ಅಮೃತಧಾರೆ ಸೀರಿಯಲ್‌ನಲ್ಲಿ ಭೂಮಿಕಾ ವಯಸ್ಸು ಜಾಸ್ತಿ ಆಗಿರೋ ಕಾರಣ ಮಕ್ಕಳಾಗೋದು ಕಷ್ಟ ಅನ್ನೋ ಮಾತು ಬಂದಿದೆ. ಅದನ್ನು ಕೇಳಿ ನೆಟ್ಟಿಗರು, ಶ್ರೀರಸ್ತು ಶುಭಮಸ್ತುನಲ್ಲಿ ತುಳಸೀಗೇ ಮಗು ಆಗ್ತಿದೆಯಂತೆ, ಭೂಮಿಕಾಗೆ ಆಗಲ್ವಾ ಅಂತ ತರಾಟೆಗೆ ತಗೊಳ್ತಿದ್ದಾರೆ.
ಸದ್ಯ ಸೀರಿಯಲ್‌ನಲ್ಲಿ ಮತ್ತೆ ಈ ಕಾಲದ ಇನ್‌ಫರ್ಟಿಲಿಟಿ ಪ್ರಾಬ್ಲೆಂ ಚರ್ಚೆಗೆ ಬರೋ ಸೂಚನೆ ಇದೆ. ಹಾಗೆ ನೋಡಿದ್ರೆ ಜೀ ಕನ್ನಡದಲ್ಲಿ ಬರೋ ಒಂದೊಂದು ಸೀರಿಯಲ್‌ನಲ್ಲೂ ಈ ಕಾಲದ ಒಂದೊಂದು ಪ್ರಾಬ್ಲೆಂ ಬಗ್ಗೆ ಗಮನ ಹರಿಸಲಾಗ್ತಿದೆ. ಸದ್ಯ ಇನ್‌ಫರ್ಟಿಲಿಟಿ ಅನ್ನೋದು ಈ ಕಾಲದ ಬಹುದೊಡ್ಡ ಸಮಸ್ಯೆ. ಇದಕ್ಕಾಗಿ ಐವಿಎಫ್, ಇನ್ ಫರ್ಟಿಲಿಟಿ ಟ್ರೀಟ್‌ಮೆಂಟ್ ಸೆಂಟರ್ಸ್ ಏನೇನೋ ಬಂದಿದೆ. ಈ ಸಮಸ್ಯೆ ದೊಡ್ಡ ಬ್ಯುಸಿನೆಸ್ ಅನ್ನೇ ಹುಟ್ಟುಹಾಕಿದೆ. ಇದೀಗ ನಾವೇನ್ ಕಡಿಮೆ ಅಂತ ಸೀರಿಯಲ್‌ನವರೂ ಇದೇ ವಿಚಾರ ಎತ್ಕೊಂಡು ಟಿಆರ್ಪಿ ಹೆಚ್ಚು ಮಾಡೋದಕ್ಕೆ ಹೊರಟಿದ್ದಾರೆ. ಆದರೆ ಇನ್ನೊಂದು ಸೀರಿಯಲ್‌ನಲ್ಲಿ ಉಲ್ಟಾ ಟಾಪಿಕ್ ಇದೇ ಟೈಮಿಗೆ ಮುಖ್ಯ ಅಂಶವಾಗಿ ಬಂದಿದೆ. ಈ ಸೀರಿಯಲ್‌ಗಳನ್ನು ನೋಡೋ ಪ್ರೇಕ್ಷಕರು, 'ಅಲ್ಲಿ ಹಂಗಾಗುತ್ತಂತೆ, ಇದ್ಯಾಕೆ ಹಿಂಗೆ?' ಅನ್ನೋ ಪ್ರಶ್ನೆ ಬಂದಿದೆ.
