ಬಿಗ್​ಬಾಸ್​ಗೆ ಸೆಡ್ಡು ಹೊಡೆಯಲು ಅತಿದೊಡ್ಡ ರಿಯಾಲಿಟಿ ಷೋ ಸಜ್ಜು? ಫ್ಯಾನ್ಸ್​ ತಲೆಗೆ ಹುಳುಬಿಟ್ಟ ಪ್ರೊಮೋ

By Suchethana D  |  First Published Oct 1, 2024, 10:29 PM IST

ಬಿಗ್​ಬಾಸ್​ ಸದ್ಯ ಅತ್ಯಂತ ದೊಡ್ಡ ರಿಯಾಲಿಟಿ ಷೋ ಎಂದೇ ಹೇಳಲಾಗುತ್ತಿದೆ. ಇದಕ್ಕೆ ಸೆಡ್ಡು ಹೊಡೆಯಲು ಜೀ ಕನ್ನಡ ವಾಹಿನಿ ಸಜ್ಜಾಗಿದ್ಯಾ? ಹೊಸ ಪ್ರೊಮೋ ನೋಡಿ ತಲೆ ಕೆಡಿಸಿಕೊಳ್ತಿದ್ದಾರೆ ಅಭಿಮಾನಿಗಳು!
 


ಈಗ ಎಲ್ಲೆಲ್ಲೂ ಪೈಪೋಟಿಯೇ ಪೈಪೋಟಿ. ಅದರಲ್ಲಿಯೂ ಸೀರಿಯಲ್​, ರಿಯಾಲಿಟಿ ಷೋಗಳಲ್ಲಿ ವಾಹಿನಿಗಳ ನಡುವೆ ಈಗ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಪ್ರೇಕ್ಷಕರನ್ನು ತಮ್ಮತ್ತ ಸೆಳೆದುಕೊಳ್ಳಲು ವಾಹಿನಿಗಳು ಇನ್ನಿಲ್ಲದ ತಂತ್ರಗಳನ್ನು ನಡೆಸುತ್ತಿವೆ. ದಂಪತಿ ಷೋ, ಡಾನ್ಸ್​ ಷೋ, ಹಾಸ್ಯ ಕಾರ್ಯಕ್ರಮ, ಮಕ್ಕಳ ನಾಟಕ, ದೊಡ್ಡವರ ನಾಟಕ... ಹೀಗೆ ರಿಯಾಲಿಟಿ ಷೋಗಳ ಭರ್ಜರಿ ಪ್ರದರ್ಶನ ವಾರಾಂತ್ಯದಲ್ಲಿ ನಡೆಯುತ್ತಲೇ ಇರುತ್ತವೆ. ಆದರೆ ಇದೀಗ ಎಲ್ಲರನ್ನೂ ಮೀರಿಸಿ ಕಲರ್ಸ್​ ಕನ್ನಡ ವಾಹಿನಿಯ ಬಿಗ್​ಬಾಸ್​ ಸೀಸನ್​ 11 ಶುರುವಾಗಿದೆ. ಸಾಮಾನ್ಯವಾಗಿ ಉಳಿದೆಲ್ಲಾ ರಿಯಾಲಿಟಿ ಷೋಗಳಿಗಿಂತಲೂ ಬಿಗ್​ಬಾಸ್​ ಪ್ರತಿಬಾರಿಯೂ, ಎಲ್ಲಾ ಭಾಷೆಗಳಲ್ಲಿಯೂ ಅದರದ್ದೇ ಪಾರುಪತ್ಯ. ಅದೇ ಹೈಯೆಸ್ಟ್​ ಟಿಆರ್​ಪಿ ಪಡೆದುಕೊಳ್ಳುವುದು. ಪ್ರತಿನಿತ್ಯ ಬೈಯುತ್ತಲೇ ಸೀರಿಯಲ್​ ನೋಡುವಂತೆ, ಅದಕ್ಕಿಂತಲೂ ಹೆಚ್ಚು ಮಂದಿ ಬಿಗ್​ಬಾಸ್ ನೋಡುತ್ತಾರೆ.

