ಫ್ರಾನ್ಸ್ ರಾಯಭಾರಿ ಅಧಿಕಾರಿಗಳಿಂದ ಕನ್ನಡದಲ್ಲಿ ದೀಪಾವಳಿ ಶುಭಾಶಯ!

Nov 15, 2020, 10:14 PM IST

ದೀಪಾವಳಿ ಹಬ್ಬ ಆಚರಿಸುತ್ತಿರುವ ಭಾರತೀಯರಿಗೆ ದೇಶ ವಿದೇಶಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಈ ಬಾರಿಯ ವಿಶೇಷ ಅಂದರೆ ಫ್ರಾನ್ಸ್ ರಾಯಭಾರ ಕಚೇರಿ ಅಧಿಕಾರಿಗಳು ಭಾರತೀಯರಿಗೆ ದೀಪಾವಳಿ ಶುಭಾಶಯ ಹೇಳಿದ್ದಾರೆ. ಕೌನ್ಸಲೇಟ್ ಜನರಲ್ ಆಫ್ ಬೆಂಗಳೂರು ಅಧಿಕಾರಿ ಕನ್ನಡದಲ್ಲೇ ಶುಭಾಶಯ ಕೋರಿದ್ದಾರೆ. ಇನ್ನು ಮರಾಠಿ, ಬಂಗಾಳಿ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ಫ್ರಾನ್ಸ್ ಕೌನ್ಸಲೇಟ್ ಜನರಲ್ ಶುಭಾಶಯ ಹೇಳಿದ್ದಾರೆ.