ಅಷ್ಟಕ್ಕೂ ಏನಾಗಿರೋದಪ್ಪಾ ಅಂದರೆ 'ಅಮೃತಧಾರೆ' ಸೀರಿಯಲ್‌ನಲ್ಲಿ ಇನ್‌ಫರ್ಟಿಲಿಟಿ ಬಗ್ಗೆ ಗಮನ ಸೆಳೆಯೋ ಭರದಲ್ಲಿ ಹೆಣ್ಣುಮಕ್ಕಳಲ್ಲಿ ಒಂದು ವಯಸ್ಸಾದ ಮೇಲೆ ಇನ್ ಫರ್ಟಿಲಿಟಿ ಸಮಸ್ಯೆ ಬರುತ್ತೆ ಅನ್ನೋ ಮಾತು ಡಾಕ್ಟರ್ ಬಾಯಿಂದ ಬರುತ್ತೆ. ಈ ಸೀರಿಯಲ್ ನಾಯಕಿ ಭೂಮಿಕಾಗೆ ವಯಸ್ಸು ಮೂವತ್ತು ದಾಟಿದೆ. ಹೀಗಾಗಿ ಎಲ್ಲ ಸರಿಯಾಗಿದ್ರೂ ಭೂಮಿಕಾಗೆ ಮಕ್ಕಳಾಗೋಕೆ ಕಷ್ಟ ಅನ್ನೋ ಮಾತನ್ನು ಡಾಕ್ಟರ್ ಹೇಳಿದ್ದಾರೆ.
ತುಳಸಿ ಗರ್ಭಿಣಿಯಾದ ಬೆನ್ನಲ್ಲೇ ಭೂಮಿಕಾಗೆ ಮಗುವಿನ ಹಂಬಲ- ಡಾಕ್ಟರ್ ಬಳಿ ಚೆಕಪ್ಗೆ ಹೋಗಲು ಪಟ್ಟು!
ಆದರೆ ಇನ್ನೊಂದು ಸೀರಿಯಲ್ ಶ್ರೀರಸ್ತು ಶುಭಮಸ್ತು ನಲ್ಲಿ ತುಳಸಿ ಮತ್ತು ಮಾಧವ್ ಅವರಿಗೆ ಮದುವೆ ಆಗಿರೋ ಮಕ್ಕಳಿದ್ದಾರೆ. ಮೊಮ್ಮಕ್ಕಳು ಬರೋ ಟೈಮಲ್ಲಿ ತುಳಸಿ ಗುಡ್‌ನ್ಯೂಸ್ ಕೊಟ್ಟಿದ್ದಾಳೆ. ಇದನ್ನು ನೋಡಿ ತುಳಸಿಗೆ ಈ ವಯಸ್ಸಲ್ಲಿ ಮೆನೋಪಾಸ್ ಆಗಿರಬೇಕಿತ್ತಲ್ವಾ ಅಂತ ಸಾಕಷ್ಟು ಜನ ಹೆಂಗಸ್ರು ಪ್ರಶ್ನೆ ಮಾಡಿದ್ರು. ಆದರೆ ತುಳಸಿ ಗರ್ಭವತಿ ಆಗಿದ್ದಾಳೆ ಅಂದರೆ ಮೆನೊಪಾಸ್ ಆಗಿಲ್ಲ ಅಂತಲೇ ಅರ್ಥ. ಜೊತೆಗೆ ಸಾಕಷ್ಟು ಜನ ಇದರ ಬಗ್ಗೆ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ. ಅದನ್ನು ನೋಡಿ ಚಾನೆಲ್‌ನವ್ರು ಕಾಮೆಂಟ್ ಸೆಕ್ಷನ್ ಅನ್ನೇ ಆಫ್ ಮಾಡಬೇಕಾಯ್ತು. ಆದರೆ ಅವರಿಬ್ಬರು ಮದುವೆ ಆಗಿದ್ದಾರೆ, ಮದುವೆ ಅಂತಾದ್ಮೇಲೆ ದೈಹಿಕ ಸಂಬಂಧ ಇದ್ದೇ ಇರುತ್ತೆ. ಹೀಗಿರುವಾಗ ಪ್ರಗ್ನೆನ್ಸಿ ಆಗೋದನ್ನು ಅಫೆನ್ಸ್ ಥರ ಮಾಡೋದು ತಪ್ಪು ಅಂತ ಒಂದಿಷ್ಟು ಪ್ರಜ್ಞಾವಂತರು ಸೋಷಿಯಲ್ ಮೀಡಿಯಾದಲ್ಲಿ ವಾದ ಮಾಡಿದ್ರು. ಆದರೆ ಹೆಚ್ಚಿನ ವೀಕ್ಷಕರಿಗೆ ತುಳಸಿ ಗರ್ಭಿಣಿ ಆಗ್ತಿರೋದನ್ನು ಜೀರ್ಣಿಸಿಕೊಳ್ಳೋಕೆ ಆಗ್ತಿಲ್ಲ.
