ಕನ್ನಡ ಕಿರುತೆರೆಯ ನಾಗಿಣಿ, ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೆ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಟ್ರಾವಲಿಂಗ್ ಮತ್ತು ಸಿನಿಮಾ ಶೂಟಿಂಗ್ ಎರಡನ್ನೂ ಮ್ಯಾನೇಜ್ ಮಾಡುತ್ತಿದ್ದಾರೆ.
ದೀಪಿಕಾ ದಾಸ್ ಮದುವೆ ಆದ ಮೇಲೆ ನಟಿಸಿರುವ ಸಿನಿಮಾ ಹ್ಯಾಷ್‌ಟ್ಯಾಗ್ ಪಾರು ಪಾರ್ವತಿ ಸಿನಿಮಾದ ಫಸ್ಟ್ ಲುಕ್ ಮತ್ತು ಟೈಟಲ್ ಲಾಂಚ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತ್ತು. ಬಹಳ ದಿನಗಳ ನಂತರ ದೀಪಿಕಾ ದಾಸ್ ಪ್ರತಿಯೊಬ್ಬರ ಜೊತೆ ಮಾತನಾಡಿದ್ದಾರೆ.
ಪ್ರಯಾಣ ಮಾಡುವುದು ಅಂದ್ರೆ ದೀಪಿಕಾ ದಾಸ್‌ಗೆ ಸಿಕ್ಕಾಪಟ್ಟೆ ಇಷ್ಟ. ಮದುವೆಗೂ ಮುನ್ನ ಇದ್ದಕ್ಕಿದ್ದಂತೆ ಬ್ಯಾಕ್ ಪ್ಯಾಕ್ ಮಾಡಿಕೊಂಡು ವಿದೇಶಕ್ಕೆ ಹಾರಿರುವ ಘಟನೆಗಳು ಸಾಕಷ್ಟಿದೆ, ಏಕೆಂದರೆ ಇನ್‌ಸ್ಟಾಗ್ರಾಂನಲ್ಲಿ ಪ್ರತಿಯೊಂದನ್ನು ಅಪ್ಲೋಡ್ ಮಾಡುತ್ತಾರೆ.
ಇತ್ತೀಚಿಗೆ ದೀಪಿಕಾ ದಾಸ್ ಬಾಲಿ ಕಡೆ ಪ್ರಯಾಣ ಮಾಡಿದ್ದರು. ಅಲ್ಲಿನ ಕೆಲವೊಂದ ಸಂಸ್ಕೃತಿ ಸಂಸ್ಕಾರ ಪಾಲಿಸುವ ಜಾಗದಲ್ಲಿ ಅವರ ನಿಯಮ ಉಲ್ಲಂಘನೆ ಮಾಡುವಂತಿಲ್ಲ. ಹೀಗಾಗಿ ಅಲ್ಲಿನ ಶೈಲಿಯನ್ನು ಉಡುಪು ಧರಿಸಿ ಪ್ರವೇಶಿಸತಕ್ಕದ್ದು.
ಪುರಾತಣ ದೇವಸ್ಥಾನಕ್ಕೆ ದೀಪಿಕಾ ದಾಸ್ ಭೇಟಿ ನೀಡಿದ್ದಾರೆ. ಅಲ್ಲಿನ ಶೈಲಿಯನ್ನು ಫಾಲೋ ಮಾಡಿದ್ದಾರೆ. ಬಾಲಿ ಜನರಂತೆ ಸೀರೆ ಧರಿಸಿ ಕೈಯಲ್ಲಿ ಛತ್ರಿ ಹಿಡಿದು ಪೋಸ್ ಕೊಟ್ಟಿದ್ದಾರೆ.
'ನಮ್ಮ ನಡುವೆ ಬೇರೆ ಭಾಷ, ಬೇರೆ ಸಂಪ್ರದಾಯ ಮತ್ತು ಬೇರೆ ಬೇರೆ ಮೈ ಬಣ್ಣ ಇರಬಹುದು ಆದರೆ ನಾವೆಲ್ಲಾ ಸೇರುವುದು ಮನುಷ್ಯನ ಜಾತಿಗೆ' ಎಂದು ದೀಪಿಕಾ ದಾಸ್ ಬರೆದುಕೊಂಡಿದ್ದಾರೆ.
ಹಸಿರು ಮತ್ತು ಕ್ರೀಂ ಕಾಂಬಿಷೇನ್‌ನಲ್ಲಿ ದೀಪಿಕಾ ದಾಸ್ ಸೀರೆ ಧರಿಸಿ ಗೋಪುರದ ಮುಂದೆ ಪೋಸ್ ಕೊಟ್ಟಿದ್ದಾರೆ. ಆದರೆ ಇದಕ್ಕೆ ಬ್ಲೌಸ್ ಹಾಕಿಲ್ಲ ಅನ್ನೋದು ನೆಟ್ಟಿಗರಿಗೆ ಬೇಸರ ತಂದಿದೆ.
ನೀವು ಯಾವ ದೇಶಕ್ಕೆ ಬೇಕಿದ್ದರೂ ಹೋಗಿ ಎಷ್ಟು ಬೇಕಿದ್ದರೂ ಹಣ ಖರ್ಚು ಮಾಡಿ ಆದರೆ ದಯವಿಟ್ಟು ನಮ್ಮ ಸಂಸ್ಕಾರವನ್ನು ಮರೆಯಬೇಡಿ..ಬ್ಲೌಸ್ ಧರಿಸಿರುವ ಫೋಟೋ ಹಾಕಿ ಎಂದು ನೆಟ್ಟಿಗರು ಗರಂ ಆಗಿದ್ದಾರೆ.