Veer Savarkar: ಚೀನಾ ಬೆನ್ನಿಗೆ ಚೂರಿ ಹಾಕುತ್ತೆಂದು ಮೊದಲು ಎಚ್ಚರಿಸಿದ್ದೇ ಸಾವರ್ಕರ್..!

Dec 20, 2021, 3:02 PM IST

ಬೆಂಗಳೂರು (ಡಿ. 20): ಕೇಂದ್ರದ ಮಾಹಿತಿ ಆಯುಕ್ತ ಉದಯ್‌ ಮಹೂರ್ಕರ್‌ ವಿರಚಿತ ‘ವೀರ ಸಾವರ್ಕರ್‌-ದಿ ಮ್ಯಾನ್‌ ಹು ಕುಡ್‌ ಹ್ಯಾವ್‌ ಪ್ರಿವೆಂಟೆಡ್‌ ಪಾರ್ಟಿಷನ್‌’ (Veer Savarkar The Man who could have a Prevented Partition) ಆಂಗ್ಲ ಕೃತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Bommai) ಅವರು ಲೋಕಾರ್ಪಣೆಗೊಳಿಸಿದರು. ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಮತ್ತಿತರರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.

Most Popular Leader in 2021: ಟಾಪ್ 10 ಪಟ್ಟಿಯಲ್ಲಿ ಪ್ರಧಾನಿ ಮೋದಿ, ಜನಪ್ರಿಯತೆ ಹೆಚ್ಚಿದ್ಹೇಗೆ..?

ದೇಶ ವಿಭಜನೆ ಆಗುವುದನ್ನು ಸಾವರ್ಕರ್‌ ಬಲವಾಗಿ ವಿರೋಧಿಸಿದ್ದರು. ಭವಿಷ್ಯದಲ್ಲಿ ಉದ್ಭವಿಸಬಹುದಾದ ಸಮಸ್ಯೆಗಳ ಬಗ್ಗೆ ಅವರಿಗೆ ಮೊದಲೇ ಅಂದಾಜಿತ್ತು. ಚೀನಾ ಜೊತೆ ಯುದ್ಧ ನಡೆಯುತ್ತದೆ ಎಂದು 8 ವರ್ಷ ಮೊದಲೇ ಸಾವರ್ಕರ್‌ ಎಚ್ಚರಿಸಿದ್ದರು. ಆದರೆ ಅಂದು ಪ್ರಧಾನಿಯಾಗಿದ್ದ ಜವಾಹರ್‌ಲಾಲ್‌ ನೆಹರೂ ಅವರು ಯುದ್ಧ ನಡೆಯುವುದಿಲ್ಲ ಎಂಬ ಭ್ರಮೆಯಲ್ಲಿದ್ದರು. ನಮ್ಮ ಸೈನಿಕರಿಗೆ ಹಿಮಪ್ರದೇಶದಲ್ಲಿ ಬಳಸುವ ಶೂ ಕೊಡಲಿಲ್ಲ. ಹೋರಾಡಲು ಬಂದೂಕು ನೀಡಲಿಲ್ಲ ಬಿ ಎಲ್ ಸಂತೋಷ್ ವಾಗ್ದಾಳಿ ನಡೆಸಿದರು. 

1937ರಿಂದ 1945ರವರೆಗೆ ಸಾವರ್ಕರ್‌ ಕಾಂಗ್ರೆಸ್‌ ಪಕ್ಷಕ್ಕೆ ಎಚ್ಚರಿಕೆಯ ಸಂದೇಶಗಳ ಮೂಲಕ ಭಾರತ ವಿಭಜನೆ ತಡೆಯಲು ಅವಿರತ ಪ್ರಯತ್ನಗಳನ್ನು ಮಾಡಿದ್ದರು. 1940ರಲ್ಲಿ ಜಿನ್ನಾ ಮುಸ್ಲಿಂ ಲೀಗ್‌ ಮೂಲಕ ಪಾಕಿಸ್ತಾನ ನಿರ್ಣಯ ಪಾಸ್‌ ಮಾಡಿದಾಗ ನೆಹರೂ ಮತ್ತು ಗಾಂಧೀಜಿ ಪಾಕಿಸ್ತಾನದ ನಿರ್ಮಾಣ ಆಗುವುದಿದ್ದರೆ ತಮ್ಮ ಶವಗಳ ಮೇಲೆ ಆಗಬೇಕು ಎಂದಿದ್ದರು. ಕಾಂಗ್ರೆಸ್‌ ತನ್ನ ನೀತಿಗಳನ್ನು ಬದಲಿಸಿಕೊಳ್ಳದಿದ್ದರೆ ಭಾರತ ವಿಭಜನೆ ತಡೆಯಲು ಸಾಧ್ಯವಿಲ್ಲ ಎಂದು ಸಾವರ್ಕರ್‌ ಹೇಳಿದಂತೆ ಕೇವಲ ಏಳೇ ವರ್ಷಗಳಲ್ಲಿ ಅದು ನಿಜವಾಯಿತು ಎಂದು ’ ಕೃತಿಯ ಲೇಖಕ ಉದಯ್‌ ಮಾಹೂರ್ಕರ್‌ ಹೇಳಿದರು.