ಶಾರುಖ್​, ಕರಣ್​ ಜೋಹರ್​ ಸಲಿಂಗಕಾಮಿಯೆ? ವಿದೇಶಗಳ ಸಭೆಯ ಶಾಕಿಂಗ್​ ಹೇಳಿಕೆ ನೀಡಿದ ಗಾಯಕಿ ಸುಚಿತ್ರಾ

By Suchethana D  |  First Published May 17, 2024, 6:37 PM IST

ಶಾರುಖ್​ ಖಾನ್​ ಮತ್ತು ಕರಣ್​ ಜೋಹರ್​ ಅವರು ಸಲಿಂಗಕಾಮಿ ಎಂದು ಶಾಕಿಂಗ್​ ಹೇಳಿಕೆ ಕೊಟ್ಟಿದ್ದಾರೆ ಖ್ಯಾತ ಗಾಯಕಿ ಸುಚಿತ್ರಾ. ಅವರು ಹೇಳಿದ್ದೇನು?
 


ಸ್ಟ್ಯಾಂಡ್​ ಅಪ್​ ಕಮೀಡಿಯನ್​ ಕಾರ್ತಿಕ್​ ಕುಮಾರ್​ ಪತ್ನಿ ಗಾಯಕಿ ಸುಚಿತ್ರಾ ಅವರ ಹೆಸರು ಕೆಲ ವರ್ಷಗಳ ಹಿಂದೆ ಭರ್ಜರಿ ಸದ್ದು ಮಾಡಿತ್ತು. ಇದಕ್ಕೆ ಕಾರಣ, ಸುಚೀ ಲೀಕ್ಸ್ (suchi leaks) ಹೆಸರಿನಲ್ಲಿ,  ಕೆಲ ವರ್ಷಗಳ ಹಿಂದೆ ನಟ ಧನುಷ್, ಸಂಗೀತ ನಿರ್ದೇಶಕ ಅನಿರುದ್ಧ್​ ರವಿಚಂದರ್, ಆಂಡ್ರಿಯಾ, ಸಂಚಿತಾ ಶೆಟ್ಟಿ ಸೇರಿದಂತೆ ಹಲವು ತಾರೆಗಳ ಖಾಸಗಿ ವಿಡಿಯೋ, ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದೇ ಸಂದರ್ಭದಲ್ಲಿ ಕಾರ್ತಿಕ್ ಕುಮಾರ್ ಮತ್ತು ಧನುಷ್ ಅವರ ವೈಯಕ್ತಿಕ ಫೋಟೋಗಳನ್ನು ಸುಚಿಲೀಕ್ಸ್ ಹೆಸರಿನಲ್ಲಿ ಬಿಡುಗಡೆಯಾಗಿತ್ತು. ಇದೀಗ ಮತ್ತೆ ಅದೇ ವಿಷಯವಾಗಿ ಸುಚಿತ್ರಾ ಮಾತನಾಡಿದ್ದು ಹಲ್​ಚಲ್​ ಸೃಷ್ಟಿಸಿದ್ದಾರೆ. ತಮ್ಮ ಮಾಜಿ ಪತಿ ಕಾರ್ತಿಕ್​  ಕುಮಾರ್ ಸಲಿಂಗಕಾಮಿ ಎಂದು ಹೇಳಿರುವ ಗಾಯಕಿ ಸುಚಿತ್ರಾ ಇದೀಗ ಕಾರ್ತಿಕ್​ ಶಾರುಖ್​ ಖಾನ್​ ಮತ್ತು ಕರಣ್​ ಜೋಹರ್​ ಜೊತೆ ಸಲಿಂಗಕಾಮಿ ಸಭೆ ನಡೆಸಿದ್ದ ಶಾಕಿಂಗ್​ ಹೇಳಿಕೆ ನೀಡಿದ್ದಾರೆ. 
  
