Jan 5, 2024, 2:28 PM IST
ಇಡೀ ದೇಶವೇ ಚಾತಕ ಪಕ್ಷಿಯಂತೆ ಕಾಯ್ತಿರೋ ಆ ದಿನ. ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ(SriRamachandra)ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳಲಿರೋ ಆ ಕ್ಷಣ. ದೇಶದ ಇತಿಹಾಸದಲ್ಲಿ ಚರಿತ್ರೆ ಸೃಷ್ಠಿಸಲಿರೋ ದಿನ, ಆ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳೋದಕ್ಕೆ ಕೋಟಿ ಕೋಟಿ ರಾಮಭಕ್ತರು ಕಾಯ್ತಾ ಇದ್ದಾರೆ. ಎಲ್ಲರೂ ಶತಮಾನಗಳ ಕನಸು ನನಸಾಗ್ತಿರೋ ಸಂಭ್ರಮದಲ್ಲಿದ್ದಾರೆ. ಆದ್ರೆ ಆ ಸಂಭ್ರಮದ ಮಧ್ಯದಿಂದ ಎದ್ದು ನಿಂತಿದೆ ರಾಮಮಂದಿರ(Ram Mandir) ಉದ್ಘಾಟನೆಯ ಆಹ್ವಾನ ಪತ್ರಿಕೆ ವಿವಾದ. ಜನವರಿ 22ರಂದು ಅಯೋಧ್ಯೆಯಲ್ಲಿ(Ayodhya) ನಡೆಯಲಿರೋ ರಾಮಮಂದಿರ ಉದ್ಘಾಟನೆಯನ್ನು ಕಣ್ತುಂಬಿಕೊಳ್ಳಲು ಕಾಯ್ತಿರೋರು ಕೋಟಿ ಕೋಟಿ ಮಂದಿ. ಇವ್ರಲ್ಲಿ ಒಂದಷ್ಟು ಮಂದಿಗೆ ಆ ಕ್ಷಣವನ್ನು ನೇರವಾಗಿ, ಪ್ರತ್ಯಕ್ಷವಾಗಿ ನೋಡುವ ಭಾಗ್ಯ. ಸಾಧು ಸಂತರು, ಚಿತ್ರರಂಗ-ಕ್ರೀಡಾಕ್ಷೇತ್ರದ ಅತಿ ಗಣ್ಯರು, ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಸೇರಿದಂತೆ ಒಟ್ಟು 3 ಸಾವಿರ ಮಂದಿಯನ್ನು ಮಂದಿರ ಉದ್ಘಾಟನೆಗೆ ಆಹ್ವಾನಿಸಲಾಗಿದೆ. ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ, ಹನುಮ ಹುಟ್ಟಿದ ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಹ್ವಾನ ಪತ್ರಿಕೆ ನೀಡಿಲ್ಲ. ಇದು ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಮ ಮಂದಿರ ಉದ್ಘಾಟನೆಗೆ ಆಹ್ವಾನಿಸದೇ ಇರೋದಕ್ಕೆ ಸಿದ್ದು ಸಂಪುಟದ ಮಂತ್ರಿಗಳು ಈ ರೀತಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಇನ್ನು ಇದೇ ವಿಚಾರವಾಗಿ ಮಾತನಾಡಿರೋ ಕಾಂಗ್ರೆಸ್"ನ ಮಾಜಿ ಸಚಿವ ಎಚ್.ಆಂಜನೇಯ, ಸಿದ್ದರಾಮಯ್ಯನವರನ್ನು ರಾಮ ಮಂದಿರ ಉದ್ಘಾಟನೆಗೆ ಕರೆಯದೇ ಇದ್ದದ್ದು ಒಳ್ಳೇಯದೇ ಆಯ್ತು. ನಮಗೆ ಸಿದ್ದರಾಮಯ್ಯರೇ ರಾಮ ಎಂದಿದ್ದಾರೆ.
ಇದನ್ನೂ ವೀಕ್ಷಿಸಿ: BJP-JDS Alliance: ಮಂಡ್ಯ ರಣಕಣದಲ್ಲಿ ಜೆಡಿಎಸ್ ಅಲರ್ಟ್! ಮೈತ್ರಿ ವಿರುದ್ಧ ಸ್ಪರ್ಧೆಗೆ ಹಿಂದೇಟು..!