ಮಳೆ ಬಾಂಬ್: ವರುಣನಾರ್ಭಟಕ್ಕೆ ಪೂರ್ವ ಭಾರತ ತತ್ತರ

Jul 28, 2020, 12:21 PM IST

ನವದೆಹಲಿ(ಜು.28): ಒಂದು ಕಡೆ ಕೊರೋನಾ ಅಟ್ಟಹಾಸಕ್ಕೆ ದೇಶವೇ ನಲುಗಿ ಹೋಗಿದೆ. ಮತ್ತೊಂದು ಕಡೆ ಭಯಂಕರ ಮಳೆ ಬಾಂಬ್ ಪೂರ್ವ ಭಾರತದ ಜನರನ್ನು ಅಕ್ಷರಶಃ ನಿರ್ಗತಿಕರನ್ನಾಗಿ ಮಾಡಿದೆ. 

2020 ಜನಸಾಮಾನ್ಯರು ಎದುರಿಸುತ್ತಿರುವ ಕಷ್ಟಗಳು ಒಂದೆರಡಲ್ಲ. ಒಂದು ಕಡೆ ಕಣ್ಣಿಗೆ ಕಾಣದ ವೈರಿಯ ಅಟ್ಟಹಾಸವಾದರೆ ಮತ್ತೊಂದೆಡೆ ಜಲರಾಕ್ಷಸನ ಅಬ್ಬರ ಜನಸಾಮಾನ್ಯರ ಬದುಕನ್ನು ಮೂರಾಬಟ್ಟೆಯನ್ನಾಗಿಸಿದೆ.

ಇಸ್ರೇಲ್ ಬೆನ್ನಲ್ಲೇ, ಫ್ರಾನ್ಸ್‌ನಿಂದ ಭಾರತಕ್ಕೆ ವೆಂಟಿಲೇಟರ್‌, ವೈದ್ಯಕೀಯ ಉಪಕರಣ!

ವರುಣಾನಾರ್ಭಟಕ್ಕೆ ಪೂರ್ವ ಭಾರತ ಅಲ್ಲೋಲ ಕಲ್ಲೋಲವಾಗಿಬಿಟ್ಟಿದೆ. ಅಸ್ಸಾಂ, ಬಿಹಾರ ರಾಜ್ಯಗಳ ಜನರ ಬದುಕು ಹೇಳತೀರದಾಗಿದೆ. ಇಡೀ ಭಾರತವನ್ನೇ ಬೆಚ್ಚಿಬೀಳಿದ ಪೂರ್ವ ಭಾರತದ ಭಯಾನಕ ಜಲ ಪ್ರವಾಹ ಇಲ್ಲಿದೆ ನೋಡಿ.