ರೀಚಾ ಚಡ್ಡಾ ಪ್ರಗ್ನೆನ್ಸಿ ಫೋಟೋ ಶೂಟ್ ವೈರಲ್ : ಹೊಟ್ಟೆ ತೋರಿಸಿದ್ದಕ್ಕೆ ನೆಟ್ಟಿಗರ ಸಿಟ್ಟು

Published : Sep 23, 2024, 10:42 AM ISTUpdated : Sep 23, 2024, 10:48 AM IST

ನಿನ್ನೆ ಹೆಣ್ಣು ಮಕ್ಕಳ ದಿನವನ್ನು ಬಹುತೇಕ ಬಾಲಿವುಡ್ ನಟಿಯರು, ಸೆಲೆಬ್ರಿಟಿಗಳು ಹಾಗೂ ಸಾಮಾನ್ಯ ಹೆಣ್ಣು ಮಕ್ಕಳ ಫೋಷಕರು ಹಾಗೂ ಮಕ್ಕಳು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್ ಹಾಕುವ ಮೂಲಕ ಆಚರಿಸಿದರು. ಅದೇ ರೀತಿ ಬಾಲಿವುಡ್ ನಟಿ ರೀಚಾ ಚಡ್ಡಾ ಕೂಡ ತಮ್ಮ ಮೆಟರ್ನಿಟಿ ಫೋಟೋಗಳನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. 

PREV
16
ರೀಚಾ ಚಡ್ಡಾ ಪ್ರಗ್ನೆನ್ಸಿ ಫೋಟೋ ಶೂಟ್ ವೈರಲ್ : ಹೊಟ್ಟೆ ತೋರಿಸಿದ್ದಕ್ಕೆ ನೆಟ್ಟಿಗರ ಸಿಟ್ಟು

ನಿನ್ನೆ ಹೆಣ್ಣು ಮಕ್ಕಳ ದಿನವನ್ನು ಬಹುತೇಕ ಬಾಲಿವುಡ್ ನಟಿಯರು, ಸೆಲೆಬ್ರಿಟಿಗಳು ಹಾಗೂ ಸಾಮಾನ್ಯ ಹೆಣ್ಣು ಮಕ್ಕಳ ಫೋಷಕರು ಹಾಗೂ ಮಕ್ಕಳು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್ ಹಾಕುವ ಮೂಲಕ ಆಚರಿಸಿದರು. ಅದೇ ರೀತಿ ಬಾಲಿವುಡ್ ನಟಿ ರೀಚಾ ಚಡ್ಡಾ ಕೂಡ ತಮ್ಮ ಇದುವರೆಗೆ ತೋರಿಸದ ಅಪರೂಪದ ಪ್ರಗ್ನೆನ್ಸಿ ಫೋಟೋ ಶೂಟ್‌ನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಹೆಣ್ಣು ಮಕ್ಕಳ ದಿನವನ್ನು ಆಚರಿಸಿ ಪುಟ್ಟ ಮಗಳಿಗೆ ಭಾವುಕವಾಗಿ ಶುಭ ಹಾರೈಸಿದ್ದಾರೆ. ಆದರೆ ಅವರ ವಿಶ್‌ಗಿಂತಲೂ ಹೆಚ್ಚಾಗಿ ಜನರ ಗಮನ ಸೆಳೆದಿದ್ದು ಆಕೆಯ ಪ್ರಗ್ನೆನ್ಸಿ ಫೋಟೋ ಶೂಟ್‌