ಇಂಥಾ ಟೈಮಲ್ಲೇ ಡಾಕ್ಟರ್ ಭೂಮಿಕಾಗೆ ಮಗು ಆಗೋ ಸಾಧ್ಯತೆ ಕಡಿಮೆ ಅಂದುಬಿಟ್ಟಿದ್ದಾರೆ. ಇದಕ್ಕೆ ಕಾರಣ ಆಕೆಯ ವಯಸ್ಸು. ಒಂದು ಏಜ್ ನಂತರ ಹೆಣ್ಮಕ್ಕಳಲ್ಲಿ ಫರ್ಟಿಟಿಲಿ ಕಡಿಮೆ ಆಗಿಬಿಡುತ್ತೆ ಅಂದುಬಿಟ್ಟಿದ್ದಾರೆ. ಡಾಕ್ಟ್ರ ಈ ಮಾತು ಕೇಳಿ ಸೀರಿಯಲ್ ಫ್ಯಾನ್ಸ್‌ಗೆ ಉರಿ ಹತ್ಕೊಂಡು ಬಿಟ್ಟಿದೆ.
'ರೀ ಡೈರೆಕ್ಟ್ರೇ, ತುಳಸಿಗೆ ಮಗು ಆಗ್ತಿದೆಯಂತೆ, ಭೂಮಿಕಾಗೆ ಆಗಲ್ವಾ? ತುಳಸಿಗೆ ಹೋಲಿಸಿದ್ರೆ ಭೂಮಿಕಾ ಎಷ್ಟು ಚಿಕ್ಕವಳು..' ಅಂತೆಲ್ಲ ಕಾಮೆಂಟ್ ಮಾಡ್ತಿದ್ದಾರೆ. ಡಾಕ್ಟರ್ ಭೂಮಿಕಾಗೆ ವಯಸ್ಸಿಗೆ ಕಾರಣಕ್ಕೆ ಮಕ್ಕಳಾಗೋ ಸಾಧ್ಯತೆ ಕಡಿಮೆ ಅಂದಿರೋದು ಈ ಸೀರಿಯಲ್ ಫ್ಯಾನ್ಸ್ ಅನ್ನು ರೊಚ್ಚಿಗೆಬ್ಬಿಸಿದೆ. ಒಂದು ಕಡೆ ತುಳಸಿಗೆ ಈ ವಯಸ್ಸಲ್ಲಿ ಮಗು ಆಗೋ ಥರ ಮಾಡಿರೋ ಸೀರಿಯಲ್ ಟೀಮ್ ಮೇಲೆ ಸಿಟ್ಟು, ಇನ್ನೊಂದು ಕಡೆ ಭೂಮಿಕಾಗೆ ಮಗು ಆಗೋ ವಯಸ್ಸು ಆಗಿದ್ರೂ ವಯಸ್ಸಿನ ನೆಪ ಹೇಳಿ ಈ ಮಕ್ಕಳಾಗೋ ಚಾನ್ಸಸ್ ಕಡಿಮೆ ಅಂದಿರೋದು ಕಂಡು ಸೋಷಿಯಲ್ ಮೀಡಿಯಾದಲ್ಲಿ ಯರ್ರಾಬಿರ್ರಿ ಕಾಮೆಂಟ್ ಬರ್ತಿದೆ. ಭೂಮಿಕಾಗೆ ಮಗು ಮಾಡ್ಸೋ ತನಕ ಈ ಫ್ಯಾನ್ಸ್ ಬಿಡಲ್ಲ ಅನ್ಸುತ್ತೆ ಅಂತ ಕೆಲವು ಮಂದಿ ಆಡ್ಕೊಂಡು ನಗ್ತಿದ್ದಾರೆ.