Lunar eclipse: ಅಪರೂಪದ ವಿದ್ಯಮಾನ, 580 ವರ್ಷಗಳಲ್ಲೇ ಸುದೀರ್ಘ ಚಂದ್ರಗ್ರಹಣ!

Nov 19, 2021, 4:23 PM IST

ಬೆಂಗಳೂರು (ನ. 19):  21 ನೇ ಶತಮಾನದ,  580 ವರ್ಷಗಳಲ್ಲೇ ಸಂಭವಿಸುತ್ತಿರುವ ಸುದೀರ್ಘ ಚಂದ್ರಗ್ರಹಣ (Lunar Eclipse) ಇಂದು ಸಂಭವಿಸಿದೆ. ಅಲ್ಲದೆ ಈ ವರ್ಷದಲ್ಲಿ ನಡೆಯಲಿರುವ ಕೊನೇ ಚಂದ್ರಗ್ರಹಣವೂ ಇದಾಗಿದೆ.

ಈ ಚಂದ್ರಗ್ರಹಣ  ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಪೂರ್ವ ಭಾಗಗಳಲ್ಲಿ ಮಾತ್ರವೇ ಕಂಡುಬರಲಿದೆ. ಆದರೆ ಭಾರತದ ಇತರೆ ಪ್ರದೇಶಗಳಲ್ಲಿ ಗ್ರಹಣ ಗೋಚರವಾಗದು. ಅಮೆರಿಕ, ಉತ್ತರ ಯುರೋಪ್‌, ಪೂರ್ವ ಏಷ್ಯಾ, ಆಸ್ಪ್ರೇಲಿಯಾ ಮತ್ತು ಪೆಸಿಫಿಕ್‌ ಸಮುದ್ರ ಭಾಗಗಳಲ್ಲಿ ಈ ವಿದ್ಯಮಾನ ಗೋಚರವಾಗಲಿದೆ. ಈ ಚಂದ್ರಗ್ರಹಣಕ್ಕೂ, ಸುರಿಯುತ್ತಿರುವ ಅಕಾಲಿಕ ಮಳೆಗೂ ಸಂಬಂಧವಿದೆಯಾ.?