BBK11: ಸ್ವರ್ಗ ನರಕದ ಮಧ್ಯೆ ಜಗದೀಶ್ ಕನ್ನಿಂಗ್ ಆಟ, ನರಕವಾಸಿಗಳಿಗೆ ತಿಳಿಯಿತು ವಕೀಲರ ಗುಟ್ಟು!

By Gowthami K  |  First Published Oct 1, 2024, 10:16 PM IST

ಬಿಗ್ ಬಾಸ್ ಮನೆಯ ಎರಡನೇ ದಿನವೂ ನಿಯಮಗಳನ್ನು ಪಾಲಿಸುವ ವಿಚಾರದಲ್ಲಿ ಸ್ಪರ್ಧಿಗಳ ನಡುವೆ ವಾಗ್ವಾದ ನಡೆಯಿತು. ಜಗದೀಶ್ ಸ್ವರ್ಗ ನಿವಾಸಿಗಳ ಮಾಹಿತಿಯನ್ನು ನರಕ ನಿವಾಸಿಗಳಿಗೆ ರವಾನಿಸುತ್ತಿದ್ದಾರೆ ಎಂಬ ಅನುಮಾನ ಸ್ಪರ್ಧಿಗಳಲ್ಲಿ ಮೂಡಿದೆ.


ಎರಡನೇ ದಿನವೂ ಮನೆಯಲ್ಲಿ ರೂಲ್ಸ್ ಫಾಲೋ ಮಾಡುವ ಬಗ್ಗೆ ವಾಗ್ವಾದ ನಡೆಯಿತು. ಯಮುನಾ ಶ್ರೀನಿಧಿ , ರಂಜಿತ್ ಮತ್ತು ಗೋಲ್ಡ್ ಸುರೇಶ್ ಮಧ್ಯೆ ವಾದವಾಯ್ತು. ಆದ್ರೂ ರಾತ್ರಿ ಮಲಗುವ ಸಮಯದಲ್ಲಿ ಲಾಯರ್ ಜಗದೀಶ್ ಪಾತ್ರೆ ತೊಳೆಯಲು ಹೋದರು. ಇದಕ್ಕೆ ಯುಮುನಾ ವಿರೋಧ ವ್ಯಕ್ತಪಡಿಸಿದರು. ಈಗಾಗಲೇ ತಪ್ಪು ಮಾಡಿ ಮನೆಗೆ ಬಂದಿರುವ ಗ್ರಾಸರಿಗಳಲ್ಲಿ ಕೆಲವನ್ನು ಬಿಗ್‌ಬಾಸ್‌ ತೆಗೆದುಕೊಂಡು ಹೋಗಿರುವುದುನ್ನು ನೆನಪಿಸಿದರು.

ಜಗದೀಶ್ ಸ್ವರ್ಗ ನಿವಾಸಿಗಳ ಮಾತುಕತೆಯನ್ನು ತೆಗೆದುಕೊಂಡು ಹೋಗಿ ನರಕ ನಿವಾಸಿಗಳಿ ಬಳಿ ಊದುತ್ತಿದ್ದಾರೆಂದು ಎಲ್ಲರೂ ಮಾತನಾಡಿಕೊಂಡರು.  ಇದನ್ನು ಸ್ವರ್ಗ ನಿವಾಸಿಗಳಲ್ಲಿ ಎಲ್ಲರೂ ಅರ್ಥ ಮಾಡಿಸಲು ಪ್ರಯತ್ನಿಸಿದರು. ಭವ್ಯಾ ಅವರು ಕ್ಲಾಸ್ ತೆಗೆದುಕೊಂಡರು. ಆದರೆ  ಜಗದೀಶ್ ಇದು ಗೇಮ್ ಎಂದರು. ಅವರು ತೆಗೆದುಕೊಳ್ಳುತ್ತಾರೆ ನೀವು ಯಾಕೆ ತೆಗೆದುಕೊಳ್ಳುತ್ತಿಲ್ಲ ಎಂದರು. ಇನ್ನು ಒಂದು ಕಡೆ ಸ್ವರ್ಗ ನಿವಾಸಿಗಳು ಲಾಯರ್ ಜಗದೀಶ್   ಹೋಗಿ ನರಕ ನಿವಾಸಿಗಳಿಗೆ ಹೇಳುತ್ತಾರೆ ಎಂಬ ಕಾರಣಕ್ಕೆ ಅವರ ಎದುರುಗಡೆ ಕೆಲ ವಿಚಾರವನ್ನು ಮಾತನಾಡುತ್ತಿಲ್ಲ.

Tap to resize

Latest Videos

undefined

ಬಿಗ್‌ಬಾಸ್‌ ಮನೆಯಲ್ಲಿ ಕಳ್ಳ, ಪೊಲೀಸ್‌, ಚಿನ್ನ, ಲಾಯರ್‌: ಈ ಸೀಸನ್‌ ಒಂದು ಸಿನಿಮಾ!

ಕ್ಯಾಮರಾ ಮುಂದೆ ಬಂದ ಲಾಯರ್ ಜಗದೀಶ್, ನಾನು ನನ್ನ ಟೀಂ ಜೊತೆಗೆ ಮೈಂಡ್ ಗೇಮ್ ಆಡುತ್ತೇನೆ. ಅವರು ತುಂಬಾ ನನ್ನ ಜೊತೆಗೆ ಆಟ ಆಡುತ್ತಿದ್ದಾರೆ. ನಾನು ಫರ್ಮಾಮೆನ್ಸ್ ನೀಡಬೇಕು. ಅದು ಬಿಟ್ಟು ಬೇರೆ ಏನೂ ಇಲ್ಲ. ಬಿಗ್‌ ಬಾಸ್ ಅನ್ನು ಮಾಸ್‌ ಮಾಡಬೇಕು ಬಿಟ್ಟು ಬೇರೆ ಏನೂ ಇಲ್ಲ ನನ್ನ ಪ್ರಕಾರ  ನಾನು ಕ್ಲೀಯರ್‌ ಆಗಿ ಗೇಮ್ ಆಡುತ್ತಿದ್ದೇನೆ ಎಂದರು.