ಬಿಗ್​ಬಾಸ್​​ಗೆ ಪ್ರತಿಯಾಗಿ ಯಾವ ರಿಯಾಲಿಟಿ ಷೋಗಳು, ಯಾವ ಭಾಷೆಯಲ್ಲಿಯೂ ಮೇಲೆ ಬರಲು ಸಾಧ್ಯವಿಲ್ಲ ಎನ್ನುವ ಮಾತಿದೆ. ಆದರೆ ಇದೀಗ ಕನ್ನಡದ ಬಿಗ್​ಬಾಸ್​ಗೆ ಪೈಪೋಟಿ ಕೊಡಲೋ ಎಂಬಂತೆ ಜೀ ಕನ್ನಡ ವಾಹಿನಿಯ ಪ್ರೊಮೋ ಒಂದು ಎಲ್ಲರನ್ನೂ ಅಚ್ಚರಿಗೆ ತಳ್ಳಿದೆ. ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಷೋ ಶೀಘ್ರದಲ್ಲಿ ಎನ್ನುವ ಪ್ರೊಮೋ ಒಂದನ್ನು ಜೀ ಕನ್ನಡ ವಾಹಿನಿ ಶೇರ್​ ಮಾಡಿಕೊಂಡಿದೆ. ಇದು ಮನರಂಜನೆಯ ಹೊಸ ಚಾಪ್ಟರ್​ ಎಂದು ಶೀರ್ಷಿಕೆ ಕೊಡಲಾಗಿದೆ. ಇದು ಏನಿರಬಹುದು? ಬಿಗ್​ಬಾಸ್​ ಅನ್ನು ಮೀರಿ ಇದು ಅತಿದೊಡ್ಡ ರಿಯಾಲಿಟಿ ಷೋ ಆಗುವುದಾದರೆ ಅದು ಹೇಗೆ ಎನ್ನುವ ಚಿಂತೆಯಲ್ಲಿದ್ದಾರೆ ಅಭಿಮಾನಿಗಳು.

Tap to resize

Latest Videos

undefined

ಡ್ರೆಸ್​ ಸರಿಮಾಡಿಕೊಳ್ಳೊಷ್ಟ್ರಲ್ಲಿ ಆಗಬಾರದ್ದು ಆಗೋಯ್ತು! ಎಲ್ಲಾ ಆದ್ಮೇಲೆ ಇನ್ನೇನು ಮಾಡೋದು ಕೇಳ್ತಿದ್ದಾರೆ ಟ್ರೋಲಿಗರು

ಇದರ ಪ್ರೊಮೋ ರಿಲೀಸ್​ ಆಗುತ್ತಲೇ ಕ್ಷಣ ಮಾತ್ರದಲ್ಲಿ ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗಿದೆ. ಬಿಗ್​ಬಾಸ್​ಗಿಂತಲೂ ಇದ್ಯಾವ ರಿಯಾಲಿಟಿ ಷೋ ಎಂದು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ಪ್ರೊಮೋ ಅಭಿಮಾನಿಗಳ ತಲೆಗೆ ಹುಳುಬಿಟ್ಟಂತಾಗಿದೆ. ಯಾವಾಗ, ಏನು, ಎತ್ತ ಎನ್ನುವುದನ್ನು ಇನ್ನೂ ಅದರಲ್ಲಿ ತೋರಿಸಿಲ್ಲ. ಈ ಹಿಂದೆ ಇದೇ ರೀತಿಯ ಪ್ರೊಮೋ ತೋರಿಸಲಾಗಿತ್ತು, ಅದರ ಕಥೆಯೇನು ಎಂದೂ ಕೆಲವರು ಪ್ರಶ್ನಿಸುತ್ತಿದ್ದಾರೆ. 