26

ತಿಳಿ ಹಳದಿ ಬಣ್ಣದ ಸೀರೆಯನ್ನು ಸೊಂಟದಿಂದ ಕೆಳಗೆ ಮಾತ್ರ ಉಟ್ಟಿರುವ ರೀಚಾ ತಮ್ಮ ತುಂಬು ಗರ್ಭದ ಹೊಟ್ಟೆಯನ್ನು ಹಿಡಿದು ಫೋಟೋಗಳಿಗೆ ಫೋಸ್ ನೀಡಿದ್ದಾರೆ. ಎದೆಭಾಗವನ್ನು ಶಾಲಿನಿಂದ ಕವರ್ ಮಾಡಲಾಗಿದ್ದು,  ಹೊಟ್ಟೆ ಹಾಗೂ ಎದೆಸೀಳಿನಲ್ಲಿ ಸುಂದರವಾದ ಹೂವಿನ ರಂಗೋಲಿ ಚಿತ್ತಾರವನ್ನು ಬಿಡಿಸಲಾಗಿದೆ. ಒಂದು ಕೈಯಲ್ಲಿ ಹೊಟ್ಟೆಯನ್ನು ಹಿಡಿದು ಮತ್ತೊಂದು ಕೈ ಸೊಂಟದ ಮೇಲಿಟ್ಟು ರೀಚಾ ಫೋಟೋಗಳಿಗೆ ಫೋಸ್ ನೀಡಿದ್ದಾರೆ. ಅಲ್ಲದೇ ಅವರು ಈ ಫೋಸ್ಟನ್ನು ಮಾಯಾ ಏಂಜೆಲೋ ಅವರಿಗೆ ಟ್ಯಾಗ್ ಮಾಡಿ, ಹೀಗೆ ಬರೆದುಕೊಂಡಿದ್ದಾರೆ. 'ನನ್ನ ತಾಯಿ ತನ್ನ ರಕ್ಷಣಾತ್ಮಕ ಪ್ರೀತಿಯನ್ನು ನನ್ನ ಸುತ್ತಲೂ ಚೆಲ್ಲಿದರು, ಮತ್ತು ಏಕೆ ಎಂದು ತಿಳಿಯದೆ, ಜನರು ನನಗೆ ಮೌಲ್ಯವಿದೆ ಎಂದು ಭಾವಿಸಿದರು, ನೀನು ಯಾವಾಗಲೂ ಮೌಲ್ಯವನ್ನು ಹೊಂದಿರುವೆ ಪುಟ್ಟ ಹುಡುಗಿ' ಎಂದು ರೀಚಾ ಬರೆದುಕೊಂಡಿದ್ದಾರೆ. 

36

ಈ ಫೋಟೋ ಶೂಟ್‌ನ ಹಿನ್ನೆಲೆಯನ್ನು ರೀಚಾ ವಿವರಿಸಿದ್ದು, ಈ ಫೋಟೋಗಳನ್ನು ನನ್ನ ಗರ್ಭಧಾರಣೆಯ 9 ನೇ ತಿಂಗಳಲ್ಲಿ  ಹರ್ಷಾ ಫೋಟೋಗ್ರಾಫಿಯವರು @harshphotography11 ) ತೆಗೆದಿದ್ದಾರೆ. ನನ್ನ ದೇಹದ ಮೇಲಿನ ಪವಿತ್ರ ರೇಖಾಗಣಿತ ಚಿಹ್ನೆಗಳನ್ನು ಅಂದರೆ ನನ್ನ ಹೊಕ್ಕುಳಿನ ಮೇಲೆ ಜೀವನದ ಹೂವು ಮತ್ತು ನನ್ನ ಎದೆಯ ಮೇಲೆ ದೈವಿಕ ಸ್ತ್ರೀಲಿಂಗದ ಸಂಕೇತವನ್ನು ಅವಂತಿಕಾ ಅವರು ( @avantika_1988)ಬರೆದಿದ್ದಾರೆ.  ನನಗೆ ಮಗಳು ಹುಟ್ಟುತ್ತಾಳೆ ಎಂದು ಆಗ ನನಗೊಂದು ಸಣ್ಣ ಸುಳಿವು ಸಿಕ್ಕಿತ್ತು. ಮಹಿಳೆ, ಬ್ರಹ್ಮಾಂಡದ ಪವಿತ್ರ ಪಾತ್ರೆ, ತನ್ನ ಪ್ರತಿರೂಪದಲ್ಲಿ ಇನ್ನೊಂದನ್ನು ಮಾಡಲು ತನ್ನನ್ನು ಸಿದ್ಧಪಡಿಸಿಕೊಳ್ಳುತ್ತದೆ ಎಂದು ರೀಚಾ ಬರೆದಿದ್ದಾರೆ.

