ವಿಮಾನ ಹಾರಿಸಲು ನಿರಾಕರಿಸಿದ ಇಂಡಿಗೋ ಪೈಲಟ್: ಪುಣೆ ಬೆಂಗಳೂರು ಫ್ಲೈಟ್ 5 ಗಂಟೆ ವಿಳಂಬ

By Anusha KbFirst Published Oct 1, 2024, 10:14 PM IST
Highlights

ಇತ್ತೀಚೆಗೆ ಪುಣೆಯಿಂದ ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನವೊಂದು 5 ಗಂಟೆಗಳ ಕಾಲ ವಿಳಂಬವಾಯಿತು ಈ ವೇಳೆ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. .

ಇಂಡಿಗೋ ವಿಮಾನದಲ್ಲಿ ಸಿಬ್ಬಂದಿ ಕೊರತೆ ಇದೆಯೋ ಅಥವಾ ಸಿಬ್ಬಂದಿಗಳು ಹೇಳದೇ ಕೇಳದೇ ರಜೆ ಹಾಕುತ್ತಿದ್ದಾರೋ ತಿಳಿಯದು ಕೆಲ ದಿನಗಳ ಹಿಂದಷ್ಟೇ ಮುಂಬೈನಿಂದ ದೋಹಾಗೆ ಹೊರಟಿದ್ದ ವಿಮಾನವೊಂದು ವಿಳಂಬವಾಗಿ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಪುಣೆಯಿಂದ ಬೆಂಗಳೂರಿಗೆ ಹೊರಟಿದ್ದ ವಿಮಾನವೊಂದು 5 ಗಂಟೆ ವಿಳಂವಾಗಿದೆ. ವಿಮಾನದ ಪೈಲಟ್ ಓವರ್ ಡ್ಯೂಟಿ ಮಾಡಲು ನಿರಾಕರಿಸಿ ವಿಮಾನ ಹಾರಿಸಲು ಒಪ್ಪದ ಹಿನ್ನೆಲೆಯಲ್ಲಿ ವಿಮಾನ 5 ಗಂಟೆ ವಿಳಂಬವಾಗಿದ್ದು, ಪ್ರಯಾಣಿಕರು ಸಾಮಾಜಿಕ ಜಾಲತಾಣದಲ್ಲಿ ಏರ್‌ಲೈನ್ಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. 

ಬೇಗ ತಲುಪಬಹುದು ಆರಾಮದಾಯಕವಾಗಿ ಪ್ರಯಾಣಿಸಬಹುದು ಎಂಬ ಕಾರಣಕ್ಕೆ ಕೆಲ ಶ್ರೀಮಂತ ಹಾಗೂ ಮೇಲ್ವರ್ಗದ ಜನ ವೆಚ್ಚ ಹೆಚ್ಚಾದರೂ ವಿಮಾನದಲ್ಲೇ ಪ್ರಯಾಣಿಸುತ್ತಾರೆ. ಆದರೆ ಏರ್‌ಲೈನ್ಸ್‌ಗಳ ಎಡವಟ್ಟಿನಿಂದ ಪ್ರಯಾಣಿಕರು ಮನೆಯಿಂದ ಬಂದು ವಿಮಾನದೊಳಗೆ ಕಾಯುವಂತಾಗಿದೆ. ಅದೇ ರೀತಿ ಈಗ ಇತ್ತೀಚೆಗೆ ಇಂಡಿಗೋ ವಿಮಾನದ ಪೈಲಟ್ ಓರ್ವ ತನ್ನ ಕೆಲಸದ ಅವಧಿ ಮುಗಿದ ಕಾರಣಕ್ಕೆ ವಿಮಾನ ಹಾರಿಸಲು ನಿರಾಕರಿಸಿದ್ದರಿಂದ ಪುಣೆಯಿಂದ ಬೆಂಗಳೂರಿಗೆ ಹೊರಟ್ಟಿದ್ದ 6E 361 ವಿಮಾನವೂ 5 ಗಂಟೆ ತಡವಾಗಿ ಪುಣೆಯಿಂದ ಹೊರಟಿದೆ. ಈ ವಿಮಾನವೂ ರಾತ್ರಿ 12.45ಕ್ಕೆ ಪುಣೆಯಿಂದ ಬೆಂಗಳೂರಿಗೆ ಹೊರಡಬೇಕಿತ್ತು. ಆದರೆ ಬೆಳಗ್ಗೆ 4.44ಕ್ಕೆ ಪುಣೆಯಿಂದ ಹೊರಟು ಮುಂಜಾನೆ 6.49ಕ್ಕೆ  ಬೆಂಗಳೂರು ತಲುಪಿದೆ. 

