IPL

IPL 2020: ಸೂಪರ್ ಸಂಡೇ ಮ್ಯಾಚ್‌ ಹೇಗಿದ್ವು..?

Oct 12, 2020, 1:40 PM IST

ಬೆಂಗಳೂರು(ಅ.12): ಸೂಪರ್ ಸಂಡೇಯಲ್ಲಿ ಐಪಿಎಲ್‌ ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಕ್ಕಿದೆ. ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದಾರಾಬಾದ್ ತಂಡಗಳು ಮುಖಾಮುಖಿಯಾಗಿದ್ದರೆ, ಮತ್ತೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಡಿದ್ದವು.

ಮೊದಲ ಪಂದ್ಯದಲ್ಲಿ ಹೈದರಾಬಾದ್ ಎದುರು ರಾಹುಲ್ ತೆವಾಟಿಯಾ ಹಾಗೂ ರೆಯಾನ್ ಪರಾಗ ಆಕರ್ಷಕ ಜತೆಯಾಟದ ಮೂಲಕ ತಂಡವನ್ನು ರೋಚಕವಾಗಿ ಗೆಲುವಿನ ದಡ ಸೇರಿದರೆ, ಮತ್ತೊಂದು ಪಂದ್ಯದಲ್ಲಿ ಬಲಿಷ್ಠ ಡೆಲ್ಲಿಗೆ ತಿರುಗೇಟು ನೀಡುವಲ್ಲಿ ಮುಂಬೈ ಇಂಡಿಯನ್ಸ್ ತಂಡ ಯಶಸ್ವಿಯಾಗಿದೆ.

ಐಪಿಎಲ್ 2020: ಮೂರನೇ ವಾರದಲ್ಲಿ RCB ಪ್ರದರ್ಶನ ಹೇಗಿತ್ತು?

ಎರಡು ಪಂದ್ಯಗಳಲ್ಲೂ ಚೇಸ್‌ ಮಾಡಿದ ತಂಡಗಳು 5 ವಿಕೆಟ್‌ಗಳ ಜಯ ದಾಖಲಿಸಿದ್ದು ಮತ್ತೊಂದು ವಿಶೇಷ. ಈ ಎರಡು ಪಂದ್ಯಗಳು ಹೇಗಿದ್ದವು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.