ಸಲ್ಲು ಕೈ ಹಿಡಿದ ರಾಧಿಕಾ ಅಂಬಾನಿ, ವಿಡಿಯೋ ವೈರಲ್

Published : Jan 03, 2025, 06:48 PM ISTUpdated : Jan 04, 2025, 08:09 AM IST
ಸಲ್ಲು ಕೈ ಹಿಡಿದ ರಾಧಿಕಾ ಅಂಬಾನಿ, ವಿಡಿಯೋ ವೈರಲ್

ಸಾರಾಂಶ

ರಾಧಿಕಾ ಮರ್ಚೆಂಟ್, ಸಲ್ಮಾನ್ ಖಾನ್ ಜೊತೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದು, ಅವರನ್ನು ಕೈಹಿಡಿದು ಪಕ್ಕದಲ್ಲಿ ಕೂರಿಸಿಕೊಂಡ ವಿಡಿಯೋ ವೈರಲ್ ಆಗಿದೆ. ಅಂಬಾನಿ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಸಲ್ಮಾನ್, ರಾಧಿಕಾ-ಅನಂತ್ ಮದುವೆಯಲ್ಲೂ ಭಾಗವಹಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಅಂಬಾನಿ ಕುಟುಂಬ (Ambani family)ದ ಕಿರಿ ಸೊಸೆ ರಾಧಿಕಾ ಮರ್ಚೆಂಟ್ (Radhika Merchant) ಎಲ್ಲಿಗೆ ಹೋದ್ರೂ ಸುದ್ದಿಯಲ್ಲಿರ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಚರ್ಚೆಯಲ್ಲಿರುವ ಸೆಲೆಬ್ರಿಟಿ ರಾಧಿಕಾ ಮರ್ಚೆಂಟ್. ಈಗ ಬಾಲಿವುಡ್ ದಬಾಂಗ್ ಸಲ್ಮಾನ್ ಖಾನ್ (Dabangg Salman Khan) ಕೈ ಹಿಡಿದು ರಾಧಿಕಾ ಗಮನ ಸೆಳೆದಿದ್ದಾರೆ. ರಾಧಿಕಾ ಹಾಗೂ ಸಲ್ಮಾನ್ ಖಾನ್ ಒಟ್ಟಿಗಿರುವ ವಿಡಿಯೋ ಒಂದು ವೈರಲ್ ಆಗಿದೆ. ರಾಧಿಕಾ ಮರ್ಚೆಂಟ್, ಸಲ್ಮಾನ್ ಖಾನ್ ದೊಡ್ಡ ಅಭಿಮಾನಿ. ಈ ಹಿಂದೆ ರಾಧಿಕಾ ಈ ವಿಷ್ಯವನ್ನು ಹೇಳಿದ್ದರು. ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಇಬ್ಬರು ಒಟ್ಟಿಗೆ ಮಾತನಾಡ್ತಿರೋದನ್ನು ಕಾಣ್ಬಹುದು.

ಸಲ್ಮಾನ್ ಖಾನ್, ಕಾರ್ಯಕ್ರಮವೊಂದಕ್ಕೆ ಎಂಟ್ರಿ ಆಗ್ತಿದ್ದಾರೆ. ಅಲ್ಲಿಯೇ ಕುಳಿತಿದ್ದ ರಾಧಿಕಾ, ಸಲ್ಮಾನ್ ಖಾನ್ ಕೈ ಹಿಡಿದು, ತಮ್ಮ ಪಕ್ಕದಲ್ಲಿ ಕುಳಿತುಕೊಳ್ಳುವಂತೆ ಹೇಳ್ತಾರೆ. ದೇಶದ ಶ್ರೀಮಂತ ಸೊಸೆ ಆಹ್ವಾನ ಕೊಟ್ರೆ ಬೇಡ ಅನ್ನೋಕೆ ಆಗುತ್ತಾ? ಸಲ್ಮಾನ್ ಖಾನ್, ರಾಧಿಕಾ ಮಾತಿಗೆ ಮನ್ನಣೆ ನೀಡಿ, ಅಲ್ಲಿಯೇ ಕುಳಿತುಕೊಳ್ತಾರೆ. ರಾಧಿಕಾ ಹಾಗೂ ಸಲ್ಮಾನ್ ಒಟ್ಟಿಗಿರುವ ಫೋಟೋ ಕೂಡ ಇನ್ಸ್ಟಾದಲ್ಲಿ ಪೋಸ್ಟ್ ಆಗಿದೆ. 