Latest Videos

ವಿಮಾನ ಲೇಟ್ : ಸಿಟ್ಟಿಗೆದ್ದ ಜನ ಬೈದಾಡಿದ್ರೂ ತಾಳ್ಮೆ ವಹಿಸಿದ ಗಗನಸಖಿಗೆ ವ್ಯಾಪಕ ಶ್ಲಾಘನೆ

ಸೆಪ್ಟೆಂಬರ್ 24ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಮೂಲಗಳ ಪ್ರಕಾರ, ಪೈಲಟ್ ತನಗೆ ಅನುಮತಿಸಲಾದ ಕೆಲಸದ ಅವಧಿ ಮೀರಿರುವುದರಿಂದ ಈಗ ವಿಮಾನ ಹಾರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ಇದಾದ ನಂತರ ಪ್ರಯಾಣಿಕರೆಲ್ಲರೂ ವಿಮಾನದಲ್ಲಿ ನಿಂತಿರುವಾಗಲೇ ಪೈಲಟ್ ವಿಮಾನ ಕಾಕ್‌ಫಿಟ್‌ನ ಬಾಗಿಲು ಹಾಕುವುದನ್ನು  ವೀಡಿಯೋದಲ್ಲಿ ಕಾಣಬಹುದಾಗಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೆಲವರು ಪ್ರಯಾಣಿಕರನ್ನು ಬೆಂಬಲಿಸಿದರೆ ಮತ್ತೆ ಕೆಲವರು ಪೈಲಟ್‌ನನ್ನು ಬೆಂಬಲಿಸಿದ್ದಾರೆ. ಈ ಘಟನೆಯ ಹೊಣೆಯನ್ನು ಇಂಡಿಗೋ ಮ್ಯಾನೇಜ್‌ಮೆಂಟ್ ಹೊರಬೇಕು ಎಂದು ಜನ ಆಗ್ರಹಿಸಿದ್ದಾರೆ. 

ಅನೇಕರು ಈ ವಿಚಾರವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ದೂರು ನೀಡಿ ಟ್ಯಾಗ್ ಮಾಡಿದ್ದಾರೆ. ಇಂಡಿಗೋ ವಿಮಾನವೂ 3 ಗಂಟೆಗೂ ಹೆಚ್ಚು ಸಮಯ ವಿಳಂಬವಾಗಿದೆ.  ಅಲ್ಲದೇ ಪ್ರಯಾಣಿಕರಿಗೆ ಈ ಬಗ್ಗೆ ಯಾರೊಬ್ಬರು ಕೂಡ ಮಾಹಿತಿ ನೀಡುತ್ತಿಲ್ಲ ದಯವಿಟ್ಟು ಸಹಾಯ ಮಾಡಿ ಎಂದು ಲೋಕೇಶ್ ಎಂಬುವವರು ಡಿಜಿಸಿಎಗೆ ಟ್ಯಾಗ್ ಮಾಡಿದ್ದಾರೆ. 

ದೋಹಾಗೆ ಹೊರಟಿದ್ದ ವಿಮಾನ ವಿಳಂಬ : 5 ಗಂಟೆ ಪ್ರಯಾಣಿಕರ ವಿಮಾನದೊಳಗೆ ಕಾಯಿಸಿದ ಇಂಡಿಗೋ ಏರ್‌ಲೈನ್ಸ್

ಇದಾದ ನಂತರ ಅಯುಷ್ ಕುಮಾರ್‌ ಎಂಬುವವರು ಕೂಡ ಟ್ವಿಟ್ಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿ ಇಂಡಿಗೋ ಹಾಗೂ ಡಿಜಿಸಿಎ ಇಂಡಿಯಾಗೆ ಟ್ಯಾಗ್ ಮಾಡಿದ್ದಾರೆ. ಪೈಲಟ್ ತನ್ನ ಡ್ಯೂಟಿ ಟೈಮಿಂಗ್ಸ್  ಮುಗಿದ ಹಿನ್ನೆಲೆ ವಿಮಾನ ಹಾರಿಸಲು ನಿರಾಕರಿಸಿದ್ದರಿಂದ ಪುಣೆ ಬೆಂಗಳೂರು ವಿಮಾನ 5 ಗಂಟೆ ವಿಳಂಬವಾಯ್ತು,  ಇದರಿಂದ ಪ್ರಯಾಣಿಕರಿಗೆ ಯಾವುದೇ ಊಟ ತಿಂಡಿ ರಿಫ್ರೆಶ್‌ಮೆಂಟ್ ಇಲ್ಲದೇ ಮಧ್ಯದಲ್ಲಿ ಸಿಲುಕಿ ಕಂಗಾಲಾದರು. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಪರಿಹಾರವನ್ನು ಕೂಡ ನೀಡಲಿಲ್ಲ, ಕಸ್ಟಮರ್ ಸರ್ವೀಸ್ ಅಂತ ಸಂಪೂರ್ಣ ಕೆಟ್ಟದಾಗಿತ್ತು. ಇದೆಲ್ಲಾ ಹೇಗೆ ನಡೆಯಲು ಸಾಧ್ಯ ಎಂದು ಅಯುಷ್ ಕುಮಾರ್ ಅವರು ಪ್ರಶ್ನಿಸಿದ್ದರು. 

ಇತ್ತ ಇದಕ್ಕೆ ಪ್ರತಿಕ್ರಿಯೆ ನೀಡಿದ ಇಂಡಿಗೋ ವಿಮಾನ ವಿಳಂಬವಾದ ವಿಚಾರವನ್ನು ಖಚಿತಪಡಿಸಿ ಸೆಪ್ಟೆಂಬರ್ 30ರಂದು ಹೇಳಿಕೆ ಬಿಡುಗಡೆಗೊಳಿಸಿತ್ತು.  ಫ್ಲೈಟ್ ಡ್ಯೂಟಿ ಸಮಯದ ಮಿತಿಗಳ ಕಾರಣದಿಂದ ಸೆಪ್ಟೆಂಬರ್ 24ರಂದು ಪುಣೆಯಿಂದ ಬೆಂಗಳೂರಿಗೆ ಹೋಗಬೇಕಿದ್ದ ವಿಮಾನವೂ ವಿಳಂಬವಾಗಿದೆ. ಇದರಿಂದ ಪ್ರಯಾಣಿಕರಿಗಾದ ತೊಂದರೆಗೆ ಕ್ಷಮೆಯಾಚಿಸುತ್ತೇವೆ ಎಂದು ಇಂಡಿಗೋ ವಿಮಾನಯಾನ ಸಂಸ್ಥೆ ಬರೆದುಕೊಂಡಿದೆ. 

click me!