ಬೇಬಿಬಂಪ್ ಫೋಟೋ ಹಂಚಿಕೊಂಡ ಮಿಲನ ನಾಗರಾಜ್; ಅಭಿಮಾನಿಗಳಿಂದ ಬಂತು ಹೃದಯದ ಸಂದೇಶ

First Published | May 17, 2024, 6:44 PM IST

ನಟಿ ಮಿಲನ ನಾಗರಾಜ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಎರಡು ಸುಂದರ ಮತ್ತು ಮುದ್ದಾದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಚಂದನವನದ ಚೆಲುವೆ ಮಿಲನ ನಾಗರಾಜ್ (Milana Nagaraj) ಸುಂದರ ಬೇಬಿ ಬಂಪ್ ಫೋಟೋಗಳನ್ನು (Babybump Photos) ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಗೋಲ್ಡನ್  ಕಲರ್ ಕುರ್ತಾ, ಕೆಂಪು ದುಪ್ಪಟ್ಟ ಧರಿಸಿರುವ ಕೃಷ್ಣನ ಮಡದಿ ಸುಂದರವಾಗಿ ಕಾಣುತ್ತಿದ್ದಾರೆ.

ಕಟ್ಟಡವೊಂದರ ಬಾಲ್ಕನಿಯಲ್ಲಿ ನಿಂತಿರುವ ಮಿಲನಾ ಫೋಟೋಗೆ ಪೋಸ್ ನೀಡಿದ್ದಾರೆ. ತದೇಕಚಿತ್ತದಿಂದ ಕಟ್ಟಡದ ಮೇಲ್ಭಾಗದಿಂದ ನಗರದ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿರೋದನ್ನು ಫೋಟೋದಲ್ಲಿ ಕಾಣಬಹುದು. ಒಟ್ಟು ಎರಡು ಫೋಟೋಗಳನ್ನು ಮಿಲನ್ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಈ ಫೋಟೋಗಳನ್ನು ಅಭಿಮಾನಿಗಳು ತಮ್ಮ ಸೋಶಿಯಲ್ ಮೀಡಿಯಾ ಖಾತಯಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.

Tap to resize

ಈ ಪೋಸ್ಟ್‌ಗೆ ಅಭಿಮಾನಿಗಳು ಕಮೆಂಟ್‌ನಲ್ಲಿ ಹಾರ್ಟ್ ಸಿಂಬಲ್ ಹಾಕಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಗಮನ ನೀಡಿ, ಹೆಚ್ಚು ಪ್ರವಾಸ ಮಾಡಬೇಡಿ ಎಂದು ಕೆಲವರು ಬರೆದ್ರೆ, ನಾವು ಜೂನಿಯರ್ ಕೃಷ್ಣನಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ. ಬಹುತೇಕರು ಕ್ಯೂಟ್ ಫೋಟೋ, ತುಂಬಾ ಮುದ್ದಾಗಿ ಕಾಣಿಸುತ್ತಿದ್ದೀರಿ ಎಂದಿದ್ದಾರೆ.

ಎರಡು ದಿನಗಳ ಹಿಂದೆ  ಬೇಬಿಮೂನ್ ಪ್ರವಾಸದ ಎಲ್ಲಾ ಫೋಟೋಗಳ ವಿಡಿಯೋವನ್ನು ಮಿಲನ ಪೋಸ್ಟ್ ಮಾಡಿದ್ದರು. ಪತಿ ಸೇರಿದಂತೆ ಕುಟುಂಬಸ್ಥರ ಜೊತೆಗೆ ಕಳೆದ ಸುಂದರ ಕ್ಷಣಗಳು ವಿಡಿಯೋದಲ್ಲಿ ಸೆರೆಯಾಗಿತ್ತು. ಈ ವಿಡಿಯೋದಲ್ಲಿ ಅಲ್ಲಿಯ ಸ್ಥಳೀಯ ಸಂಸ್ಕೃತಿಯನ್ನು ತೋರಿಸಲಾಗಿತ್ತು. ಈ ವಿಡಿಯೋಗೆ 90 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದೆ. 

ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಸ್ಯಾಂಡಲ್‌ವುಡ್ ಜನಪ್ರಿಯ ಜೋಡಿಯಲ್ಲಿ ಒಬ್ಬರಾಗಿದ್ದಾರೆ. ಇತ್ತೀಚೆಗಷ್ಟೇ  ಬೇಬಿ ಮೂನ್ ಎಂಜಾಯ್ ಮಾಡಲು ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಥೈಲ್ಯಾಂಡ್‌ಗೆ ತೆರಳಿದ್ದರು. ವಿದೇಶ ಪ್ರವಾಸದ ಫೋಟೋಗಳನ್ನು ಮಿಲನ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. 
 

ಮಿಲನ ಮತ್ತು ಡಾರ್ಲಿಂಗ್ ಕೃಷ್ಣ ಜೊತೆಯಾಗಿ ಲವ್ ಮಾಕ್ಟೇಲ್ ಸಿನಿಮಾದಲ್ಲಿ ನಟಸಿದ್ದರು. ಈ ಸಿನಿಮಾ ಪ್ರತಿ ಮನೆಯನ್ನು ತಲುಪಿತ್ತು. ತೆರೆಯ ಮೇಲಿನ ಈ ಜೋಡಿ ರಿಯಲ್ ಲೈಫ್‌ನಲ್ಲಿ ಒಂದಾಗಲಿ ಎಂದು ಹಾರೈಸಿದ್ದರು. ಇದಾದ ಬಳಿಕ ಈ ಚಿತ್ರದ ಎರಡನೇ  ಭಾಗ ಸಹ ರಿಲೀಸ್ ಆಗಿತ್ತು. ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ 2021ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು.

Latest Videos

click me!