ಓರಿ ಹಿಡಿದಿದ್ದು ಚಿಪ್ಸ್ ಪ್ಯಾಕ್ ಅಲ್ಲ, ಬೆಲೆ ಕೇಳಿದ್ರೆ ದಂಗಾಗ್ತೀರಿ

ಈ ವಿಡಿಯೋ ನೋಡಿದ ಜನರು ಕಮೆಂಟ್ ಶುರು ಮಾಡಿದ್ದಾರೆ. ರಾಧಿಕಾ, ಸಲ್ಮಾನ್ ಖಾನ್ ಬಿಗ್ ಫ್ಯಾನ್, ಸಲ್ಮಾನ್ ಗತ್ತೇ ಅಂತಹದ್ದು,  2025ರಲ್ಲಿ ಸಲ್ಮಾನ್ ಖಾನ್ ಲಕ್ ಬದಲಾಗ್ತಿದೆ ಎಂದೆಲ್ಲ ಜನರು ಕಮೆಂಟ್ ಮಾಡಿದ್ದಾರೆ.

ರಾಧಿಕಾ ಹಾಗೂ ಸಲ್ಮಾನ್ ಖಾನ್ ಒಟ್ಟಿಗೆ ಕಾಣಿಸಿಕೊಂಡಿದ್ದು ಇದೇ ಮೊದಲಲ್ಲ. ಅಂಬಾನಿ ಕುಟುಂಬದ ಜೊತೆ ಸಲ್ಮಾನ್ ಖಾನ್ ಉತ್ತಮ ಸಂಬಂಧ ಹೊಂದಿದ್ದಾರೆ. ರಾಧಿಕಾ ಮರ್ಚೆಂಟ್ ಹಾಗೂ ಅನಂತ್ ಅಂಬಾನಿ ಮದುವೆ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಭಾಗಿಯಾಗಿದ್ದರು. ಸಂಗೀತ ಕಾರ್ಯಕ್ರಮ, ಹಳದಿ ಸೇರಿದಂತೆ ಮದುವೆಯ ಬಹುತೇಕ ಎಲ್ಲ ಕಾರ್ಯಕ್ರಮಗಳಲ್ಲಿ ಸಲ್ಮಾನ್ ಮಿಂಚಿದ್ದರು. ಮದುವೆ, ರಿಸೆಪ್ಷನ್ ನಲ್ಲಿ ಪಾಲ್ಗೊಂಡಿದ್ದ ಸಲ್ಮಾನ್ ಖಾನ್, ಆಶೀರ್ವಾದ ಕಾರ್ಯಕ್ರಮಕ್ಕೆ ಮಿಸ್ ಆಗಿದ್ದರು. ಆದ್ರೆ ನವ ದಂಪತಿಗೆ ಆಶೀರ್ವಾದ ಮಾಡೋದನ್ನು ಸಲ್ಮಾನ್ ಮರೆತಿರಲಿಲ್ಲ. ನವ ಜೋಡಿಗೆ ವಿಶೇಷ ಸಂದೇಶವನ್ನು ಸಲ್ಮಾನ್ ರವಾನೆ ಮಾಡಿದ್ದರು. ಜುಲೈ 15ರಂದು ಎಕ್ಸ್ ಖಾತೆಯಲ್ಲಿ ರಾಧಿಕಾ ಮತ್ತು ಅನಂತ್ ಮದುವೆ ಫೋಟೋ ಹಂಚಿಕೊಂಡಿದ್ದ ಸಲ್ಮಾನ್ ಖಾನ್, ಮದುವೆಯ ಶುಭ ಕೋರಿದ್ದರು. ಅನಂತ್ ಹಾಗೂ ರಾಧಿಕಾ ಮಧ್ಯೆ ಇರುವ ಬಾಂಡಿಂಗ್ ಹೊಗಳಿದ್ದರು. ಅಲ್ಲದೆ, ನೀವು ಪಾಲಕರಾದ್ಮೇಲೆ ನಾನು ಡಾನ್ಸ್ ಮಾಡ್ತೇನೆ ಎಂಬ ಭರವಸೆಯನ್ನು ನೀಡಿದ್ದರು.

