ಕೋವಿಡ್ ರೀತಿಯಲ್ಲೇ ಮತ್ತೆ ಚೀನಾದಲ್ಲಿ ವೈರಸ್ ಸ್ಫೋಟಗೊಂಡಿದೆ. ಚೀನಾ ಆಸ್ಪತ್ರೆ ತುಂಬಿದೆ. ಸಾವು ನೋವು ಹೆಚ್ಚಾಗುತ್ತಿದೆ. ಮತ್ತೆ ಕೋವಿಡ್ ರೀತಿಯ ಪರಿಸ್ಥಿತಿ ಸೂಚನೆಗಳು ಚೀನಾದಲ್ಲಿ ಕಾಣುತ್ತಿದೆ. ಇದರ ಬೆನ್ನಲ್ಲೇ ಭಾರತ ಅಲರ್ಟ್ ಆಗಿದೆ.
ನವದೆಹಲಿ(ಜ.03) ಚೀನಾ ಇದೀಗ ಮತ್ತೊಮ್ಮೆ ವಿಶ್ವದ ಆತಂಕ ಹೆಚ್ಚಿಸಿದೆ. ಅಂದು ಚೀನಾದಲ್ಲಿ ಕೋವಿಡ್ ವೈರಸ್ ಸ್ಫೋಟಗೊಂಡಂತೆ ಇದೀಗ HMPV ವೈರಸ್ ಉಲ್ಬಣಿಸಿದೆ. ಹ್ಯೂಮನ್ ಮೆಟಾನ್ಯೂಮೋವೈರಸ್ ಹೆಸರಿನ ಹೊಸ ಸಾಂಕ್ರಾಮಿಕ ರೋಗದಿಂದ ಚೀನಾ ತತ್ತರಿಸಿದೆ. ಡಿಸೆಂಬರ್ 2ನೇ ವಾರದಲ್ಲಿ ಈ ವೈರಸ್ ಚೀನಾದಲ್ಲಿ ಕಾಣಿಸಿಕೊಂಡಿದೆ. ಜನವರಿ ಆರಂಭದಲ್ಲಿ ಚೀನಾದಲ್ಲಿ HMPV ವೈರಸ್ ಸ್ಫೋಟಗೊಂಡಿದೆ. ಆಸ್ಪತ್ರೆಗಳು ಭರ್ತಿಯಾಗಿದೆ. ಸಾವು ನೋವಿನ ಸಂಖ್ಯೆ ಹೆಚ್ಚಾಗುತ್ತಿದೆ.ಚೀನಾದಲ್ಲಿ 5 ವರ್ಷಗಳ ಹಿಂದೆ ಕಾಣಿಸಿಕೊಂಡ ಕೋವಿಡ್ ಪರಿಸ್ಥಿತಿ ಮತ್ತೆ ಮರುಕಳಿಸಿದೆ. ಚೀನಾದಲ್ಲಿ HMPV ವೈರಸ್ ಆತಂಕ ಭಾರತಕ್ಕೂ ತಟ್ಟಿದೆ. ಹೀಗಾಗಿ ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ರಾಷ್ಟ್ರೀಯ ರೋಗ ನಿಯಂತ್ರಕ ಕೇಂದ್ರ(NCDC) ಚೀನಾದ HMPV ವೈರಸ್ ಮೇಲೆ ತೀವ್ರ ನಿಗಾವಹಿಸಿದೆ.
2019ರಲ್ಲಿ ಕೋವಿಡ್ ಪರಿಸ್ಥಿತಿಗೂ ಇದೀಗ ಉದ್ಭವಿಸಿರುವ HMPV ವೈರಸ್ ಪರಿಸ್ಥಿತಿಗೂ ಹೆಚ್ಚಿನ ವತ್ಯಾಸಗಳಿಲ್ಲ. ಆದರೆ ಕೋವಿಡ್ ರೀತಿ ಮಾರಕವಾಗಲಿದೆಯಾ ಅನ್ನೋದು ಸದ್ಯಕ್ಕೆ ಆತಂಕದ ವಿಚಾರ. ಈ ಬಾರಿಯೂ ಚೀನಾ HMPV ವೈರಸ್ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಡಿಸೆಂಬರ್2ನೇ ವಾರದಲ್ಲಿ ಕಾಣಿಸಿಕೊಂಡರೂ ಇದುವರೆಗೆ ಚೀನಾ ಅಧಿಕೃತವಾಗಿ ವೈರಸ್ ಕುರಿತು ಪ್ರಕಟಣೆ ನೀಡಿಲ್ಲ. ಎಲ್ಲವನ್ನೂ ಗೌಪ್ಯವಾಗಿಡುವ ಪ್ರಯತ್ನ ಮಾಡಿದೆ.
ಚೀನಾದಲ್ಲಿ HMPV ವೈರಸ್ ಹರಡುತ್ತಿದ್ದಂತೆ ಭಾರತ ಅಲರ್ಟ್ ಆಗಿದೆ. ಅಂತಾರಾಷ್ಟ್ರೀಯ ಎಜೆನ್ಸಿ, ಚೀನಾ ಆರೋಗ್ಯ ಸಚಿವಾಲ, ವಿಶ್ವ ಆರೋಗ್ಯ ಸಂಸ್ಥೆ ಜೊತೆ ನಿರಂತರ ಸಂಪರ್ಕದಲ್ಲಿದೆ. ವೈರಸ್ ಕುರಿತ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಈಗಾಗಲೇ ತಜ್ಞ ವೈದ್ಯರ ತಂಡ ಈ ಕುರಿತು ತೀವ್ರ ನಿಗಾವಹಿಸಿದೆ. ಭಾರತವನ್ನು HMPV ವೈರಸ್‌ನಿಂದ ಮುಕ್ತವಾಗಿಡಲು ಎಲ್ಲಾ ಪ್ರಯತ್ನಗಳು ಆರಂಭಗೊಂಡಿದೆ. ಶೀಘ್ರದಲ್ಲೇ ಭಾರತ ಕೆಲ ಮಾರ್ಗಸೂಚಿ ಹೊರಡಿಸುವ ಸಾಧ್ಯತೆ ಇದೆ.
