ಜಮ್ಮು ಬಾನಂಗಳದಲ್ಲಿ ಹಾರಿದ್ದೇಕೆ ಪಾತಕಿಗಳ ಡ್ರೋನ್?

Jun 29, 2021, 5:42 PM IST

ನವದೆಹಲಿ(ಜೂ.29): ಬದಲಾಯ್ತು ಉಗ್ರ ವ್ಯೂಹ. ಕಣಿವೆ ರಾಜ್ಯಕ್ಕೆ ಕಣ್ತಪ್ಪಿಸಿ ಕಾಲಿಡುತ್ತಿವೆ ಹಾರೋ ಬಾಂಬ್‌ಗಳು. ಒಂದರ ಹಿಂದೊಂದು ಅಟ್ಯಾಕ್, ಡ್ರೋನ್ ದಾಳಿ, ಕಚ್ಛಾ ಬಾಂಬ್ ಹಾವಳಿ. ಭಾರತೀಯ ಸೇನೆಯೇ ಉಗ್ರರ ಟಾರ್ಗೆಟ್ ಆಯ್ತಾ? ದೇಶದ ಭದ್ರತೆಗೆ ಎದುರಾಯ್ತು ಬಿಗ್ ಶಾಕ್. ಈ ದಾಳಿ ಹಿಂದಿದೆಯಾ ಕಡು ಪಾಪಿ ಪಾಕ್‌ ಪಿತೂರಿ? 

ಭಾನುವಾರ ನಸುಕಿನ ಜಾವ ಜಮ್ಮು ವಿಮಾನ ನಿಲ್ದಾಣದ ವಾಯುಪಡೆ ಸ್ಟೇಷನ್‌ ಮೇಲೆ ಡ್ರೋನ್‌ ಬಳಸಿ ಸ್ಫೋಟ ನಡೆಸಿದ್ದ ಉಗ್ರರು, ಸತತ 2ನೇ ದಿನವೂ ಮತ್ತೆ ಭಾರತೀಯ ಸೇನೆಯನ್ನು ಗುರಿಯಾಗಿಸಿ ಅಂಥದ್ದೇ ದಾಳಿ ಯತ್ನ ನಡೆಸಿದ್ದಾರೆ.

ಈ ಬಾರಿ ಜಮ್ಮುವಿನ ರತ್ನುಚಕ್‌-ಕಾಲುಚಕ್‌ ಆರ್ಮಿ ಸ್ಟೇಷನ್‌ ಮೇಲೆ 2 ಡ್ರೋನ್‌ಗಳನ್ನು ಬಳಸಿ ದಾಳಿಗೆ ಯತ್ನಿಸಲಾಗಿದೆ. ಆದರೆ ಸ್ಥಳದಲ್ಲಿದ್ದ ಯೋಧರು ಡ್ರೋನ್‌ಗಳನ್ನು ಗಮನಿಸಿ ಅವುಗಳು ಹಾರಾಡುತ್ತಿದ್ದ ದಿಕ್ಕಿನತ್ತ ಗುಂಡಿನ ದಾಳಿ ನಡೆಸುತ್ತಲೇ, ಅವು ಪರಾರಿಯಾಗಿವೆ. ಹೀಗಾಗಿ ಮತ್ತೊಂದು ಸಂಭವನೀಯ ಅವಘಡ ತಪ್ಪಿದೆ.