UP Election ಕ್ರಿಕೆಟ್‌ ಮೊರೆ ಹೋದ ಬಿಜೆಪಿ ಚಾಣಕ್ಯ ಅಮಿತ್ ಶಾ

Mar 2, 2022, 6:17 PM IST

ಲಕ್ನೋ, (ಮಾ.02): ಉತ್ತರ ಪ್ರದೇಶದಲ್ಲಿ ಆರನೇ ಹಂತದ ಚುನಾವಣೆಗೆ ಇನ್ನೇನು ಒಂದೇ ದಿನ ಬಾಕಿ ಇದೆ. ರಾಜಕೀಯ ಪಕ್ಷಗಳ ನೇತಾರರು ಪ್ರಚಾರಕಣದಲ್ಲಿ ಮತದಾರರನ್ನು ಓಲೈಸಲು ಸರ್ವರೀತಿಯ ತಂತ್ರ ಪ್ರತಿತಂತ್ರಗಳನ್ನು ಮಾಡುತ್ತಿದ್ದಾರೆ. ಈಗ ಪ್ರಚಾರ ಕಣದಲ್ಲಿ ಕ್ರಿಕೆಟ್‌ ಸದ್ದು ಮಾಡತೊಡಗಿದೆ.ಖುಷಿನಗರ ಚುನಾವಣಾ ಸಭೆಯಲ್ಲಿ ಮಾತನಾಡಿದ ಬಿಜೆಪಿ ಚಾಣಕ್ಯ ಅಮಿತ್ ಶಾ, ಕ್ರಿಕೆಟ್‌ಅನ್ನು  ಪ್ರಸ್ತಾಪಿಸಿ ಅಖಿಲೇಶ್‌ ಯಾದವ್‌ ವಿರುದ್ಧ ವಾಗ್ದಾಳಿ ನಡೆಸಿದರು.   

UP Election ಇದು ರಾಷ್ಟ್ರವಾದಿ ಹಾಗೂ ಪರಿವಾರವಾದಿ ನಡುವಿನ ಚುನಾವಣೆ ಹೋರಾಟ, ಯುಪಿ ರ‍್ಯಾಲಿಯಲ್ಲಿ ಮೋದಿ ಗುಡುಗು!

ಅಖಿಲೇಶ್ ಯಾದವ್ ಫುಲ್ ಟಾಸ್ ಬೌಲಿಂಗ್ ಮಾಡಿದರೆ ಯಾವ ಒಳ್ಳೆಯ ಬ್ಯಾಟ್ಸ್‌ಮನ್‌ ಕೂಡ ಇಂತಹ ಅವಕಾಶವನ್ನು ಸುಮ್ಮನೆ ಬಿಡುವುದಿಲ್ಲ. ಹೀಗಾಗಿಯೇ 2022ರಲ್ಲೂ ಬಿಜೆಪಿ ಬೆಂಬಲಿಗರು ಖಂಡಿತವಾಗಿ ಬೌಂಡರಿ ಬಾರಿಸುತ್ತಾರೆ, ಎಂದು ಅಮಿತ್ ಶಾ ಹೇಳಿದರು.

2013ರಲ್ಲಿ  ಬಿಜೆಪಿ ಖುಷಿನಗರದಿಂದಲೇ ವಿಜಯ್ ಅಭಿಯಾನ್‌ಅನ್ನು ಆರಂಭಿಸಿತ್ತು. 2014ರಲ್ಲಿ ಇಡಿ ದೇಶ ಮೋದಿಗೆ ಮತನೀಡಿ ಅಧಿಕಾರಕ್ಕೆ ತಂದರು. ಅಖಿಲೇಶ್ ಒಬ್ಬ ದುರ್ಬಲ ಬೌಲರ್‌, ನಾವು ಬೌಂಡರಿ ಬಾರಿಸಬೇಕಾಗಿದೆ, ಎಂದು ಅಮಿತ್  ಶಾ ಹೇಳಿದ್ದಾರೆ.