ಚೀನಾದಲ್ಲಿ ಮತ್ತೆ ವೈರಸ್ ಸ್ಫೋಟ: ಭಾರಿ ಸಾವು?: ಶವಾಗಾರಗಳು ಫುಲ್, ಸ್ಮಶಾನದಲ್ಲೂ ಜಾಗವಿಲ್ಲ!
ಭಾರತದಲ್ಲಿ ತೀವ್ರ ನಿಘಾವಹಿಸಲು ಚರ್ಚೆಗಳು ನಡೆಯುತ್ತಿದೆ. ಮುನ್ನಚ್ಚೆರಿಕಾ ಕ್ರಮ, ಭಾರತಕ್ಕೆ ಆಗಮಿಸುವ ಪ್ರಯಾಣಿಕರ ತಪಾಸಣೆ ಸೇರಿದಂತೆ ಹಲವು ಕ್ರಮಗಳು ಜಾರಿಯಾಗುವ ಸಾಧ್ಯತೆ ಇದೆ. ಸದ್ಯ ಚೀನಾದಲ್ಲಿ ಕಾಣಿಸಿಕೊಂಡ HMPV ವೈರಸ್ ಮತ್ತಷ್ಟು ಆತಂಕದ ವಾತಾವರಣ ಸೃಷ್ಟಿಸಿದರೆ ಭಾರತದಲ್ಲಿ ಕೋವಿಡ್ ರೀತಿಯ ಆರಂಭಿಕ ಮಾರ್ಗಸೂಚಿಗಳು ಜಾರಿಯಾಗಲಿದೆ. ಸದ್ಯ ಚೀನಾದಲ್ಲಿ ಕೆಲ ಪ್ರಾಂತ್ಯಗಳಲ್ಲಿ ಈ ವೈರಸ್ ಸ್ಫೋಟಗೊಂಡಿದೆ. ಕೋವಿಡ್ ರೀತಿಯಲ್ಲೇ ಈ ವೈರಸ್ ಅಷ್ಟೇ ವೇಗದಲ್ಲಿ ಹರಡುತ್ತಿದೆಯಾ ಅನ್ನೋ ಕುರಿತು ಅಧ್ಯಯನಗಳು ನಡೆಯುತ್ತಿದೆ.
HMPV ವೈರಲ್ ಗುಣಲಕ್ಷಣ
ಆರಂಭದಲ್ಲಿ ಶೀತ, ಜ್ವರ, ಗಂಟಲು ನೋವು, ಕೆಮ್ಮು, ಮೂಗು ಸೋರುವಿಕೆ, ಉಸಿರಾಟದ ಸಮಸ್ಯೆ ಸೇರಿದಂತೆ ಕೆಲ ಗುಣಲಕ್ಷಣಗಳು ಕಾಣಿಸಿಕೊಳ್ಳಲಿದೆ. ಪ್ರಮುಖವಾಗಿ ಮಕ್ಕಳು ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಈ HMPV ವೈರಸ್ ಗಂಭೀರ ಪರಿಣಾಮ ಸೃಷ್ಟಿಸಲಿದೆ. ಹೀಗಾಗಿ ಎಚ್ಚರ ವಹಿಸಬೇಕಿದೆ.
ಕೋವಿಡ್ ರೀತಿಯಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಸ್ಯಾನಿಟೈಸೇಶನ್, ಜನ ಸಂದಣಿಗಳಿಂದ ದೂರವಿರುವುದು, ಭೇಟಿ ಸೇರಿದಂತೆ ಇತರ ಸೋಶಿಯಲ್ ಚಟುವಟಿಕೆ ಕಡಿಮೆ ಮಾಡುವುದು ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಗಳು ಉತ್ತಮವಾಗಿದೆ.
ಚೀನಾದಲ್ಲಿನ ಪರಿಸ್ಥಿತಿಯನ್ನು ಕೂಲಂಕುಷವಾಗಿ ಗಮನಿಸುತ್ತಿರುವ ಭಾರತೀಯ ಆರೋಗ್ಯ ಸಚಿವಾಲಯ ಹಾಗೂ ರಾಷ್ಟ್ರೀಯ ರೋಗ ನಿಯಂತ್ರಕ ಕೇಂದ್ರ ಪರಿಸ್ಥಿತಿಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದೆ. ಇದಕ್ಕೂ ಮೊದಲು ಮತ್ತೆ ಆರೋಗ್ಯ ಕೇಂದ್ರಗಳ ಸಿದ್ಧತೆಗೆ ಸದ್ದಿಲ್ಲದೆ ತಯಾರಿ ನಡೆಸುತ್ತಿದೆ. ಈ ಮೂಲಕ ಭಾರತ ಈ ರೀತಿಯ ವೈರಸ್ ಎದುರಿಸಲು ಸರ್ವ ರೀತಿಯಲ್ಲೂ ಸನ್ನದ್ಧವಾಗಿರುವಂತೆ ನೋಡಿಕೊಳ್ಳುತ್ತಿದೆ.
ಚೀನಾದಲ್ಲಿ HMPV virus ದಾಳಿ; ಏನು ಮಾಡ್ಬೇಕು, ಏನ್ ಮಾಡ್ಬಾರದು ಇಲ್ಲಿದೆ ಸಂಪೂರ್ಣ ವಿವರ..