ನನ್ನ  ಮಾಜಿ ಪತಿ ಕಿಂಗ್ ಖಾನ್ ಶಾರುಖ್​ ಮತ್ತು 51 ವರ್ಷದ ನಿರ್ದೇಶಕ ಕರಣ್​ ಜೊತೆ ಲಂಡನ್‌ನಲ್ಲಿ "ಸಲಿಂಗಕಾಮಿ ಸಭೆ" ನಡೆಸಿದ್ದಾರೆ ಎಂದು ಸುಚಿತ್ರಾ ಹೇಳಿದ್ದಾರೆ! ಶಾರುಖ್ ಮತ್ತು ಕರಣ್ ಸಾಮಾನ್ಯವಾಗಿ ಸಲಿಂಗಕಾಮಿ ಸಭೆಗಳಿಗೆ ಹೋಗುತ್ತಾರೆ. ಸಲಿಂಗಕಾಮವು  ಕಾನೂನುಬಾಹಿರವಲ್ಲದ ದೇಶಗಳಿಗೆ ಇವರು ವಿಹಾರಕ್ಕೆ ಹೋಗುತ್ತಾರೆ ಎಂದು ಸುಚಿತ್ರಾ ಹೇಳಿದ್ದಾರೆ. ಕೆಲ ವರ್ಷಗಳ ಹಿಂದೆ  ವಿವಾದಾತ್ಮಕ ಲೇಖಕಿ ತಸ್ಲೀಮಾ ನಸ್ರಿನ್ ಕೂಡ ಶಾರುಖ್​ ಖಾನ್​ ವಿರುದ್ಧ ಇದೇ ಆರೋಪ ಮಾಡಿದ್ದರು. ಟ್ವಿಟರ್​ನಲ್ಲಿ ಈ ಬಗ್ಗೆ ಅವರು ಬರೆದುಕೊಂಡಿದ್ದರು.  ಶಾರುಖ್ ಖಾನ್ ಸಲಿಂಗಿ ಎಂದು ಹಲವರು ಹೇಳಿದ್ದನ್ನು ನಾನು ಕೇಳಿದ್ದೇನೆ ಎಂದಿದ್ದರು. ಇನ್ನು ಕರಣ್​ ಜೋಹರ್​ ಅವರು ಸಲಿಂಗಿ ಎನ್ನುವ ಬಗ್ಗೆ ಹಲವರು ಪ್ರಶ್ನೆ ಕೇಳಿದ್ದುಂಟು. ಇದರ ನಡುವೆಯೇ ಸುಚಿತ್ರಾ ಅವರು ಮಾಡಿರುವ ಈ ಆರೋಪ ಬಾಲಿವುಡ್​ನಲ್ಲಿ ಹಲ್​ಚಲ್​ ಸೃಷ್ಟಿಸಿದೆ. 