ಇತ್ತ ನರಕದಲ್ಲಿರುವ ಸ್ಪರ್ಧಿ ಅನುಷಾ, ಚೈತ್ರಾ ಮತ್ತು ಮೋಕ್ಷಿತಾ ಜಗದೀಶ್ ಬಗ್ಗೆ ಮಾತನಾಡಿಕೊಂಡು ಹೇಳಿ ಕೇಳಿ ಅವರು ಕ್ರಿಮಿನಲ್‌ ಲಾಯರ್ , ಅವರು ನಮ್ಮ ಮೈಂಡ್‌ ಡೈವರ್ಟ್ ಮಾಡುತ್ತಿದ್ದಾರೆ. ದಿಕ್ಕು ತಪ್ಪಿಸುತ್ತಾರೆ. ನಮ್ಮ ವೀಕ್‌ ನೆಸ್‌ ತಿಳಿದುಕೊಳ್ಳಲು ಹೀಗೆ ಮಾಡುತ್ತಿದ್ದಾರೆ ಎಂದು ಮಾತನಾಡಿಕೊಂಡರು. ಹೀಗಾಗಿ ಲಾಯರ್ ಜಗದೀಶ್ ಸ್ವರ್ಗ ನಿವಾಸದಲ್ಲಿ ಏನು ನಡೆಯುತ್ತದೆ ಎಲ್ಲವನ್ನು ನರಕ ನಿವಾಸಿಗಳ ಬಳಿ ಹೇಳುತ್ತಿದ್ದಾರೆ. ಇದು ಈಗ ನರಕದಲ್ಲಿರುವರಿಗೂ ಅರ್ಥವಾಗತೊಡಗಿದೆ. 

ಇನ್ನು ಅನುಷಾ ಹಾಗೂ ಶಿಶಿರ್ ಅವರನ್ನು ಮನೆ ಕ್ಲೀನ್ ಮಾಡಲು ಬಿಗ್‌ಬಾಸ್  ನರಕವಾಸಿಗಳು ಆರಿಸಿದರು. ಇತ್ತ ಮಾನಸ ಮತ್ತು ಚೈತ್ರಾ ಮಧ್ಯೆ ಧ್ಯಾನದ ವಿಚಾರದಲ್ಲಿ ಜಗಳಗಳು  ನಡೆಯಿತು. ನಮ್ಮಲ್ಲೂ ಒಗ್ಗಟ್ಟು ಕಡಿಮೆಯಾಗುತ್ತಿದೆ ಎಂದು ಗೋಲ್ಡ್ ಸುರೇಶ್ ಮತ್ತು ಮಾನಸ ಮಾತನಾಡಿಕೊಂಡರು. ಮಾತನಲ್ಲಿ ಚೈತ್ರನಿಗೆ ಮನೆ ಕಟ್ಟಿಕೊಟ್ಟರೆ ಎಲ್ಲವೂ ಸರಿ ಆಗುತ್ತದೆ ಎಂದು ಗೋಲ್ಡ್ ಸುರೇಶ್ ಹೇಳಿದರು.

ಸೆಟ್‌ನಲ್ಲಿ ಪ್ರಭಾಸ್‌ರನ್ನ ಅನುಷ್ಕಾ ಶೆಟ್ಟಿ ಏನಂತ ಕರೀತಿದ್ರು? ನಟ ನಾಚಿ ನೀರಾಗುತ್ತಿದ್ದುದು ಏಕೆ?

ಒಟ್ಟು 17 ಮಂದಿ ಸ್ಪರ್ಧಿಗಳು ಮನೆಯಲ್ಲಿದ್ದು,  ಸ್ವರ್ಗದಲ್ಲಿ, ಭವ್ಯಾ ಗೌಡ, ಯಮುನಾ, ಧನ್ ರಾಜ್, ಗೌತಮಿ, ಧರ್ಮ, ಜಗದೀಶ್, ತ್ರಿವಿಕ್ರಮ್, ಹಂಸಾ, ಐಶ್ವರ್ಯ ಮತ್ತು ಮಂಜು ಇದ್ದರೆ. ನರಕದಲ್ಲಿ ಅನುಷಾ ರೈ, ಶಿಶಿರ್, ಮಾನಸಾ, ಗೋಲ್ಡ್ ಸುರೇಶ್, ಚೈತ್ರಾ, ಮೋಕ್ಷಿತಾ ಮತ್ತು ರಂಜಿತಾ ಇದ್ದಾರೆ. ಸ್ವರ್ಗದಲ್ಲಿರುವವರಿಗೆ ಐಶಾರಾಮಿ ಸೌಲಭ್ಯಗಳಿದ್ದು, ನರಕದಲ್ಲಿರುವವರಿಗೆ ಸಾಮಾನ್ಯ ಜೀವನ ನಡೆಸಬೇಕಿದೆ. ಇನ್ನು ಈ ವಾರ ಮನೆಯಿಂದ ಹೊರ ಹೋಗಲು ಚೈತ್ರಾ ಕುಂದಾಪುರ ಮೊದಲ ದಿನ ನಾಮಿನೇಟ್ ಆಗಿದ್ದಾರೆ. ಎರಡನೇ ಹಂತದ ನಾಮಿನೇಟ್‌ ನಲ್ಲಿ ಗೌತಮಿ ಆ

click me!