ಮ್ಯಾಕ್ಸ್ ಚಿತ್ರವು ಈ ವರ್ಷದ ಸೂಪರ್ ಹಿಟ್ ಎಂಬುದನ್ನು ಕೆಆರ್‌ಜಿ ಸಂಸ್ಥೆಯ ಕಾರ್ತಿಕ್ ಗೌಡ ಅವರು ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ದೃಢ ಪಡಿಸಿದ್ದಾರೆ. ಆದರೆ, ಇತ್ತೀಚೆಗೆ ಹರಿದಾಡುತ್ತಿರುವಂತೆ ಇದು ನೂರು ಕೋಟಿ ಕ್ಲಬ್ ಸೇರಿದ್ದು ಹೌದಾ..
ಕನ್ನಡದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ನಟನೆಯ 'ಮ್ಯಾಕ್ಸ್' ಚಿತ್ರವು (Max) ಜನಮೆಚ್ಚುಗೆ ಗಳಿಸಿದ್ದು ಗೊತ್ತೇ ಇದೆ. ಸೂಪರ್ ಹಿಟ್ ಆಗಿರುವ ಮ್ಯಾಕ್ಸ್ ಸಿನಿಮಾ ಬಗ್ಗೆ ಹೀಗೊಮದು ಸುದ್ದಿ ಹರಿದಾಡುತ್ತಿದೆ. ಅದೇನೆಂದರೆ 'ಮ್ಯಾಕ್ಸ್ ಸಿನಿಮಾ ಗಳಿಕೆ ನೂರು ಕೋಟಿ ಕ್ಲಬ್ ಸೇರಿದೆ' ಎನ್ನುವ ಸುದ್ದಿ. ಆಕ್ಷನ್-ಥ್ರಿಲ್ಲರ್ ಜೋನರ್ ಸಿನಿಮಾ ಆಗಿರುವ ಮ್ಯಾಕ್ಸ್ ಚಿತ್ರವು ಸುದೀಪ್ ನಟನೆಯಲ್ಲಿ ಮೂಡಿ ಬಂದಿರುವ ಒಂದು ವಿಭಿನ್ನ ಸಿನಿಮಾ ಎನ್ನಲಾಗುತ್ತಿದೆ. 2024r ಕೊನೆಯಲ್ಲಿ, ಅಂದರೆ 25 5ಡಿಸೆಂಬರ್ 2024ರಂದು ಈ ಸಿನಿಮಾ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗಿದೆ.
ಬಿಡುಗಡೆಯಾದ ಎಲ್ಲಾ ಕಡೆ ಮ್ಯಾಕ್ಸ್ ಸಿನಿಮಾಕ್ಕೆ ಉತ್ತಮ ರೆಸ್ಪಾನ್ಸ್ ದೊರಕಿದ್ದು, ಕನ್ನಡದಲ್ಲಿ ಸಿಕ್ಕಾಪಟ್ಟೆ ಎಂಬಷ್ಟು ಕ್ರೇಜ್ ಸೃಷ್ಟಿಸಿದೆ. ಉಪೇಂದ್ರ ಯುಐ ಎದುರು ಕಿಚ್ಚ ನಟನೆಯ ಮ್ಯಾಕ್ಸ್ ಸಿನಿಮಾ ತಲೆ ಎತ್ತಿ ನಿಂತಿದೆ. ಇನ್ನು ಮ್ಯಾಕ್ಸ್ ಸಿನಿಮಾ ಸಕ್ಸಸ್ ಬಗ್ಗೆ ಯಾರಿಗೂ ಸಂದೇಹವಿಲ್ಲ. ಆದರೆ ಅಧೀಕೃತವಾಗಿ ಸಿನಿಮಾ ಗಳಿಕೆ ಬಗ್ಗೆ ಎಲ್ಲೂ ಮಾಹಿತಿ ಹೊರಬಿದ್ದಿರಲಿಲ್ಲ. ಆದರೆ ಈ ಬಗ್ಗೆ ಕರ್ನಾಟಕದಲ್ಲಿ ಈ ಚಿತ್ರವನ್ನು ಡಿಸ್ಟ್ರಿಬ್ಯೂಟ್ ಮಾಡಿರುವ ಕೆಆರ್‌ಜಿ ಸಂಸ್ಥೆ ಇದೀಗ ಈ ಚಿತ್ರವು ದೊಡ್ಡಮಟ್ಟದಲ್ಲಿ ಗಳಿಕೆ ಕಂಡಿದೆ ಎಂಬುದನ್ನು ಬಹಿರಂಗ ಪಡಿಸಿದ್ದು, ಅಂಕಿ-ಸಂಖ್ಯೆಯನ್ನು ಇನ್ನಷ್ಟೇ ಬಿಡುಗಡೆ ಮಾಡಬೇಕಿದೆ.
ಒಂದೇ ಸಿನಿಮಾದಲ್ಲಿ ದರ್ಶನ್-ಸುದೀಪ್, ಡೈರೆಕ್ಟರ್ & ಪ್ರೊಡ್ಯೂಸರ್ ಫಿಕ್ಸ್ ಆಯ್ತು...!?
