vuukle one pixel image

ರೇಣುಕಾಸ್ವಾಮಿ ಕೊಲೆ ಪ್ರಕರಣ: ಆರೋಪಿ ರವಿಶಂಕರ್‌ ಜೈಲುಪಾಲು..ಪತ್ನಿ ಕವಿತಾ ಅಳಲು

Jun 29, 2024, 12:20 PM IST

ಚಿತ್ರದುರ್ಗ: ದರ್ಶನ್ & ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ (Renukaswamy murder case) ಸಂಬಂಧಿಸಿದಂತೆ ಎ8 ಆರೋಪಿ ರವಿಶಂಕರ್ ಜೈಲು (Accused A8 Ravi Shankar) ಪಾಲಾಗಿದ್ದಾನೆ. ಈ ಹಿನ್ನೆಲೆ ಆತನ ಕುಟುಂಬ ಕಂಗಾಲಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ರವಿ ಪತ್ನಿ ಕವಿತಾ (wife Kavita) ಅಳಲು ತೋಡಿಕೊಂಡಿದ್ದು, ನಿನ್ನೆ ನಮ್ಮ ಪತಿಯನ್ನು ನೋಡಲು ತುಮಕೂರು(Tumakuru) ಜೈಲಿಗೆ ಹೋಗಿದ್ವಿ. ಗಂಡನನ್ನು ನೋಡಲಿಕ್ಕೂ ಬೆಳಗ್ಗೆಯಿಂದ ಸಂಜೆವರೆಗೂ ಕಾಯಿಸಿದ್ರು. ನನ್ನನ್ನು ನೋಡಿದ ಕೂಡಲೇ ನನ್ನ ಗಂಡ ತುಂಬಾ ಅಳ್ತಿದಾರೆ. ನಾನೇನು ತಪ್ಪು ಮಾಡಿಲ್ಲ ಆದರೂ ನನಗ್ಯಾಕೆ ಈ ಶಿಕ್ಷೆ. ಕೇವಲ 15  ದಿನಕ್ಕೆ ನನಗೆ ಈ ರೀತಿ ಇರಲು ಆಗ್ತಿಲ್ಲ. ಜೈಲಲ್ಲಿ ವಾತಾವರಣ ಸರಿಯಿಲ್ಲ, ನನಗೆ ಇಲ್ಲಿ ಇರಲು ಆಗ್ತಿಲ್ಲ ಎಂದರು. ನಮಗೆ ಧೈರ್ಯ ಹೇಳುವವರೇ ಈ ರೀತಿ ಹೇಳಿದಾಗ ಏನು ಮಾಡಬೇಕು ಅಂತ ಗೊತ್ತಾಗ್ಲಿಲ್ಲ. ನನ್ನ ಗಂಡನ ಸ್ಥಿತಿ ನೋಡಿ ನಮಗೆ ಬಹಳ ಬೇಸರ ಆಗ್ತಿದೆ. ಇಡೀ ದಿನ ಕೆಲಸ ಬಿಟ್ಟು ಮಕ್ಕಳನ್ನು ಕಟ್ಕೊಂಡ್ ಹೋದ್ರು 5 ನಿಮಿಷ ಮಾತನಾಡೋಕೆ ಟೈಮ್ ಕೊಡ್ಲಿಲ್ಲ. ಇಡೀ ದಿನ ಕಾದರೂ ಸಂಜೆ 5.30ಕ್ಕೆ ಭೇಟಿ ಅವಕಾಶ ಕೊಟ್ಟರು. 5 ನಿಮಿಷಕ್ಕೆ ಡೋರ್ ಕ್ಲೋಸ್ ಮಾಡಿ ಒಳಗೆ ಕಳಿಸಿದ್ರು. ಜೊತೆಗಿದ್ದವರು ದೂರ ಇರೋದಕ್ಕೆ ತುಂಬಾ ನೋವಾಗ್ತಿದೆ. ನಮ್ಮ ಮಕ್ಕಳಂತೂ ಅಪ್ಪನನ್ನು ನೋಡಿ ತುಂಬಾ ಅತ್ತರು ಎಂದು ಕವಿತಾ ಹೇಳಿದರು.

ಇದನ್ನೂ ವೀಕ್ಷಿಸಿ:  ಎಲ್ಲಾ ಹಣವನ್ನ ಕ್ಯಾಷ್‌ಗೆ ಕನ್ವರ್ಟ್ ಮಾಡಿ ನುಂಗಲು ಸಿದ್ದತೆ..? ಕುರಿಗಾಹಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿತ್ತು ಲಕ್ಷ ಲಕ್ಷ..!