ಕಿಚ್ಚ ಸುದೀಪ್ 'ಮ್ಯಾಕ್ಸ್' ಸಿನಿಮಾ ಗಳಿಕೆ 100 ಕೋಟಿ ಕ್ಲಬ್ ಸೇರಿದೆ; ಈ ಸುದ್ದಿ ನಿಜವೇ?

ಸಂಗೀತ ಕಾರ್ಯಕ್ರಮ ಹಾಗೂ ಹಳದಿ ಸಮಾರಂಭದ ವಿಡಿಯೋದಲ್ಲಿ, ಸಲ್ಮಾನ್ ಖಾನ್, ಅನಂತ್ ಹಾಗೂ ರಾಧಿಕಾ ಜೊತೆ ಡಾನ್ಸ್ ಮಾಡೋದನ್ನು ನೀವು ನೋಡ್ಬಹುದು. ಸಲ್ಮಾನ್ ಖಾನ್ ಗೆ ಅನಂತ್ ಅಂಬಾನಿ ವಿಶೇಷ ವಾಚ್ ಗಿಫ್ಟ್ ಕೂಡ ಮಾಡಿದ್ದರು. 

ಇನ್ನು ಮದುವೆಯಾದ್ಮೇಲೆ ರಾಧಿಕಾ ಎಲ್ಲ ಕಡೆ ಕಾಣಿಸಿಕೊಳ್ತಿದ್ದಾರೆ. ಸ್ನೇಹಿತರ ಜೊತೆ ಕ್ರಿಸ್ಮಸ್ ಪಾರ್ಟಿ ಮಾಡಿದ್ದ ರಾಧಿಕಾ, ಅಂಬಾನಿ ಫ್ಯಾಮಿಲಿ ಜೊತೆ ಹೊಸ ವರ್ಷವನ್ನು ಆಚರಿಸಿದ್ದಾರೆ. ನಂತ್ ಹಾಗೂ ರಾಧಿಕಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿವೆ. ಇತ್ತ ಸಲ್ಮಾನ್ ಖಾನ್ ಕೂಡ ಸಿನಿಮಾ ಶೂಟಿಂಗ್ ಹಾಗೂ ಬಿಗ್ ಬಾಸ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಸಿಕಂದರ್ 2025ರಲ್ಲಿ ತೆರೆಗೆ ಬರಲಿದ್ದು, ಈ ವರ್ಷ ಸಲ್ಮಾನ್ ಅಭಿನಯದ 89 ಚಿತ್ರಗಳು ಬಿಡುಗಡೆಯಾಗುವ ಸಾಧ್ಯತೆ ಇದೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Actor Dileep Case: ಖ್ಯಾತ ನಟಿ ಮೇಲಿನ ಅ*ತ್ಯಾಚಾರ ಆರೋಪ; 8 ವರ್ಷಗಳ ಹೋರಾಟ, ನಟ ದಿಲೀಪ್‌ಗೆ ನಿರಾಳ!
ಗಂಡನ ಜಾಕೆಟ್ ಕದ್ದ ದೀಪಿಕಾ ಪಡುಕೋಣೆ.. ಅಂಥ ಪರಿಸ್ಥಿತಿಗೆ ಬಂದು ತಲುಪಿದ್ರಾ ಬಾಲಿವುಡ್ ಸ್ಟಾರ್ ನಟಿ?