ಆಗಸದೆತ್ತರದ ಐಷಾರಾಮಿ ಕಟ್ಟಡಗಳು ಕ್ಷಣಾರ್ಧದಲ್ಲಿ ನೆಲಸಮ!

Jan 12, 2020, 4:23 PM IST

ಕೊಚ್ಚಿ[ಜ.12]: ಸುಪ್ರೀಂ ಆದೇಶದ ಬೆನ್ನಲ್ಲೇ ಅಕ್ರಮವಾಗಿ ನಿರ್ಮಿಸಲಾಗಿದ್ದ ಕೇರಳದ 2 ಅಪಾರ್ಟ್ ಮೆಂಟ್ ಗಳನ್ನು ನಿನ್ನೆ ಶನಿವಾರ ಧ್ವಂಸಗೊಳಿಸಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಕೊಚ್ಚಿಯಲ್ಲಿ ಕೆರೆ ಬಳಿ ನಿರ್ಮಿಸಲಾಗಿದ್ದ, ಮತ್ತರಡು ಅಪಾರ್ಟ್ ಮೆಂಟ್ ಗಳನ್ನು ನೆಲಸಮಗೊಳಿಸಲಾಗಿದೆ.

ನಿಯಮ ಉಲ್ಲಂಘನೆ: 343 ಮನೆಗಳಿದ್ದ ಅಪಾರ್ಟ್‌ಮೆಂಟ್ಸ್‌ ಕ್ಷಣದಲ್ಲಿ ನೆಲಸಮ!

ಅಪಾರ್ಟ್ ಮೆಂಟ್ ಸುತ್ತಮುತ್ತ ಸರ್ಕಾರ ನಿಷೇಧಾಜ್ಞೆ ಜಾರಿಗೊಳಿಸಿದೆ. ನೋಡ ನೋಡುತ್ತಲೇ ಆಗಸದೆತ್ತರಕ್ಕೆ ನಿರ್ಮಿಸಲಾಗಿದ್ದ ಕಟ್ಟಡಗಳು ಕ್ಷಣ ಮಾತ್ರದಲ್ಲಿ ನೆಲಕ್ಕುರುಳಿರುವ ದೃಶ್ಯಗಳು ವೈರಲ್ ಆಗಿವೆ. ಈ ಮೂಲಕ ಸುಪ್ರೀಂ ಆದೇಶದಂತೆ ಅಕ್ರಮವಾಗಿ ನಿರ್ಮಿಸಲಾಗಿದ್ದ ನಾಲ್ಕೂ ಕಟ್ಟಡಗಳು ನೆಲಕ್ಕುರುಳಿವೆ.