46

ರೀಚಾ ಇನ್ಸ್ಟಾಗ್ರಾಮ್‌ನಲ್ಲಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದು, ಈ ಫೋಟೋಶೂಟ್‌ಗಾಗಿ ಉದ್ದವಾದ ಸುರುಳಿಯಾಕಾರದ ಕೇಶವಿನ್ಯಾಸವನ್ನು ಮಾಡಿ ಕೂದಲನ್ನು ಹಾಗೆಯೇ ಉದ್ದನೇ ಬಿಡಲಾಗಿತ್ತು. ಈ ಫೋಟೋಗಳನ್ನು ಶೇರ್ ಮಾಡಿಕೊಂಡಿರುವ ರೀಚಾ ಮಗಳ ದಿನದ ಶುಭಾಶಯಗಳು, ನಾವು ಈ ಫೋಟೋಗಳನ್ನು ಮುಂದೊಂದು ದಿನ ಒಟ್ಟಿಗೆ ನೋಡುತ್ತೇವೆ. ಇಲ್ಲಿ ನೀವು ಒಳಗಿನಿಂದ ಫೋಟೋಗೆ ಫೋಸ್ ನೀಡಿದ್ದೀರಿ, ಮತ್ತು ನಾನು ಹೊರಗಿನಿಂದ, ಇದು ನಮಗಾಗಿ ಹೊರಗಿನವರು ಇದನ್ನು ನೋಡಬಹುದು ಆದರೆ ಮಾತನಾಡಲಾಗದು ಎಂದು ಬರೆದುಕೊಂಡಿದ್ದಾರೆ. 

56

ಆದರೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಹೊಟ್ಟೆಯನ್ನು ಸಂಪೂರ್ಣವಾಗಿ ತೋರಿಸುತ್ತಿರುವ ಈ ಫೋಟೋ ಶೂಟ್‌ಗ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪಪಾರಾಜಿ ಸೋಶಿಯಲ್ ಮೀಡಿಯಾ ಸೈಟ್‌ಗಳಲ್ಲಿ ಈ ಫೋಟೋಗಳು ಪೋಸ್ಟ್ ಅಗಿದ್ದು, ಜನ ಈ ಫೋಟೋ ಶೂಟ್‌ಗೆ ನಮಗಿಷ್ಟವಾಗಿಲ್ಲ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಇವರು ತಾಯ್ತನವನ್ನು ತೋರಿಸುತ್ತಿಲ್ಲ, ಇವರು ಕೆಟ್ಟತನವನ್ನು ತೋರಿಸುತ್ತಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.  ಇದೆಂಥಾ ಫ್ಯಾಷನ್ ನಡಿತಾ ಇದೆ ಇವರಿಗೆ ಸ್ವಲ್ಪವೂ ನಾಚಿಕೆ ಇಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

66

ರೀಚಾ ಚಡ್ಡಾ ಹಾಗೂ ಅಲಿ ಫಜಲ್ ಅವರು ಕೂಡ ಬಾಲಿವುಡ್‌ನ ಹೊಸ ಪೋಷಕರಾಗಿದ್ದಾರೆ. ಜೂನ್ 16ರಂದು ದಂಪತಿ ಹೆಣ್ಣು ಮಗಳನ್ನು ಬರಮಾಡಿಕೊಂಡರು. ಫುಕ್ರೆ ಸಿನಿಮಾ ಸೆಟ್‌ನಲ್ಲಿ ಇವರಿಬ್ಬರು ಭೇಟಿಯಾಗಿದ್ದರು. ನಂತರ ಪ್ರೀತಿಯಲ್ಲಿ ಬಿದ್ದಿದ್ದ ಈ ಜೋಡಿ 2022ರ ಆಕ್ಟೋಬರ್‌ನಲ್ಲಿ ಮದುವೆಯಾಗಿದ್ದರು. ರೀಚಾ ಚಡ್ಡಾ ಕೊನೆಯದಾಗಿ ಹೀರಾಮಂಡಿ ವೆಬ್‌ಸಿರೀಸ್‌ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. 
 

click me!

Recommended Stories