ಕೇಂದ್ರದ ಹೊಸ ನಿಯಮ: ವಾಟ್ಸಾಪ್‌, ಫೇಸ್ಬುಕ್, ಟ್ವಿಟರ್‌ಗೆ ನಡುಕ!

May 27, 2021, 4:32 PM IST

ನವದೆಹಲಿ(ಮೇ.27) ಫೇಸ್‌ಬುಕ್, ಟ್ವಿಟರ್‌, ಇನ್ಸ್ಟಾಗ್ರಾಂ ಬ್ಯಾನ್‌ ಮಾಡ್ತಾರಂತೆ. ಆದರೀಗ ಸರ್ಕಾರದ್ ನೂತನ ಕಾನೂನಿನ ವಿರುದ್ಧ ವಾಟ್ಸಾಪ್ ಸಿಡಿದೆದ್ದಿದೆ. ಸರ್ಕಾರದ ನಿಯಮದ ಅನ್ವಯ ಪ್ರೈವೆಸಿ ಉಲ್ಲಂಘನೆಯಾಘುತ್ತದೆ ಎಂದಿರುವ ವಾಟ್ಸಾಪ್ ಈ ಬಗ್ಗೆ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದೆ, ಹಾಗಾದ್ರೆ ಸೋಶಿಯಲ್ ಮಿಡಿಯಾ ಮುಗಿಯೋ ಕಾಲ ಬಂದಿದಾ? ಇವೆಲ್ಲವೂ ನಿಜಕ್ಕೂ ನಿಷ್ಕ್ರಿಯಗೊಳ್ಳುತ್ತವಾ?

 ಜಾಲತಾಣಗಳಿಗೆ ಮೂಗುದಾರ ಹಾಕಲು ಕೇಂದ್ರ ಸರ್ಕಾರ ಮೇ 26ರಿಂದ ಜಾರಿಗೊಳಿಸಿರುವ ಹೊಸ ನಿಯಮಗಳ ವಿರುದ್ಧ ವಾಟ್ಸ್‌ಆ್ಯಪ್‌ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದೆ. ಸಂದೇಶಗಳ ಮೂಲ ಮಾಹಿತಿ ನೀಡಬೇಕು ಎನ್ನುವುದು ಖಾಸಗಿತನ ಹಕ್ಕಿನ ಉಲ್ಲಂಘನೆ ಎಂದಿದೆ.