ಗಡಿಯಲ್ಲಿ ಕ್ಯಾತೆ ತೆಗೆದ ಚೀನಾ ಸೈನಿಕರ ಗ್ರಹಚಾರ ಬಿಡಿಸಿದ ಭಾರತ!

Dec 13, 2022, 11:30 PM IST

ನವದೆಹಲಿ (ಡಿ. 13): ಗಲ್ವಾನ್‌ನಲ್ಲಿ ಗಡಿ ಸಂಘರ್ಷ ನಡೆದ 30 ತಿಂಗಳ ಬಳಿಕ ಚೀನಾ ಮತ್ತೊಮ್ಮೆ ಕಾಲು ಕೆರೆದು ಜಗಳಕ್ಕೆ ಬಂದಿತ್ತು. ಆದರೆ, ಈ ಬಾರಿ ಭಾರತದ ಸೈನಿಕರು ಕೊಟ್ಟ ಏಟಿಗೆ ಚೀನಾದ ಸೈನಿಕರು ಏದುಸಿರು ಬಿಡುತ್ತಾ ದಿಕ್ಕಾಪಾಲಾಗಿದ್ದಾರೆ. ಯುದ್ಧೋನ್ಮಾದದಲ್ಲಿ ಬಂದಿದ್ದ ಚೀನಾ ಸೈನಿಕರಿಗೆ ಭಾರತದ ಸೈನಿಕರು ಮನಸೋಇಚ್ಛೆ ಥಳಿಸಿದ್ದಾರೆ.

ಅರುಣಾಚಲ ಪ್ರದೇಶದ ತವಾಂಗ್‌ ಭಾಗದಲ್ಲಿ ನಡೆದ ಈ ಘಟನೆ ರಾಷ್ಟ್ರ ರಾಜಕೀಯದಲ್ಲೂ ಸುದ್ದಿಯಾಗಿದೆ. ಮಂಗಳವಾರ ಇದೇ ವಿಚಾರ ಸಂಸತ್ತಿನಲ್ಲಿ ಪ್ರತಿಧ್ವನಿಸಿತು. ಚೀನಾ ವಿಚಾರದಲ್ಲಿ ಕೇಂದ್ರ ಸರ್ಕಾರ ಮೃದುವಾಗಿ ವರ್ತಿಸುತ್ತಿದೆ. ಚೀನಾಗೆ ಹೆದರಬೇಡಿ ಎಂದು ಕಾಂಗ್ರೆಸ್‌ ತರಾಟೆಗೆ ತೆಗೆದುಕೊಂಡಿದೆ. ಇನ್ನೊಂದೆಡೆ ಬಿಜೆಪಿ ಕೂಡ ಚೀನಾ ಹಾಗೂ ಕಾಂಗ್ರೆಸ್‌ನ ಸಂಬಂಧಗಳನ್ನು ಕೆದಕಿ ಟೀಕೆ ಮಾಡಿದೆ.

ಅರುಣಾಚಲ ಪ್ರದೇಶ ಹೊಡೆದಾಟದಲ್ಲಿ ಭಾರತದ ಕನಿಷ್ಠ 20 ಸೈನಿಕರಿಗೆ ಗಾಯ!

ತವಾಂಗ್‌ ಪ್ರದೇಶದಲ್ಲಿ ಚೀನಾದ ಪಿಎಲ್‌ಎ ಆರ್ಮಿ ಚಕಮಕಿಗೆ ಬಂದಿದ್ದು ಮಾತ್ರವಲ್ಲದೆ, ವಾಯುಗಡಿ ಉಲ್ಲಂಘನೆ ಮಾಡುವ ಪ್ರಯತ್ನವನ್ನೂ ಮಾಡಿತ್ತು. ಆದರೆ, ಭಾರತದ ವಾಯುಸೇನೆ ತನ್ನ ಸುಖೋಯ್‌ ಜೆಟ್‌ಗಳನ್ನು ಬಳಸಿಕೊಂಡು ಚೀನಾದ ಜೆಟ್‌ಗಳ ಪ್ರಯತ್ನವನ್ನು ವಿಫಲ ಮಾಡಿದೆ.