ಗಂಡನನ್ನೇ ಸಲಿಂಗ ಕಾಮಿ ಎಂದ ಗಾಯಕಿ, ನಾನು ಆಗಿದ್ರೆ.. ಎಂದ ನಟ ಕಾರ್ತಿಕ್

Tap to resize

Latest Videos

ತಮಿಳು ನಟ ಧನುಷ್ ಹಾಗೂ ರಜನಿಕಾಂತ್ ಪುತ್ರಿ ಐಶ್ವರ್ಯ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿರುವುದಕ್ಕೆ ಸಂಬಂಧಿಸಿದಂತೆ ಮೊನ್ನೆ ತಾನೇ ಮಾತನಾಡಿದ್ದ ಸುಚಿತ್ರಾ ಈ ವಿಷಯದ ಮಧ್ಯೆ ತಮ್ಮ ಮಾಜಿ ಪತಿ ಕಾರ್ತಿಕ್​ ಕುಮಾರ್​ ಸಲಿಂಗಿ ಎಂದು ಹೇಳಿಕೊಂಡಿದ್ದರು. ಧನುಷ್​ ಜೊತೆ ಅವರು ಸಂಬಂಧ ಹೊಂದಿದ್ದಾರೆ ಎಂದಿದ್ದರು.   'ಯಾರಿ ನೀ ಮೋಹಿನಿ' ಚಿತ್ರದ ನಂತರ ಧನುಷ್ ಹಾಗೂ ತಮ್ಮ ಮಾಜಿ ಪತಿ ಕಾರ್ತಿಕ್ ಕುಮಾರ್ ಜೊತೆ ಆತ್ಮೀಯ ಸ್ನೇಹಿತರಾಗಿದ್ದರು. ಇವರಿಬ್ಬರೂ ಒಂದೇ ರೂಮಿನಲ್ಲಿ ಏನು ಮಾಡುತ್ತಿದ್ದರು ಎನ್ನುವುದನ್ನು ಪ್ರಶ್ನಿಸಬೇಕಿದೆ. ಇಬ್ಬರೂ ಸಿನಿಮಾ ಬಿಟ್ಟು ಬೇರೆ ಏನೇನೊ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ಒಮ್ಮೆ ಸುಮಾರು  ಬೆಳಗಿನ  ಮೂರು ಗಂಟೆಗೆ ಕಾರ್ತಿಕ್​ ಮನೆಗೆ ಬಂದಿದ್ದರು. ಅವರ  ಕಾಲು ನಡುಗುತ್ತಿತ್ತು. ಸಿಗರೇಟ್ ಸೇದುತ್ತಿದ್ದ. ಆಗಲೇ, ಧನುಷ್ ಕಾರ್ತಿಕ್‌ಗೆ ಅಸಹ್ಯಕರ ಮೆಸೇಜ್‌ಗಳನ್ನು ಕಳುಹಿಸಿದ್ದ. ಅದರಿಂದ ಅವರು ಸಲಿಂಗಕಾಮಿ ಎನ್ನುವುದು ತಿಳಿಯುತ್ತದೆ ಎಂದಿದ್ದರು. 

ಕಾರ್ತಿಕ್​  100% ಸಲಿಂಗಕಾಮಿ. ಯಾರಿಗೂ ತಿಳಿಯದಂತೆ ಸಲಿಂಗಕಾಮಿಯಾಗಿ ವಿಭಿನ್ನ ಜೀವನ ನಡೆಸುತ್ತಿದ್ದರು. ಮದುವೆಯಾದ 10 ವರ್ಷಗಳ ನಂತರ ನಾನು ಅದನ್ನು ಅರಿತುಕೊಂಡೆ. ಮಕ್ಕಳಾಗಿಲ್ಲ ಎಂದು  ವೈದ್ಯರ ಬಳಿ ಹೋದಾಗ ನನಗೆ ಅರಿವಾಯಿತು. ಅವರು ಪುರುಷರೊಂದಿಗೆ ಸುತ್ತಾಡುತ್ತಿದ್ದರು, ಧನುಷ್​ ಜೊತೆ ಇರುತ್ತಿದ್ದರು ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕಾರ್ತಿಕ್​ ಅವರು ನಾನು ಸಲಿಂಗಿ ಎಂದು ಅವಳು ಹೇಳಿದ್ದರೆ ಅದಕ್ಕೆ ನಾನು ಹೆಮ್ಮೆ ಪಡುತ್ತೇನೆ ಎಂದಿದ್ದರು.  ಆದರೆ ಇದೀಗ ಶಾರುಖ್​ ಖಾನ್​ ಹೆಸರು ಎಳೆದು ತಂದಿರುವುದಕ್ಕೆ ಶಾರುಖ್​ ಫ್ಯಾನ್ಸ್​ ಗರಂ ಆಗಿದ್ದಾರೆ. ನಿಮಗೆ ನಾಚಿಕೆಯಾಗಬೇಕು.  ಶಾರುಖ್​ ಮೂರು ಮಕ್ಕಳ ತಂದೆ. ಈಗ ಇಂಥದ್ದರಲ್ಲಿ ಅವರ ಹೆಸರನ್ನು ಎಳೆದು ತಂದಿರುವುದು ಸರಿಯಲ್ಲ ಎಂದು ಸುಚಿತ್ರಾ ವಿರುದ್ಧ ಕಿಡಿ ಕಾರುತ್ತಿದ್ದಾರೆ.   

ಶಾರುಖ್​ ಖಾನ್​ ಸಾಯಲ್ಲ... ನಾವು ಮಾತ್ರ ಸಾಯ್ತೇವಾ ಎಂದ ಮಕ್ಕಳು! ಶಾಕಿಂಗ್​ ವಿಡಿಯೋ ವೈರಲ್​

click me!