ಆದರೆ, ಮ್ಯಾಕ್ಸ್ ಚಿತ್ರವು ಈ ವರ್ಷದ ಸೂಪರ್ ಹಿಟ್ ಎಂಬುದನ್ನು ಕೆಆರ್‌ಜಿ ಸಂಸ್ಥೆಯ ಕಾರ್ತಿಕ್ ಗೌಡ (Karthik Gowda) ಅವರು ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ದೃಢ ಪಡಿಸಿದ್ದಾರೆ. ಆದರೆ, ಇತ್ತೀಚೆಗೆ ಹರಿದಾಡುತ್ತಿರುವಂತೆ ಇದು ನೂರು ಕೋಟಿ ಕ್ಲಬ್ ಸೇರಿದ್ದು ಹೌದಾ ಎಂಬ ಬಗ್ಗೆ ಅಧಿಕೃತ ದಾಖಲೆ ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ಏಕೆಂದರೆ, ದಿನನಿತ್ಯದ ಕಲೆಕ್ಷನ್ ಕೂಡ ಇನ್ನಷ್ಟೇ ಕನ್ಫರ್ಮ್ ಆಗಬೇಕಿದ್ದು, ಈ ಬಗ್ಗೆ ಆಫೀಸಿಯಲ್ ರೆಕಾರ್ಡ್ ಬಿಡುಗಡೆ ಆಗುವುದನ್ನೇ ಎಲ್ಲರೂ ಕಾಯುತ್ತಿದ್ದಾರೆ.
ಮ್ಯಾಕ್ಸ್ ಚಿತ್ರದ ಹಕ್ಕನ್ನು 'ಕೆಆರ್‌ಜಿ ಸ್ಟುಡಿಯೋಸ್' ಪಡೆದುಕೊಂಡಿದೆ. ಈ ಸಂಸ್ಥೆಯ ಮುಖ್ಯಸ್ಥರಲ್ಲಿ ಒಬ್ಬರಾದ ಕಾರ್ತಿಕ್ ಗೌಡ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. '2024ರ ಕೊನೆಯಲ್ಲಿ ಇದ್ದೇವೆ. ಈ ವರ್ಷ ಕರ್ನಾಟಕದಲ್ಲಿ ಅತಿ ಹೆಚ್ಚು ಗಳಿಸಿದ ಸಿನಿಮಾ ಮ್ಯಾಕ್ಸ್' ಎಂದು ಅವರು ಬರೆದುಕೊಂಡು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಈ ಯಶಸ್ಸಿಗೆ ಕಾರಣವಾದ ಕೆಆರ್‌ಜಿ ತಂಡಕ್ಕೆ ಧನ್ಯವಾದ ಹೇಳಿದ್ದಾರೆ. ಕಿಚ್ಚ ಸುದೀಪ್ ಅವರು ಮ್ಯಾಕ್ಸ್ ಚಿತ್ರದ ಮುಖ್ಯ ಆಧಾರ ಸ್ಥಂಭ. ಅವರಿಗೆ ಕಾರ್ತಿಕ್ ಗೌಡ ಅವರು ಧನ್ಯವಾದ ಹೇಳೋದನ್ನು ಮರೆತಿಲ್ಲ.
ಕಿಚ್ಚ ಸುದೀಪ್ 'ಮ್ಯಾಕ್ಸ್' ಈ ವರ್ಷದ ಸೂಪರ್ ಹಿಟ್ ಚಿತ್ರ; ಘೋಷಿಸಿದ್ದು ಯಾರು?
ಅಂದಹಾಗೆ, ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಚಿತ್ರವು ಹಿಟ್ ದಾಖಲಿಸುವ ಮೂಲಕ ಸುದೀಪ್ ಅಭಿಮಾನಿಗಳ ಮುಖದಲ್ಲಿ ಸಂತಸ ಮೂಡಿಸಿದೆ. ಈ ಮೊದಲು ತೆರೆಗೆ ಬಂದಿದ್ದ ಪೈಲ್ವಾನ್ ಹಾಗೂ ವಿಕ್ರಾಂತ್ ರೋಣ ಚಿತ್ರಗಳು ನಿರೀಕ್ಷೆಗೆ ತಕ್ಕಂತೆ ಇರಲಿಲ್ಲ. ಗಳಿಕೆ ಹಾಗು ಜನಮೆಚ್ಚುಗೆ ದೃಷ್ಟಿಯಿಂದ ನಟ ಸುದೀಪ್ ಅವರಿಗೆ ಈಗ ಒಂದು ಹಿಟ್ ಸಿನಿಮಾದ ಅಗತ್ಯ ಇತ್ತು. ಅದನ್ನು ಈಗ ಬಂದಿರುವ ಮ್ಯಾಕ್ಸ್ ಚಿತ್ರವು ಪೂರೈಸಿದೆ. ಸದ್ಯ ಸುದೀಪ್ ಗೆಲುವಿನ ನಗೆ ಬೀರಿದ್ದು, ಹಳೆಯ ಸೋಲನ್ನು ಮರೆತು ಹೊಸ ಸಕ್ಸಸ್ ಎಂಜಾಯ್ ಮಾಡುತ್ತಿದ್ದಾರೆ. ಈ ಚಿತ್ರವು ನೂರು ಕೋಟಿ ಕ್ಲಬ್ ಸೇರಿದ್ದರೆ ಕನ್ನಡಿಗರು ಖಂಡಿತ ಸಂಭ್ರಮ ಪಡುವ ಸುದ್ದಿಯೇ ಹೌದು.