Kanpur Violence: ಉತ್ತರ ಪ್ರದೇಶದಲ್ಲಿ ನಮಾಝ್ ಬಳಿಕ ತೀವ್ರ ಹಿಂಸಾಚಾರ: ಮತ್ತೆ ಬರುತ್ತಾ ಯೋಗಿಯ ಬುಲ್ಡೋಜರ್?

Jun 5, 2022, 8:30 PM IST

ಉತ್ತರ ಪ್ರದೇಶ (ಜೂ. 05): ಉತ್ತರ ಪ್ರದೇಶ ಮತ್ತೆ ಕಲ್ಲು ತೂರಾಟದಿಂದ ಸದ್ದು ಮಾಡ್ತಾ ಇದೆ. ಯೋಗಿ ನಾಡಿನಲ್ಲಿ ಹಿಂಸಾಚಾರ ಮತ್ತೆ ಮುಂದುವರೆದಿದೆ. ಬಿಜೆಪಿ ನಾಯಕಿಯ ಒಂದು ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿ ಶಾಂತಿ ಧೂತರ ಶಾಂತಿಯುತ ಪ್ರತಿಭಟನೆ ಕಾವೇರಿದೆ. ಪರಿಣಾಮ ಕಾನ್ಪುರ ಪ್ರಕ್ಷುಬ್ಧವಾಗಿದೆ. 
ಉತ್ತರ ಪ್ರದೇಶದ ಕಾನ್ಪುರ ಮತ್ತೊಮ್ಮೆ ಕೋಮುಗಲಭೆಯಿಂದ ಸದ್ದು ಮಾಡಿದೆ. ಯೋಗಿ ನಾಡಿನಲ್ಲಿ ಮುಸ್ಲಿಂ ಸಮುದಾಯ ಬೀದಿಗಿಳಿದು ಪ್ರತಿಭಟನೆ ಹೆಸರಲ್ಲಿ ಶಾಂತಿ ಕದಡೋ ಕೆಲಸ ಮಾಡ್ತಾ ಇದೆ. ಕಂಡ ಕಂಡಲ್ಲಿ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸ್ತಾ ಇದೆ. 

ಇದನ್ನೂ ಓದಿ: ಅಯೋಧ್ಯೆ, ಮಥುರಾ ಸುತ್ತ ಎಣ್ಣೆ ಬ್ಯಾನ್‌: ಮದ್ಯ ಮಾರಿದ್ದು ಸಾಕು ಹಾಲು ಮಾರಿ ಅಂದ ಯೋಗಿ

ಟಿವಿ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮುಹಮ್ಮದ್ ಅವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಬಿಜೆಪಿ ರಾಷ್ಟ್ರೀಯ ವಕ್ತಾರರಾದ ನೂಪುರ್ ಶರ್ಮಾ ಅವರ ವಿರುದ್ಧ ಮುಸ್ಲಿಂ ಸಂಘಟನೆಗಳು ಉದ್ರಕ್ತರಾಗಿದ್ದಾರೆ.. ಮಹಾರಾಷ್ಟ್ರದ ಪುಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪುಣೆ ಮುನ್ಸಿಪಲ್ ಕಾರ್ಪೊರೇಷನ್ ಮಾಜಿ ಕಾರ್ಪೊರೇಟರ್ ಅಬ್ದುಲ್ ಗಫೂರ್ ಪಠಾಣ್ ನೀಡಿದ ದೂರಿನ ಮೇರೆಗೆ ಮಂಗಳವಾರ ಕೊಂಡ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದ್ರೆ ಕಾನೂನು ಹೋರಾಟ ಒಂದು ಕಡೆ ಆಗ್ತಾ ಇದ್ರೆ ಇನ್ನೊಂದು ಕಡೆ ಪುಂಡರ ಗುಂಪು ಕಾನೂನನ್ನೇ ಕೈಗೆತ್ತಿಕೊಂಡಿದೆ.  ಹಾಗಾದ್ರೆ ಕಾನ್ಪುರದಲ್ಲಿ ಆಗಿದ್ದೇನು ಹಾಗೂ ಆಗ್ತಿರೋದೇನು ಅನ್ನೋದ್ರ ಕಂಪ್ಲೀಟ್ ಮಾಹಿತಿ ಇಲ್ಲಿದೆ