Sep 23, 2020, 11:35 AM IST
ಬೆಂಗಳೂರು (ಸೆ. 23): ಕೃಷಿ ಮಸೂದೆ ಬಳಿಕ ಕೇಂದ್ರ ಸರ್ಕಾರ ರೈತರಿಗೆ ಇನ್ನೊಂದು ಶಾಕ್ ನೀಡಿದೆ. ಅವಶ್ಯಕ ವಸ್ತುಗಳ ಪಟ್ಟಿಯಿಂದ ಅಕ್ಕಿ, ರಾಗಿ, ಬೇಳೆ ಕಾಳುಗಳು, ಎಣ್ಣೆ ಬೀಜಗಳು, ಝಾದ್ಯ ತೈಲ, ಈರುಳ್ಳಿ, ಆಲೂಗಡ್ಡೆಯನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ಹೊರಗಿಡಲಾಗಿದೆ.
ಶುಕ್ರವಾರ ಕರ್ನಾಟಕ ಬಂದ್ ಇಲ್ಲ; ಬೇರೆ ರೀತಿಯಲ್ಲಿ ಪ್ರತಿಭಟನೆಗೆ ಮುಂದಾದ ರೈತ ಸಂಘಟನೆಗಳು
ಈ ವಿಧೇಯಕ ಸಂಸತ್ತಿನಲ್ಲಿ ಅಂಗೀಕಾರವಾಗಿದೆ. ಇದಕ್ಕೆ ರಾಷ್ಟ್ರಪತಿಗಳ ಅಂಕಿತ ಬಿದ್ದರೆ ಈ ಎಲ್ಲಾ ಆಹಾರೋತ್ಪನ್ನಗಳು ಸರ್ಕಾರದ ದರ ನಿಯಂತ್ರಣದಿಂದ ಮುಕ್ತಿ ಹೊಂದಲಿವೆ. ವಿಶೇಷ ಸಂದರ್ಭದಲ್ಲಿ ಮಾತ್ರ ಸರ್ಕಾರ ಬೆಲೆ ನಿಯಂತ್ರಿಸುತ್ತದೆ ಎಂದು ಕೇಂದ್ರ ಸ್ಪಷ್ಟಪಡಿಸಿದೆ. ರೈತರ ಆದಾಯ ದ್ವಿಗುಣಗೊಳಿಸುವ ಗುರಿ ನಮ್ಮದು. ಕೃಷಿ ಕ್ಷೇತ್ರದಲ್ಲಿ ಸುಧಾರಣೆ ತಂದಂತಾಗುತ್ತದೆ ಎಂದು ಕೇಂದ್ರ ಅಭಿಪ್ರಾಯಪಟ್ಟಿದೆ.