2 ಡೇಂಜರಸ್ ಶತ್ರುಗಳ ವಿರುದ್ಧ ಮೋದಿ, ಶಾ ಹೋರಾಟಕ್ಕೆ ಸಿದ್ಧ..!

Jun 30, 2020, 4:54 PM IST

ನವದೆಹಲಿ(ಜೂ.30): ದೇಶಕ್ಕೆ ಸದ್ಯ ಎರಡು ಗಂಡಾಂತರಗಳು ಎದುರಾಗಿವೆ. ಎರಡೂ ರಣಾಂಗಣದಲ್ಲಿ ಶತ್ರುಗಳ ಎದುರು ಪ್ರಧಾನಿ ನರೇಂದ್ರ ಮೋದಿ ತೊಡೆತಟ್ಟಿ ನಿಂತಿದ್ದಾರೆ.

ಮೋದಿ ನೇತೃತ್ವದಲ್ಲಿ ಕೊರೋನಾ ವೈರಸ್ ಹಾಗೆಯೇ ಚೀನಾ ವಿರುದ್ಧ ದಿಗ್ವಿಜಯ ಸಾಧಿಸಲಿದ್ದೇವೆ ಎಂದು ಗೃಹ ಸಚಿವ ಅಮಿತ್ ಶಾ ಆತ್ಮವಿಶ್ವಾಸದ ಮಾತುಗಳನ್ನು ಆಡಿದ್ದಾರೆ. ಒಂಟಿ ಸಲಗ ನರೇಂದ್ರ ಮೋದಿ ಅವರಿಗೆ ಎದುರಾಗಿರುವುದು ಏಕಕಾಲದಲ್ಲಿ ಎರೆಡೆರಡು ಯುದ್ಧಗಳು.

59 ಆ್ಯಪ್ ಬ್ಯಾನ್ ಮಾಡಿದ ಬೆನ್ನಲ್ಲೇ ತುರ್ತು ಸಭೆ ನಡೆಸಿದ ಚೀನಾ ವಿದೇಶಾಂಗ ಇಲಾಖೆ!

ಹೌದು, ಪ್ರಧಾನಿ ಮೋದಿ ಸೆಣಸುತ್ತಿರುವುದು ದೇಶದೊಳಗೆ ಇರುವ ಒಂದು ಶತ್ರು ಹಾಗೂ ದೇಶದ ಹೊರಗೆ ಇರುವ ಮತ್ತೊಂದು ಡೇಂಜರಸ್ ವೈರಿ ವಿರುದ್ಧ. ಮೋದಿ ಸೇನಾಪತಿ ಅಮಿತ್ ಶಾ ಮಾತಿನ ಮರ್ಮವೇನು ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.