ಇನ್ನು ಅತ್ತ, ಬಿಗ್​ಬಾಸ್​​ನಲ್ಲಿ ಲಾಯರ್​ ಜಗದೀಶ್​, ಚೈತ್ರಾ ಕುಂದಾಪುರ ಹಲ್​ಚಲ್​ ಸೃಷ್ಟಿಸುತ್ತಿದ್ದಾರೆ. ಎರಡನೇ ದಿನವೂ ಮನೆಯಲ್ಲಿ ರೂಲ್ಸ್ ಫಾಲೋ ಮಾಡುವ ಬಗ್ಗೆ ವಾಗ್ವಾದ ನಡೆಯಿತು. ಯಮುನಾ ಶ್ರೀನಿಧಿ , ರಂಜಿತ್ ಮತ್ತು ಗೋಲ್ಡ್ ಸುರೇಶ್ ಮಧ್ಯೆ ವಾದವಾಯ್ತು. ಆದ್ರೂ ರಾತ್ರಿ ಮಲಗುವ ಸಮಯದಲ್ಲಿ ಲಾಯರ್ ಜಗದೀಶ್ ಪಾತ್ರೆ ತೊಳೆಯಲು ಹೋದರು. ಇದಕ್ಕೆ ಯುಮುನಾ ವಿರೋಧ ವ್ಯಕ್ತಪಡಿಸಿದರು. ಈಗಾಗಲೇ ತಪ್ಪು ಮಾಡಿ ಮನೆಗೆ ಬಂದಿರುವ ಗ್ರಾಸರಿಗಳಲ್ಲಿ ಕೆಲವನ್ನು ಬಿಗ್‌ಬಾಸ್‌ ತೆಗೆದುಕೊಂಡು ಹೋಗಿರುವುದುನ್ನು ನೆನಪಿಸಿದರು. ಜಗದೀಶ್ ಸ್ವರ್ಗ ನಿವಾಸಿಗಳ ಮಾತುಕತೆಯನ್ನು ತೆಗೆದುಕೊಂಡು ಹೋಗಿ ನರಕ ನಿವಾಸಿಗಳಿ ಬಳಿ ಊದುತ್ತಿದ್ದಾರೆಂದು ಎಲ್ಲರೂ ಮಾತನಾಡಿಕೊಂಡರು.  ಇದನ್ನು ಸ್ವರ್ಗ ನಿವಾಸಿಗಳಲ್ಲಿ ಎಲ್ಲರೂ ಅರ್ಥ ಮಾಡಿಸಲು ಪ್ರಯತ್ನಿಸಿದರು. ಆದರೆ  ಜಗದೀಶ್ ಇದು ಗೇಮ್ ಎಂದರು. ಅವರು ತೆಗೆದುಕೊಳ್ಳುತ್ತಾರೆ ನೀವು ಯಾಕೆ ತೆಗೆದುಕೊಳ್ಳುತ್ತಿಲ್ಲ ಎಂದರು. ಕ್ಯಾಮರಾ ಮುಂದೆ ಬಂದ ಲಾಯರ್ ಜಗದೀಶ್, ನನ್ನ ಪ್ರಕಾರ  ನಾನು ಕ್ಲೀಯರ್‌ ಆಗಿ ಗೇಮ್ ಆಡುತ್ತಿದ್ದೇನೆ ಎಂದರು. ಇತ್ತ ನರಕದಲ್ಲಿರುವ ಸ್ಪರ್ಧಿ ಅನುಷಾ ಮತ್ತು ಮೋಕ್ಷಿತಾ ಜಗದೀಶ್ ಬಗ್ಗೆ ಮಾತನಾಡಿಕೊಂಡು ಹೇಳಿ ಕೇಳಿ ಅವರು ಕ್ರಿಮಿನಲ್‌ ಲಾಯರ್ , ಅವರು ನಮ್ಮ ಮೈಂಡ್‌ ಡೈವರ್ಟ್ ಮಾಡುತ್ತಿದ್ದಾರೆಂದು ಮಾತನಾಡಿಕೊಂಡರು.

ಚೈತ್ರಾ ತೊಳೆದುಬಿಟ್ಟ ಟಾಯ್ಲೆಟ್​ ಕ್ಲೀನ್​ ಮಾಡಿ ಪೇಚಿಗೆ ಸಿಲುಕಿದ ಲಾಯರ್​ ಜಗದೀಶ್​! ರುಬ್ಬಿಸಿಕೊಳ್ಳೋರು ಯಾರು?
 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!