತಂಕ ಬೆನ್ನಲ್ಲೇ ಗಡಿಯಲ್ಲಿ ಹೈ ಅಲರ್ಟ್ (High Alert) ಘೋಷಣೆಯಾಗಿದೆ. ಕೊರೋನಾ (Corona) ರೂಪಾಂತರಿಯಾದ ಹೊಸ ತಳಿ  ಪತ್ತೆಯಾಗಿದ್ದು, ಇದರ  ನಿಯಂತ್ರಣದ ಉದ್ದೇಶದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.  ಕರ್ನಾಟಕ  - ಕೇರಳ (Kerala) ಗಡಿಯಲ್ಲಿ ತಪಾಸಣೆ ಚುರುಕು ಮಾಡಲಾಗಿದೆ.  ಮಂಗಳೂರಿನ ತಲಪಾಡಿಯಲ್ಲಿ ಫುಲ್ ಹೈ ಅಲರ್ಟ್  ಮಾಡಲಾಗಿದ್ದು ಹೆಚ್ಚುವರಿ ಪೊಲೀಸ್ ಸಿಬ್ಬಂದಿ  ನೇಮಿಸಲಾಗಿದೆ.  ನೆಗೆಟಿವ್  ರಿಪೋರ್ಟ್ ಇದ್ದರೆ ಮಾತ್ರ  ರಾಜ್ಯಕ್ಕೆ ಪ್ರವೇಶಿಸಲು ಅನುಮತಿ ನೀಡಲಾಗುತ್ತಿದೆ. ಪ್ರತೀ 15 ದಿನಕ್ಕೊಮ್ಮೆ ರಿಪೋರ್ಟ್  ಕೊಡಲು ಸೂಚನೆ ನೀಡಲಾಗಿದೆ. 

Covid-19 Variant: ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ!

ಸದ್ಯ 14 ದೇಶಗಳಲ್ಲಿ ಒಮಿಕ್ರಾನ್  ಆತಂಕ ತಲೆದೋರಿದ್ದು, ಇದರಿಂದ ಎಲ್ಲೆಡೆ ಕಟ್ಟು ನಿಟ್ಟಿನ ಕ್ರಮ  ಕೈಗೊಳ್ಳಲಾಗುತ್ತಿದೆ.  ವಿವಿಧ  ದೇಶಗಳಿಂದ ಆಗಮಿಸುವ ಪ್ರಯಾಣಿಕರ ಮೇಲೆ ನಿಗಾ ವಹಿಸಲಾಗಿದೆ.  ಏರ್‌ಪೋರ್ಟ್‌ಗಳಲ್ಲಿಯೂ ಕಟ್ಟುನಿಟ್ಟಿನ  ನಿಯಮಗಳನ್ನು ಜಾರಿ ಮಾಡಲಾಗಿದೆ.